ಬ್ರಿಗೇಡ್ ನಮೋ ವಿಜಯೋತ್ಸವ
ಕೋಲಾರ,ಜೂ,೧೧- ಭಾರತದಲ್ಲಿ ಎರಡು ಭಾರಿ ಪ್ರಧಾನಿಯಾಗಿ ಯಶಸ್ವಿ ಆಡಳಿತ ನಿರ್ವಹಿಸಿದ ನರೇಂದ್ರ ಮೋದಿಯವರು ಮೂರನೇ ಭಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರದ ಸಂಭ್ರದ ಜೂತೆಗೆ ಹ್ಯಾಟ್ರಿಕ್ ಸಾಧನೆ ಮಾಡಿರುವುದಕ್ಕೆ ಹರ್ಷ ವ್ಯಕ್ತ ಪಡೆಸಿರುವ ತಾಲ್ಲೂಕಿನ ನರಸಾಪುರ ಗ್ರಾಮದ ಬಿಜೆಪಿ ಮತ್ತು ಜೆ.ಡಿ.ಎಸ್. ಕಾರ್ಯಕರ್ತರು ಗ್ರಾಮದಲ್ಲಿ ಮೋದಿ ಕಟೌಟ್ ಮುಂದೆ ವಿಜಯೋತ್ಸವ ಆಚರಿಸಿದರು,
ಪಟಾಕಿಗಳನ್ನು ಸಿಡಿಸಿ ಸಹಿ ಹಂಚುವ ಮೂಲಕ ಸಂಭಮಿಸಿದ ಬ್ರಿಗೇಡ್ ನಮೋ ಅಭಿಮಾನಿಗಳು ಕೆ.ಯು.ಡಿ.ಎ ನಿಕಟ ಪೂರ್ವ ಸದಸ್ಯ ಆರ್.ಮುರುಗೇಶ್,ಮುಖಂಡರಾದ ಟಿ.ನಾಗರಾಜ್, ಚಂದ್ರಶೇಖರಯ್ಯ, ಮಂಜುನಾಥ್, ಉಮೇಶ್, ಡಿ.ಆರ್.ಮಂಜುನಾಥ್, ಶೆಟ್ಟಪ್ಪ, ಸೋಮಣ್ಣ, ಕೃಷ್ಣಪ್ಪ, ಹರೀಶ್, ಮಲ್ಲಿಕಾರ್ಜುನ್, ದಿಲೀಪ್, ರೊಹೀತ್ ಹಾಗೂ ಇತರರು ಹಾಜರಿದ್ದರು,