ಪದವಿ ಪ್ರದಾನ ಕಾರ್ಯಕ್ರಮ
ಹುಬ್ಬಳ್ಳಿ, ಜೂ11: ನಗರದ ಜೈನ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಕೊನೆಯ ವರ್ಷದ ವಿಧ್ಯಾರ್ಥಿಗಳಿಗೆ ಬಿಇ ಪದವಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿರ್ದೇಶಕ, ಹಿರಿಯ ರಂಗ ಕಲಾವಿದ ಹಾಗೂ ನಿವೃತ್ತ ಆದಾಯ ತೆರಿಗೆ ಆಯುಕ್ತರಾದ ಎಸ್.ಎನ್. ಸೇತುರಾಮ್, ಗೌರದ ಅಧ್ಯಕ್ಷರಾಗಿ ಡಾ. ಸಂಗಮನಾಥ ಲೋಕಾಪುರ, ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈನ್ ಇಂಜನೀಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಶಾಂತ್ ಬಣಕಾರ್ ವಹಿಸಿಕೊಂಡಿದ್ದರು,
ಇದೆ ಸಂದರ್ಭದಲ್ಲಿ ಪ್ರಾಂಶುಪಾಲರು ಮಾತನಾಡಿ ನಮ್ಮ ಕಾಲೇಜು ಪ್ರಸ್ತುತ 7ವರ್ಷ ಪೂರೈಸಿದ್ದು 4ನೇ ವರ್ಷದ ಹೊರಹೋಗುತ್ತಿರುವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಮತ್ತು ಫಲಿತಾಂಶವನ್ನು ತಿಳಿಸಿ ಮುಂದಿನ ಜೀವನಕ್ಕೆ ಶುಭಾಶಯ ಕೋರಿದರು.
ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ , ಆರ್ಟಿಫಿಷಿಯಲ್ ಇಂಟಲಿಜನ್ಸ್ ಆಂಡ್ ಮಷಿನ್ ಲರ್ನಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್, ಸಿವಿಲ್ ಇಂಜಿನಿಯರಿಂಗ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಎಸ್. ಬಿ. ಹೆಗಡೆ, ಪೆÇ್ರ. ಮಹೇಶಕುಮಾರ್ ಪಾಟೀಲ್ ಹಾಗೂ ಪೆÇ್ರ. ಪ್ರಸನ್ನ ಪಟ್ಟಣಶೆಟ್ಟಿ,ಡಾ. ಆದರ್ಶ್, ಪೆÇ್ರೀ ನವೀನ್ ಶಿರೂರು, ಡಾ. ಭರತ್ ಕುಮಾರ್, ಉಪಸ್ಥಿತರಿದ್ದರು.