ಗಾಣಿಗರ ಸಂಘದಿಂದ ಪಟಾಕಿ ಸಿಡಿಸಿ ಸಂಭ್ರಮ
ಮಾಲೂರು, ಜೂ. ೧೧- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೆಹಲಿಯ ರಾಷ್ಟ್ರಪತಿ ಭವನದ ಆವರಣದಲ್ಲಿ ಮೂರನೇ ಬಾರಿಗೆ ಸತತವಾಗಿ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಎನ್‌ಡಿಎ ಆಡಳಿತಕ್ಕೆ ಶುಭ ಹಾರೈಸಿ ತಾಲೂಕು ಗಾಣಿಗರ ಸಂಘ ಹಾಗೂ ಗಾಣಿಗರ ಯುವಕ ಸಂಘದ ವತಿಯಿಂದ ಪಟ್ಟಣದ ಮುಖ್ಯ ರಸ್ತೆಯ ಮಾರಿಕಾಂಬ ದ್ವಾರದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಎಸ್‌ಎಂ ರಮೇಶ್, ದೇಶದಲ್ಲಿ ಪ್ರಧಾನ ಮಂತ್ರಿ ವಿಶ್ವ ಕಂಡ ಮಾಹಾನ್ ಗುರು ನರೇಂದ್ರ ಮೋದಿಯವರು ಹತ್ತು ವರ್ಷಗಳ ಆಡಳಿತದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಜನಪರ ಯೋಜನೆಗಳನ್ನು ಮೆಚ್ಚಿರುವ ಜನಸಾಮಾನ್ಯರು ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಬೆಂಬಲಿಸಿದ್ದು ಮೂರನೇ ಬಾರಿಗೆ ಸತತವಾಗಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದು ಮುಂದಿನ ಐದು ವರ್ಷಗಳ ಅಧಿಕಾರವಧಿ ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು.
ತಾಲೂಕು ಗಾಣಿಗರ ಯುವಕ ಸಂಘದ ಅಧ್ಯಕ್ಷ ಕಡತೂರು ನಾರಾಯಣಸ್ವಾಮಿ ಮಾತನಾಡಿ, ದೇಶ ಕಂಡ ಶ್ರೇಷ್ಠ ಪ್ರಧಾನ ಮಂತ್ರಿಗಳಲ್ಲಿ ನರೇಂದ್ರ ಮೋದಿಯವರು ಒಬ್ಬರಾಗಿದ್ದಾರೆ. ಹತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ತಮ್ಮ ಸ್ವಾರ್ಥ ಹಾಗೂ ವೈಯಕ್ತಿಕ ಜೀವನವನ್ನು ಬದಿಗೊತ್ತಿ ದೇಶಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಹಗಲಿರಳು ಶ್ರಮಿಸಿದ್ದಾರೆ. ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಜನಪರ ಯೋಜನೆಗಳು ಮುಂಬರುವ ದಿನಗಳಲ್ಲಿಯೂ ಸಹ ಇದೇ ರೀತಿ ಮುಂದುವರೆಯಲಿ ಭಗವಂತ ಅವರಿಗೆ ಹೆಚ್ಚಿನ ಆಯಸ್ಸು ಆರೋಗ್ಯವನ್ನು ನೀಡಿ ಆಡಳಿತದಲ್ಲಿ ಯಶಸ್ವಿ ಕಾಣಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಗಾಣಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಯುವಕ ಗಾಣಿಗ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ತಾಲೂಕು ಸಂಘದ ಕಾರ್ಯದರ್ಶಿ ಎಸ್ ನಾರಾಯಣ ಸ್ವಾಮಿ ಸಂಚಾಲಕರಾದ ಮುನಿಕೃಷ್ಣಪ್ಪ ಸಂಘಟನಾ ಕಾರ್ಯದರ್ಶಿ ವಿ ಮಂಜುನಾಥ್ ಯುವಕ ಸಂಘದ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ಉಪಾಧ್ಯಕ್ಷ ಎಂ.ಎಲ್. ಸುನಿಲ್ ಸದಸ್ಯರುಗಳಾದ ಮಂಜುನಾಥ್ ರಮೇಶ್ ಶಬರೀಶ್ ಎಂ ನಾಗರಾಜು ತೇಲಿ ಮಂಜು ಅರುಣ್ ಕುಮಾರ್ ಪಾರ್ಥ ಪಟೇಲ್ ಧನುಷ್ ರಾಜಾ ಇನ್ನಿತರರು ಹಾಜರಿದ್ದರು.