ನಂಜನಗೂಡಿನಲ್ಲಿ ನಾಳೆ ವಿಜೃಂಭಣೆಯಿಂದ ವಿಶ್ವಗುರು ಬಸವೇಶ್ವರ ಜಯಂತಿ ಮಹೋತ್ಸವ ಆಚರಣೆಗೆ ಸಿದ್ಧತೆ
ಸಂಜೆವಾಣಿ ವಾರ್ತೆ
ನಂಜನಗೂಡು.ಜೂ.11:- ನಾಳೆ ಬುಧವಾರದಂದು ನಂಜನಗೂಡು ನಗರದ ಜೆಎಸ್‍ಎಸ್ ಮಂಗಳ ಮಂಟಪದಲ್ಲಿ ವಿಶ್ವಗುರು ಬಸವೇಶ್ವರರ ಜಯಂತಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಅಖಿಲ ಭಾರತ ವೀರಶೈವ ಮಹಾಸಭಾ ನಂಜನಗೂಡು ತಾಲ್ಲೂಕು ಘಟಕ ಸಜ್ಜಾಗಿದೆ ಎಂದು ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಬಾದ ಅದ್ಯಕ್ಷರಾದ ದೇವನೂರು ಬುಲೆಟ್ ಮಹದೇವಪ್ಪ ರವರು ತಿಳಿಸಿದ್ದಾರೆ. ಅವರು ನಂಜನಗೂಡು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡುತ್ತಿದ್ದರು.
ಜೂನ್ 12ರ ಬುಧವಾರದಂದು ನಡೆಲಿರುವ ಬಸವಜಯಂತಿಯು ವಿಭಿನ್ನ ಹಾಗೂ ವಿಶಿಷ್ಟವಾಗಿ ನಡೆಸಲು ಸಮಿತಿ ತೀರ್ಮಾನಿಸಿದ್ದು ಈಗಾಗಲೇ ಪ್ರಚಾರ ಯಾತ್ರೆಯ ರಥವು ತಾಲ್ಲೂಕಿನ 185 ಹಳ್ಳಿಗಳಲ್ಲಿ ಸಂಚರಿಸಿ ಸಮಾರಂಭದ ವಿಶೇಷತೆಗಳನ್ನು ಹಾಗೂ ವೀರಶೈವ ಲಿಂಗಾಯಿತರಲ್ಲಿ ಜಾಗೃತಿ ಮೂಡಿಸಿ ಜೂ.12ರಂದು ಬೆಳಿಗ್ಗೆ ನಂಜನಗೂಡಿಗೆ ಆಗಮಿಸಲಿದೆ ಎಂದರು.
ಜೂನ್ 12ರ ಬುಧವಾರ ಬೆಳಿಗ್ಗೆ 7.00 ಘಂಟೆಗೆ ಷಟ್‍ಸ್ಥಲ ದ್ವಜಾರೋಹಣ ಕಾರ್ಯಕ್ರಮವನ್ನು ಹೊನ್ನಲಗೆರೆ ಮಠಾದ್ಯಕ್ಷರಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ನೆರವೇರಿಸಲಿದ್ದು, ಬೆಳಿಗ್ಗೆ 8.00 ಘಂಟೆಗೆ ಗೌರಿಘಟ್ಟದ ಬೀದಿಯಲ್ಲಿರುವ ಶ್ರೀ ಶಿವಪಾದಸ್ವಾಮಿಗಳವರ ಗದ್ದಿಗೆ ಆವರಣದಲ್ಲಿ ಸುಕ್ಷೇತ್ರ ಮಲ್ಲನಮೂಲೆ ಮಠಾದ್ಯಕ್ಷರಾದ ಚನ್ನಬಸವಸ್ವಾಮಿಗಳು ಬಸವಣ್ಣನವರ ಭಾವಚಿತ್ರ ಹಾಗೂ ಜಾನಪದ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.
ನಂತರ ವೇದಿಕೆ ಕಾರ್ಯಕ್ರಮವು ಅದೇ ದಿನ ಮಧ್ಯಾಹ್ನ 1.00 ಘಂಟೆಗೆ ಜೆಎಸ್‍ಎಸ್ ಮಂಗಳ ಮಂಟಪದಲ್ಲಿ ಧಾರ್ಮಿಕ ಸಭೆಯನ್ನು ಏರ್ಪಡಿಸಲಾಗಿದ್ದು, ತಾಲ್ಲೂಕಿನಾದ್ಯಂತ ಸುಮಾರು 25 ಸಾವಿರಕ್ಕೂ ಹೆಚ್ಚು ವೀರಶೈವ ಲಿಂಗಾಯತ ಬಂಧುಗಳು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸುವರು, ತುಮಕೂರಿನ ಸಿದ್ದಲಿಂಗ ಮಹಾಸ್ವಾಮಿಗಳು ಸಮಾರಂಭದ ದಿವ್ಯಸಮ್ಮುಖ ವಹಿಸಲಿದ್ದಾರೆ, ಕನಕಪುರ ಮಠಾದ್ಯಕ್ಷರಾದ ಮುಮ್ಮಡಿ ನಿರ್ವಾಣಸ್ವಾಮಿಗಳು ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದಾರೆ. ಭಾವಚಿತ್ರವನ್ನು ಅನಾವರಣವನ್ನು ದೇವನೂರು ಮಹಾಂತಸ್ವಾಮಿಗಳು ಮಾಡಲಿದ್ದಾರೆ. ಸಮಾರಂಭದ ಅದ್ಯಕ್ಷತೆಯನ್ನು ಮಲ್ಲನಮೂಲೆ ಮಠಾದ್ಯಕ್ಷರಾದ ಚನ್ನಬಸವಸ್ವಾಮಿಗಳು ವಹಿಸಲಿದ್ದಾರೆ. ಕೆ.ಆರ್.ನಗರ ತಾಲ್ಲೂಕಿನ ಲಾಳನಹಳ್ಳಿಯ ಕಾಯಕರತ್ನ ಪ್ರಶಸ್ತಿ ಪುರಸ್ಕøತರಾದ ಶರಣೆ ಜಯದೇವಿ ತಾಯಿ ಯವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ.
ನಾಡಿನ ಹತ್ತಾರು ಮಠಾದ್ಯಕ್ಷರುಗಳು, ನೂರಾರು ಮಠಾಧಿಪತಿಗಳು, ರಾಜಕೀಯ ಮುಖಂಡರುಗಳು, ಭಕ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆಂದು ಅವರು ತಿಳಿಸಿದರು. ಜೆಎಸ್‍ಎಸ್ ಮಂಗಳ ಮಂಟಪದಲ್ಲಿ ಮಧ್ಯಾಹ್ನ 12 ಘಂಟೆಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಮಹಿಳೆಯರು, ಬಂಧುಗಳು, ಮುಖಂಡರುಗಳು ಹಾಗೂ ಅಭಿಮಾನಿಗಳು ಎಂದು ಮಹಿಳಾ ಉಪಾಧ್ಯಕ್ಷೆ ಹೆಚ್.ಎಂ.ಮಂಜುಳಾ ಮಧು ಕೋರಿದರು.
ಘೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬದನವಾಳು ಮಂಜುನಾಥ್, ಖಜಾಂಚಿ ತಾಂಡವಪುರ ಮಾಧು, ಸಹಕಾರ್ಯದರ್ಶಿ ಹಿರಿಯ ವಕೀಲ ಎಂ.ಕೆ.ಬಸವಣ್ಣ, ಮಹಾಪೋಷಕರಾದ ಹಗಿನವಾಳು ಹೆಚ್.ಎಂ.ಮಹದೇವಮೂರ್ತಿ, ನಿರ್ದೆಶಕರುಗಳಾದ ಹೆಗ್ಗಡಹಳ್ಳಿ ಶಿವಪ್ರಕಾಶ್, ಸಿಂದುವಳ್ಳಿಪುರ ಎಸ್.ಎನ್.ಮಲ್ಲೇಶ್, ಮುಳ್ಳೂರು ಶೇಖರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.