ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡದಿರಿ: ಮಿಲಿಂದ ಸಾಗರ
ಜೇವರ್ಗಿ :ಜೂ.11: ಗುಲ್ಬರ್ಗ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟಿಸುವಲಿ ವಿಳಂಬ ನೀತಿ ಅನುಸರಿಸುತ್ತಿದೆ ಇದು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವಂತಿದೆ ಇದು ವಿಶ್ವವಿದ್ಯಾಲಯಕ್ಕೆ ಶೋಭೆಯಲ್ಲ ಬಡ ಕೂಲಿ ಕಾರ್ಮಿಕರ ರೈತರ ಮಕ್ಕಳ ಭವಿಷ್ಯದ ಜೊತೆ ಆಟ ಆಡದಿರಿ ಎಂದು
ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ಮುಖಂಡರಾದ. ಮಿಲಿದ ಸಾಗರ್ ಅಭಿಮತ ಪಟ್ಟರು
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಮಿನಿ ವಿಧಾನಸೌಧದ ವರೆಗೆ ಪ್ರತಿಭಟನೆಯ ಮುಖಾಂತರ ಆಗಮಿಸಿ ಉಪ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರ.ಭಟನೆಯನ್ನು ಉದ್ದೇಶಿಸಿ ಮಿಲಿಂದ ಸಾಗರ್ ಮಾತನಾಡಿ ಸದರಿ ವಿಶ್ವವಿದ್ಯಾಲಯದ ಅದಿನದಲ್ಲಿ ಬರುವ ಎಲ್ಲಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ ಪ್ರಥಮ ಸೇಮೆಸ್ಟರನಾ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಮೂರು ವರ್ಷದ ವ್ಯಾಸಂಗ ಅವಧಿ ಮುಗಿಯುತ್ತಾ ಬಂದರು ಇನ್ನೂ ಸಹ ಫಲಿತಾಂಶ ಪ್ರಕಟಿಸಿಲ್ಲಾ ಹಾಗೂ UUಅಒS ಯೂ.ಯೂ.ಸಿ.ಎಮ್.ಎಸ್ ನಲ್ಲಿ ಪರಿಕ್ಷೇ ಮೊತ್ತ, ಕಾಲೇಜು ಮೊತ್ತ ಹಾಗೂ ಇತರೆ ಕೆಲಸಗಳಿಗೆ ಸರ್ವರ್ ಸಮಸ್ಯೆಯಿಂದ ಕಾಲೇಜು ಅವಧಿ ಮುಗಿದರು ಅಂಕಪಟ್ಟಿ ದೊರೆತಿಲ್ಲ ಇನ್ನೂ ಹತ್ತು ಹಲವು ಸಮಸ್ಯೆಗಳು ನಮ್ಮ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಕಾಡುತ್ತಿದೆ. ಪರಿಕ್ಷೆಯಲ್ಲಿ ವಿಫಲವಾದ ವಿದ್ಯಾರ್ಥಿಗಳಿಗೆ ಪ್ರಮೋಟ್ ಮಾಡಬೇಕು ಅಥವಾ ಮರು ಪರಿಕ್ಷೇ ಬರೆಯಲು ಅನುಮತಿ ನೀಡಬೇಕು. 15 ದಿನಗಳಲ್ಲಿ ಈ ಪ್ರಕ್ರಿಯೆ ಜಾರಿ ಮಾಡದಿದ್ದರೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದರು…
ಈ ಸಂದರ್ಭದಲ್ಲಿ:- ವಿದ್ಯಾರ್ಥಿಗಳ ಪ್ರತಿನಿಧಿಯಾದ. ಮಂಜುನಾಥ್ ಕೆ ಮಲ್ಲಾಬಾದ್.ಎ.ಎಸ್.ಎ ಮುಖಂಡ ಜೈ ಭೀಮ್ ಸಿಂಗ್ಗೆ. ವಿದ್ಯಾರ್ಥಿಗಳಾದ ಭಾಗಣ್ಣ ಎಂ ಮುತ್ತುಗೊಳ್. ರಾಜು ಜನಿವಾರ ಆಕಾಶ್ ಬೆಳ್ವಾರ್ ಸುರೇಶ್ ಖಾದಾಪುರ್. ಭಾಗಣ್ಣ ವನಗುಂಟ. ಶಿವರಾಮ ಗುಡೂರ್. ಭೀಮಣ್ಣ.ಸಮೀರ್.ಸ್ವಾಮಿ.ಯಲಾಲಿಂಗ. ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.