ಮಲೆ ಮಹದೇಶ್ವರಬೆಟ್ಟಕಾಡಂಚಿನ ಗ್ರಾಮಗಳ ಮೂಲ ಸೌಲಭ್ಯಕ್ಕೆಕ್ರಮ: ಸಚಿವ ಕೆ. ವೆಂಕಟೇಶ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.11- ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಕಾಡಂಚಿನತಪ್ಪಲು ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯಒದಗಿಸಲು ಈಗಾಗಲೇ ಪ್ರಸ್ತಾವನೆ ಸಿದ್ದಪಡಿಸಲಾಗಿದ್ದು, ಸೌಲಭ್ಯಗಳಿಗೆ ಎಲ್ಲಅಗತ್ಯಕ್ರಮ ವಹಿಸಲಾಗುವುದುಎಂದು ಪಶುಸಂಗೋಪನೆ, ರೇμÉ್ಮ ಸಚಿವ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಕೆ. ವೆಂಕಟೇಶ್‍ಅವರು ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಕಾಡಂಚಿನಇಂಡಿಗನತ್ತಗ್ರಾಮಕ್ಕೆ ಭೇಟಿ ನೀಡಿಅಲ್ಲಿನ ಸ್ಥಳೀಯ ಜನರಕುಂದುಕೊರತೆ ಆಲಿಸಿ ಅವರು ಮಾತನಾಡಿದರು.
ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಕಾಡಂಚಿನ ಗ್ರಾಮಗಳಿಗೆ ರಸ್ತೆ, ವಿದ್ಯುತ್ ಸೇರಿದಂತೆಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರಸ್ತಾವನೆ ಸಿದ್ದವಾಗಿದೆ. ಡಾಂಬರುರಸ್ತೆ ಹಾಗೂ ಸಿಸಿ ರಸ್ತೆಗೆ ಪ್ರತ್ಯೇಕವಾಗಿಅಂದಾಜು ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಅರಣ್ಯ ಪ್ರದೇಶದಿಂದ ಕೇಬಲ್ ಮೂಲಕ ವಿದ್ಯುತ್ ಸೌಲಭ್ಯಒದಗಿಸಲು 38 ಕೋಟಿರೂ. ವೆಚ್ಚದ ಪ್ರಸ್ತಾವನೆಯನ್ನು ಸಹ ತಯಾರಿಸಲಾಗಿದೆಎಂದರು. ಕಾಡಂಚಿನ ಜನರಿಗೆಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಬದ್ದವಾಗಿದ್ದೇವೆ. ಇಲ್ಲಿನ ಮಕ್ಕಳ ಶೈಕ್ಷಣಿಕ ಸೌಲಭ್ಯಗಳಿಗೂ ಅಗತ್ಯಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸ್ಥಳೀಯ ಗ್ರಾಮಗಳಿಗೆ ಮತ್ತು ಶಾಲಾ ಮಕ್ಕಳಿಗೆ ಅನುಕೂಲವಾಗಲು ಇನ್ನೂ 4 ವಾಹನಗಳನ್ನು ಮಲೆ ಮಹದೇಶ್ವರ ಪ್ರಾಧಿಕಾರದ ವತಿಯಿಂದ ಒದಗಿಸಲು ಸೂಚಿಸಲಾಗಿದೆ ಎಂದರು.
ಸಮಾಜಕಲ್ಯಾಣ ಸಚಿವಹೆಚ್.ಸಿ. ಮಹದೇವಪ್ಪ ಅವರು ಮಾತನಾಡಿ ಸ್ಥಳೀಯ ಜನರಿಗೆರಸ್ತೆ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ನಿಯಮ ಬದ್ದವಾಗಿ ಕಾನೂನು ಚೌಕಟ್ಟಿನೊಳಗೆ ಕ್ರಮಕ್ಕೆ ಮುಂದಾಗಲಿದ್ದೇವೆ. ಉತ್ತಮರಸ್ತೆ, ವಾಹನಗಳ ಸಂಚಾರಕ್ಕೂ ಅನುಕೂಲವಾಗಲಿದೆ. ಸ್ಥಳೀಯವಾಗಿ ಆರೋಗ್ಯ ಉಪಕೇಂದ್ರ ಜನರ ಆರೋಗ್ಯ ಸೌಲಭ್ಯಕ್ಕಾಗಿ ಸಂಚಾರಿಆರೋಗ್ಯಘಟಕ ಸ್ಥಾಪನೆ ಮಾಡಬಹುದಾಗಿದೆ. ಜನರಆರೋಗ್ಯ ಮತ್ತುರಕ್ಷಣೆ ಮುಖ್ಯವಾಗಿದೆಎಂದರು.
ಜಿಲ್ಲಾಡಳಿತ, ಮಲೆ ಮಹದೇಶ್ವರಅಭಿವೃದ್ದಿ ಪ್ರಾಧಿಕಾರ, ಅರಣ್ಯ ಇಲಾಖೆ ಸೇರಿದಂತೆಎಲ್ಲರೊಂದಿಗೆ ಚರ್ಚಿಸಿ ನಾಗರಿಕ ಮೂಲ ಸೌಲಭ್ಯಒದಗಿಸುವ ಕೆಲಸವನ್ನು ಹಂತ ಹಂತವಾಗಿ ಮಾಡಲಾಗುವುದು. ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದುಎಂದು ಸಮಾಜಕಲ್ಯಾಣ ಸಚಿವಹೆಚ್.ಸಿ. ಮಹದೇವಪ್ಪಅವರು ತಿಳಿಸಿದರು.
ಸಭೆ ಆರಂಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಮಾತನಾಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಲಾಗಿದೆ. ಜನರಕುಂದು ಕೊರತೆಗಳ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಶಾಲಾ ವಿದ್ಯಾರ್ಥಿಗಳ ಮುಂದಿನ ಹಂತದ ವಿದ್ಯಾಭ್ಯಾಸ ಹಾಗೂ ಹಾಸ್ಟೆಲ್‍ಇನ್ನಿತರ ಸೌಲಭ್ಯಗಳಿಗೆ ಕ್ರಮ ವಹಿಸಲಾಗುತ್ತಿದೆಎಂದರು.
ಇದೇ ವೇಳೆ ಸ್ಥಳೀಯರು ಮಾತನಾಡಿತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಮಾಜಿ ಶಾಸಕ ಆರ್. ನರೇಂದ್ರಅವರು ಸ್ಥಳೀಯ ಜನರ ಸಮಸ್ಯೆಗಳ ಬಗ್ಗೆ ಗಮನಸೆಳೆದರು.
ಶಾಸಕ ಎ.ಆರ್. ಕೃಷ್ಣಮೂರ್ತಿ, ಕಾಡಾಅಧ್ಯಕ್ಷ ಮರಿಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಪದ್ಮಿನಿ ಸಾಹು, ವೃತ್ತ ಮುಖ್ಯಅರಣ್ಯ ಸಂರಕ್ಷಾಣಾಧಿಕಾರಿ ಹಿರಾಲಾಲ್, ಮುಖ್ಯಅರಣ್ಯ ಸಂರಕ್ಷಣಾಧಿಕಾರಿಡಾ. ಸಂತೋμïಕುಮಾರ್, ತಹಶೀಲ್ದಾರ್ ಗುರುಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.