ಕಾಡುಹಂದಿಗಳ ಅಕ್ರಮ ಸಾಗಣೆ: ಇಬ್ಬರ ಬಂಧನ
ಕಲಬುರಗಿ:ಜೂ.10: ಜಿಲ್ಲೆಯ ಸೇಡಂ ತಾಲ್ಲೂಕಿನ ಆಡಕಿ ಗ್ರಾಮದ ವ್ಯಾಪ್ತಿಯಲ್ಲಿ ಏಳು ಹಂದಿಗಳನ್ನು ಹಿಡಿದು ಮಾಂಸಕ್ಕಾಗಿ ಸಾಗಿಸುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಕೊಪ್ಪಳ್ ಜಿಲ್ಲೆಯ ಕುಷ್ಟಗಿಯ ದುರ್ಗಪ್ಪ ಕೋರವಾರ್ ಮತ್ತು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿಯ ಈರಣ್ಣ ಪರಮಣ್ಣ ಎಂಬುವವರೇ ಬಂಧಿತ ಆರೋಪಿಗಳು, ಇಬ್ಬರನ್ನೂ ಸೇಡಂನ ಜೆಎಂಎಫ್’ಸಿ ನ್ಯಾಯಲಯದ ಮುಂದೆ ಹಾಜರು ಪಡಿಸಲಾಗಿದೆ. ನ್ಯಾಯಾಧೀಶರು ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಏಳು ಕಾಡು ಹಂದಿಗಳನ್ನು ಸಾಗಿಸುತ್ತಿದ್ದ ಸರಕು ವಾಹನವನ್ನು ಸಹ ವಶಕ್ಕೆ ಪಡೆಯಲಾಗಿದೆ.
ದಾಳಿಯಲ್ಲಿ ಎಸಿಎಫ್ ಮಹ್ಮದ್ ಮುನೀರ್ ಅಹಮದ್, ಆರ್‍ಎಫ್‍ಒ ವಿಜಯಕುಮಾರ್, ಡಿಆರ್‍ಎಫ್‍ಒ ವಿಶ್ವನಾಥ್ ಪಾಟೀಲ್, ಅರಣ್ಯಾಧಿಕಾರಿ ಭೀಮಣ್ಣಗೌಡ, ಜಾನವಿ, ದಾನೋಜಿ, ರಮೇಶ್ ಹಾದಿಮನಿ, ಅನೀಲಕುಮಾರ್, ಮಂಜುನಾಥ್, ಸಂತೋಷ್, ಎಸ್.ಎಂ ಜಾಫರ್, ವೆಂಕಟೇಶ್, ಮಲ್ಲಪ್ಪ ಮುಂತಾದವರು ಪಾಲ್ಗೊಂಡಿದ್ದರು.