ತಾಲೂಕುವಾರು ಸಹಾಯವಾಣಿ ಕೇಂದ್ರ ಆರಂಭ
ಕಲಬುರಗಿ:ಜೂ.10:ಕಲಬುರಗಿ ಜಿಲ್ಲೆಯ ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿ/ಸಿಬ್ಬಂದಿಗಳು ಪ್ರವಾಹ/ಭಾರಿ ಮಳೆಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಹಾಗೂ ಇತರೆ ಸಮಸ್ಯೆಗಳ ತುರ್ತು ಪರಿಹಾರಕ್ಕಾಗಿ ಕಲಬುರಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಈ ಕೆಳಕಂಡಂತೆ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಜಿಲ್ಲಾ ವಿಪತ್ತು ತುರ್ತು ನಿರ್ವಾಹಣ ಕೇಂದ್ರ ಸಂಖ್ಯೆ 1077 (ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ) ಇರುತ್ತದೆ. ತಾಲೂಕುವಾರು ಸಹಾಯವಾಣಿ ಸಂಖ್ಯೆಗಳ ವಿವರ ಇಂತಿದೆ. ಆಳಂದ ತಹಶೀಲ್ದಾರರ ಕಚೇರಿ-9845858252, ಅಫಜಲಪುರ ತಹಶೀಲ್ದಾರ ಕಚೇರಿ-08470-282020, ಚಿತ್ತಾಪುರ ತಹಶೀದ್ದಾರ ಕಚೇರಿ-08474-236250, ಚಿಂಚೋಳಿ ತಹಶೀಲ್ದಾರ ಕಚೇರಿ-08475-200127, ಕಾಳಗಿ ತಹಸೀಲ್ದಾರ ಕಚೇರಿ-9449266885, ಕಲಬುರಗಿ ತಹಸೀಲ್ದಾರರ ಕಚೇರಿ-9980683702, ಕಮಲಾಪೂರ ತಹಶೀಲ್ದಾರ ಕಚೇರಿ-9986324648, ಜೇವರ್ಗಿ ತಹಶೀಲ್ದಾರರ ಕಚೇರಿ-7019270898, ಯಡ್ರಾಮಿ ತಹಶೀಲ್ದಾರ ಕಚೇರಿ-9743682346, ಶಹಾಬಾದ ತಹಸೀಲ್ದಾರರ ಕಚೇರಿ-8152093789 ಹಾಗೂ ಸೇಡಂ ತಹಸೀಲ್ದಾರರ ಕಚೇರಿ-08441-276184.
ಹವಾಮಾನ ಇಲಾಖೆಯ ವರದಿನ್ವಯ ಮುಂದಿನ ದಿನಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದಾಗಿ ಮುನ್ಸೂಚನೆ ನೀಡಿರುವುದರಿಂದ ಜಿಲ್ಲೆಯಲ್ಲಿ ಭಾರಿ ಮಳೆ/ಪ್ರವಾಹ ಕುರಿತು ಮುಂಜಾಗೃತ ತೆಗೆದುಕೊಳ್ಳುವುದು ಅವಶ್ಯಕತೆಯಿದ್ದು, ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ/ತಾಲೂಕು/ಹೋಬಳಿ/ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳು ಕೆಳಕಂಡಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಡಿ.ಸಿ. ಅವರು ತಿಳಿಸಿದ್ದಾರೆ.
ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿದ್ದು, ಪ್ರವಾಹ/ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನಚ್ಚರಿಕೆ ವಹಿಸಬೇಕು. ನದಿ/ಹಳ್ಳ/ಕೆರೆ ದಡದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ಧನ/ಕರುಗಳನ್ನು ಮೇಯಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸುವುದು ಮತ್ತು ಇತರೆ ಚಟುವಟಿಕೆ ನಡೆಸದಂತೆ ಕ್ರಮವಹಿಸಬೇಕು.
ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ, ಶಾಲೆಗಳು ಹಾಗೂ ಇತರೆ ಕಟ್ಟಡಗಳ ಕುಸಿಯುವ ಸಾಧ್ಯತೆ ಇರುವದರಿಂದ ಸಾವು-ನೋವುಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಸಾರ್ವಜನಿಕರಿಗೆ ಸುರಕ್ಷತೆ/ ಮುನ್ನೇಚ್ಚರಿಕೆ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ. ಯಾವುದೇ ಅಹಿತಕರ ಘಟನೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರುವುದು/ಮೈಕ್ ಮೂಲಕ ಜಾಗೃತಿ ಮುಡಿಸುವುದು. ಭಾರಿ ಮಳೆ/ಪ್ರವಾಹದಿಂದ ಹಾನಿಯಾದ ಬಗ್ಗೆ ಪ್ರಾಥಮಿಕ ವರದಿಯನ್ನು ಪ್ರತಿ ದಿನ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.