ವಿದ್ಯಾರ್ಥಿ ಬಸ್‍ಪಾಸ್‍ಗಳ ಮಾನ್ಯತಾ ಅವಧಿ ವಿಸ್ತರಣೆ
ಕಲಬುರಗಿ:ಜೂ.10:2023-24 ನೇ ಸಾಲಿನ ಪದವಿ, ಡಿಪ್ಲೋಮಾ, ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳ ಬಸ್‍ಪಾಸ್ ಅವಧಿ ಮುಕ್ತಾಯಗೊಂಡಿದ್ದು, ಈ ಬಸ್‍ಪಾಸ್ ಅವಧಿಯನ್ನು ವಿಸ್ತರಿಸುವಂತೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿರುವ ಪ್ರಯುಕ್ತ (ವಿಶ್ವವಿದ್ಯಾಲಯಗಳ ಶೈಕ್ಷಣಿಕ ತರಗತಿಗಳಲ್ಲಿ/ ಪರೀಕ್ಷಾ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಿರುವುದರಿಂದ) ಬಸ್‍ಪಾಸ್ ಅವಧಿ ದಿನಾಂಕ 31-5-2024 ರಂದು ಮುಕ್ತಾಯವಾಗಿರುವ ವಿದ್ಯಾರ್ಥಿ ಬಸ್ ಪಾಸುಗಳ ಮಾನ್ಯತಾ ಅವಧಿಯನ್ನು ಒಂದು ತಿಂಗಳು ಅಥವಾ ಗರಿಷ್ಠ ಎರಡು ತಿಂಗಳ ಕಾಲ ವಿಸ್ತರಣೆ ಮಾಡಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.