ತಾಳಿಕೋಟೆ : ಮೈದುಂಬಿ ಹರಿಯುತ್ತಿರುವ ಡೋಣಿ ನದಿ
ತಾಳಿಕೋಟೆ:ಜೂ.10: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಮಳೆಯಿಂದ ಡೋಣಿ ನಧಿಯಲ್ಲಿ ಪ್ರವಾಹವು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಮಣ್ಣು ಕೊಚ್ಚಿಕೊಂಡು ಹೋಗಿದೆ.
ಮಳೆ ಬಂದರೆ ಸಾಕು ಎಂಬ ಚಿಂತಾಕ್ರಾಂತದಲ್ಲಿದ್ದ ರೈತಾಪಿ ಜನತೆಗೆ ಎಡಬಿಡದೇ ಸುರಿದ ಮಳೆಯ ಅವಾಂತರದಿಂದ ನಧಿ ಪಾತ್ರದ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು ಬಿತ್ತನೆಗೆ ಸಜ್ಜಾಗಿದ್ದ ರೈತರಿಗೆ ಮಣ್ಣು ಕೊಚ್ಚಿಕೊಂಡು ಹೋಗಿರುವದು ಮತಷ್ಟು ಚಿಂತೆಗೀಡುಮಾಡಿದೆ.
ಡೋಣಿ ನಧಿಯ ಪ್ರವಾಹದಿಂದ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದೆ ಅಲ್ಲದೇ ವಾಹನ ಸಂಚಾರವು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಸಂಪೂರ್ಣ ಸ್ಥಗಿತಗೊಂಡಿತ್ತು ಸಾಯಂಕಾಲದ ನಂತರ ಸೇತುವೆಯ ಎಡಬಲದ ಕಂಬಗಳು ಕಾಣಿಸುತ್ತಿದ್ದಂತೆ ವಾಹನ ಸವಾರರು ಯಾವುದೇ ಅಂಜಿಕೆ ಇಲ್ಲದೇ ಸೇತುವೆಯ ಮೇಲೆ ನೀರು ಹರಿಯುತ್ತಿದ್ದರೂ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದರು. ಸ್ವಲ್ಪೇ ಆಯಾ ತಪ್ಪಿದರೂ ಅಪಾಯ ಕಟ್ಟಿಟ್ಟ ಬಿತ್ತಿ ಎಂಬುದು ಗೊತ್ತಿದ್ದರೂ ಕೂಡಾ ಬಂಡ ದೈರ್ಯದಿಂದ ಸಂಚರಿಸುತ್ತಿರುವದು ಕಂಡುಬಂದಿತು.
ಡೋಣಿ ನಧಿಯಲ್ಲಿ ರವಿವಾರರಂದು ಬೆಳಿಗ್ಗೆ ಪ್ರವಾಹವು ಉಂಟಾಗಿದ್ದರಿಂದ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆ ಪಕ್ಕದಲ್ಲಿ ನಿರ್ಮಿಸಲಾದ ಶ್ರೀ ಹನುಮಾನ ದೇವಸ್ಥಾನವು ಅರ್ದದಷ್ಟು ಮುಳುಗಡೆಕಂಡಿತ್ತು.
ಸೋಗಲಿಹಳ್ಳದ ರಬಸಕ್ಕೆ ಕೊಚ್ಚಿಹೋದ ಮಣ್ಣು
ಪಟ್ಟಣದ ಪಕ್ಕದಲ್ಲಿರುವ ಮೂಕೀಹಾಳ ಗ್ರಾಮದ ಹತ್ತಿರ ಹರಿಯುತ್ತಿರುವ ಸೋಗಲಿ ಹಳ್ಳದ ರಬಸದ ನೀರಿಗೆ ಮೂಕೀಹಾಳ ಮೂಲಕ ತಾಳಿಕೋಟೆ ಸಂಪರ್ಕಿಸುವ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದೆ ಹಳ್ಳದ ನೀರು ವ್ಯಾಪಕವಾಗಿ ಬಂದಿದ್ದರಿಂದ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಜಮೀನುಗಳಲ್ಲಿ ಸಂಪೂರ್ಣ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಮೂಕೀಹಾಳ ಗ್ರಾಮದ ರೈತ ಕಾಸೀಂಪಟೇಲ ಪಾಟೀಲ ಎಂಬ ರೈತರ ಜಮೀನಿನಲ್ಲಿ ಹಾಕಲಾದ ಕಬ್ಬು ಅರ್ದದಷ್ಟು ಭಾಗ ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಗಿದೆ ಅಲ್ಲದೇ ವ್ಯಾಪಕವಾದ ನೀರಿನ ರಬಸದಿಂದ ಸುಮಾರು 4 ಅಡಿಯಷ್ಟು ಮಣ್ಣು ಕೊಚ್ಚಿಹೋಗಿದ್ದರಿಂದ ಜಮೀನಿನಲ್ಲಿ ಗರಸು ಎದ್ದುಕಾಣತೊಡಗಿದೆ ಇದರಿಂದ ರೈತ ಕಾಸೀಂಪಟೇಲ ಪಾಟೀಲ ಅವರು ಚೀಂತಾಕ್ರಾಂತರಾಗಿದ್ದು ಕೂಡಲೇ ಹಳ್ಳದ ನೀರಿನ ರಬಸಕ್ಕೆ ಮತ್ತು ಡೋಣಿ ನಧಿಯ ನೀರಿನ ರಬಸಕ್ಕೆ ಜಮೀನುಗಳ ಹಾಳಾದ ರೈತರಿಗೆ ಸರ್ಕಾರವು ಗುರುತಿಸಿ ಪರಿಹಾರ ಮಾರ್ಗೋಪಾಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮೇಲ್ಮಟ್ಟದ ಸೇತುವೆ ನಿರ್ಮಾಣಕ್ಕೆ ಒತ್ತಾಯ
ಮೂಕೀಹಾಳ ಗ್ರಾಮದಿಂದ ತಾಳಿಕೋಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಸೋಗಲಿ ಹಳ್ಳಕ್ಕೆ ನಿರ್ಮಿಸಲಾಗಿರುವ ಕೆಳಮಟ್ಟದ ಸೇತುವೆಯ ಜಾಗದಲ್ಲಿ ಕೂಡಲೇ ಮೇಲ್ಮಟ್ಟದ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕೆಂಬುದು ರೈತಾಪಿ ಜನರ ಒತ್ತಾಸೆಯಾಗಿದೆ ಸ್ವಲ್ಪೇ ಮಳೆಯಾದರೂ ಕೂಡಾ ಹಳ್ಳದ ನೀರು ಸೇತುವೆಯ ಮೇಲೆ ತುಂಬಿ ಹರಿಯುತ್ತದೆ ಇದರಿಂದ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಾ ಸಆಗಿದೆ ಅಲ್ಲದೇ ಕೆಳಮಟ್ಟದ ಸೇತುವೆಯಿಂದ ಹಳ್ಳದಲ್ಲಿ ಬರುವ ನೀರು ಹೋಗದೆ ನೀರು ತಡೆದಂತಾಗಿ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗುತ್ತಾ ಸಾಗಿದೆ ಕೆಳಮಟ್ಟದ ಸೇತುವೆಯ ಉಪಯೋಗಕ್ಕಿಂತ ಹಾನಿಯೇ ಜಾಸ್ತಿಯಾಗುತ್ತಿದ್ದು ಕೂಡಲೇ ಸರ್ಕಾರದ ಜನಪ್ರತಿಣಿಧಿಗಳು ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಸಿಡಿಲಿಗೆ ಇಲೇಕ್ಟ್ರಾನಿಕ್ ವಸ್ತುಗಳು ಬಸ್ಮ
ಶನಿವಾರರಂದು ಸಂಜೆ ಸುರಿದ ಮಳೆಗೆ ತಾಳಿಕೋಟೆ ಪಟ್ಟಣದ ಮಹಲ್ ಗಲ್ಲಿಯ ಮನೆಯೊಂದರ ಟಿವಿ ಚೆನಲ್ ಚತ್ರಿಗೆ ಮತ್ತು ಗೋಡೆಗೆ ಸಿಡಿಲು ಅಪ್ಪಳಿಸಿದ್ದರಿಂದ ಮನೆಯಲ್ಲಿಯ ಟಿವಿ, ಪ್ಯಾನ್, ಮತ್ತು ವಿದ್ಯುತ್ ಬಲ್ಪಗಳು ಒಳಗೊಂಡು ಅನೇಕ ಇಲೇಕ್ಟ್ರಾನಿಕ್ ವಸ್ತುಗಳು ಸುಟ್ಟುಹೋಗಿದ್ದು ಮನೆಯ ಮೇಲಿನ ಗೋಡೆಗೆ ಸಿಡಿಲು ಅಪ್ಪಳಿಸಿದ್ದರಿಂದ ಗೋಡೆಯೂ ಬಿರುಕು ಬಿಟ್ಟಿದ್ದು ಪಕ್ಕದಲ್ಲಿಟ್ಟಿದ್ದ ನಿರೂಪಯುಕ್ತ ಕಟ್ಟಿಗೆ ಇಟ್ಟಲೇಯೇ ಸುಟ್ಟ ಘಟನೆ ಜರುಗಿದೆ.
ರವಿವಾರ ಮತ್ತು ಶನಿವಾರ ಸಂಜೆ ಸುರಿದ ಮಳೆಯಿಂದ ಪಟ್ಟಣದ ಭೀಮನಭಾವಿಯ ಎರಡು ಭಾಗದ ಗೋಡೆಗಳು ಸಂಪೂರ್ಣ ಕುಸಿದು ಭಾವಿಯಲ್ಲಿ ಬಿದಿದೆ ತಾಲೂಕಿನ ಬಹುತೇಕ ರೈತರ ಜಮೀನುಗಳಲ್ಲಿ ಹಾಕಲಾದ ಒಡ್ಡ ವರಿಗಳು ಒಡೆದು ಹೋಗಿದ್ದು ಬರಗಾಲದ ಬವಣೆಯಿಂದ ಕಂಗೆಟ್ಟಿದ್ದ ರೈತರಿಗೆ ಒಡ್ಡು ವರಿಹಾಕಿಸುವದು ಮತ್ತೊಂದು ಬರೆ ಎಳೆದಂತಾಗಿದ್ದು ಜಿಲ್ಲಾಡಳಿತ ಹಾನಿಪ್ರದೇಶದ ಸರ್ವೇಕಾರ್ಯ ನಡೆಸಿ ಪರಿಹಾರ ಮಾರ್ಗೋಪಾಯ ಕೈಗೊಳ್ಳಬೇಕೆಂದು ರೈತರ ಒತ್ತಾಯವಾಗಿದೆ.