ಮೋದಿ ಪದಗ್ರಹಣ, ಬಿಜೆಪಿ ಸಂಭ್ರಮಾಚರಣೆ
ಕೊಲ್ಹಾರ:ಜೂ.10: ಭಾರತ ಕಂಡ ವಿಶ್ವನಾಯಕ ನರೇಂದ್ರಮೋದಿ ಅವರು ಸತತ ಮೂರನೇ ಬಾರಿ ಪ್ರಧಾನಿ ಹುದ್ದೆ ಅಲಂಕರಿಸಿರುವುದು ಭಾರತ ದೇಶದ ಇತಿಹಾಸದ ದಿನವಾಗಿದೆ ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಟ್ಟಣದ ಅಗಸಿ ಹತ್ತಿರ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ನೆರವೇರಿಸಿ ಕಾರ್ಯಕರ್ತರೊಂದಿಗೆ ಪರಸ್ಪರ ಸಿಹಿ ವಿತರಸಿ, ಪಟಾಕಿ ಸಿಡಿಸಿ ಸಂಭ್ರಮಿಸಿ. ಮಾತನಾಡಿದರು ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವುದು ಅವರ ಆಡಳಿತದ ಅವಧಿಯಲ್ಲಿ ಮಾಡಿರುವ ಜನಪರ ಕೆಲಸಗಳಿಗೆ ದೇಶದ ಜನರು ಮನ್ನಣೆ ನೀಡಿರುವುದಕ್ಕೆ ಸಾಕಷಿಯಾಗಿದೆ. ಬಿಜೆಪಿ ಆಡಳಿತಕ್ಕೆ ದೇಶವಲ್ಲದೆ ವಿವಿಧ ದೇಶದಲ್ಲಿ ಮೋದಿ ಅವರ ವರ್ಚಸ್ಸು ಇನ್ನಷ್ಟು ಹೆಚ್ಚಾಗಿದೆ. ದೇಶದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಿದ್ದು, ಜನರ ಮೆಚ್ಚುಗೆ ಕೂಟ ಹೆಚ್ಚಾಗಲಿದೆ ಇದರಿಂದ ದೇಶದ ಜನರಿಗೆ ಸಂತಸವಾಗಿದೆ ಎಂದರು.
ಪ್ರಧಾನ ಮಂತ್ರಿಯಾಗಿ ನರೇಂದ್ರಮೋದಿ ಸೇರಿದಂತೆ ಅವರ ಜೊತೆಗೆ ಕೇಂದ್ರ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಎಲ್ಲ ನೂತನ ಸಚಿವರಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಅಪ್ಪಾಸಿ ಮಟ್ಟಿಹಾಳ, ಬಾಬು ಭಜಂತ್ರಿ ರಾಜಶೇಖರ್ ಶೀಲವಂತ, ಈರಯ್ಯ ಮಠಪತಿ, ಕಲ್ಲಪ್ಪ ಸೊನ್ನದ,ಶೇಖಪ್ಪ ಗಾಣಿಗೇರ್, ವೀರಭದ್ರಪ್ಪ ಭಾಗಿ, ಡೊಂಗ್ರಿ ಕಟಬರ್, ಜಾವಿದ್ ಬಿಜಾಪುರ್, ಮಲ್ಲಪ್ಪ ಬರಗಿ ಸುಭಾಷ್ ಭಜಂತ್ರಿ ಸಹಿತ ಅನೇಕರು ಉಪಸ್ಥಿತರಿದ್ದರು,