ಕಾಂಗ್ರೆಸ್ ಪಕ್ಷ ಸೋತರೂ ನೈತಿಕ ಗೆಲುವು ಸಿಕ್ಕಿದೆ: ಮಲ್ಲಿಕಾರ್ಜುನ ಲೋಣಿ
ವಿಜಯಪುರ,ಜೂ.10:ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು. ಆದರೆ ನೈತಿಕವಾಗಿ ನಾವು ಗೆದ್ದಿದ್ದೇವೆ. ಇಡೀ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಮ್ಮತದಿಂದ ಕೆಲಸ ಮಾಡಿದ್ದು, ನಮಗೆಲ್ಲರಿಗೆ ತೃಪ್ತಿ ತಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಆವರು ಹೇಳಿದರು.
ವಿಜಯಪುರ ಲೋಕಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಪರಾಮರ್ಶೆ ಕುರಿತು ಭಾನುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಚಿಂತನ ಮಂಥನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು 5 ಗ್ಯಾರಂಟಿ ಯೋಜನೆಗಳನ್ನು ಕೊಟ್ಟಾಗಲೂ ಜನತೆ ನಮಗೆ ಬೆಂಬಲಿಸದಿರುವುದು ಬೇಸರವಾಗಿರಬಹುದು. ಆದರೂ ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮಾಜಗಳು ಬೆಂಬಲಿಸಿ ಬಿಜೆಪಿಯವರ ಓಟಕ್ಕೆ ಬ್ರೇಕ್ ಹಾಕಿದ್ದು, ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಭವಿಷ್ಯವಿದೆ/ ಯಾರೂ ಧೃತಿಗೆಡುವ ಅವಶ್ಯಕತೆ ಇಲ್ಲ. ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದಂತಹ ಎಲ್ಲಾ ಮತದಾರ ಪ್ರಭುಗಳಿಗೆ ಪಕ್ಷದ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.
ಪಕ್ಷವು ಇಂದು ಸೋಲಲು ಅನೇಕ ಕಾರಣಗಳಿರಬಹುದು. ಮುಂದಿನ ದಿನಗಳಲ್ಲಿ ಸರಿ ಮಾಡಲಾಗುವುದು. ಇಂದು ದೇಶದಲ್ಲಿ ‘ಇಂಡಿಯಾ’ ಮೈತ್ರಿಕೂಟವನ್ನು ಬೆಂಬಲಿಸಿ ಜನ ಬಿಜೆಪಿಯ ವಿರುದ್ಧ ಇರುವುದು ಸಾಬೀತಾಗಿದೆ. ರಾಹುಲ್ ಗಾಂದಿ ಅವರು ದಲಿತರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ರೈತರ, ಯುವಕರ ಹಿತ ಕಾಪಾಡುವ ನಿಟ್ಟಿನಲ್ಲಿ ಹೋರಾಟ ಮಾಡಿರುವುದೇ ಇಂದು ಜನ ನಮ್ಮ ಕೈ ಹಿಡಿದಿರುತ್ತಾರೆ. ನಾವೆಲ್ಲರೂ ಹೀಗೆಯೇ ಒಟ್ಟಾಗಿ ಪಕ್ಷದ ಸಂಘಟನೆ ಬಲಪಡಿಸುವುದರ ಜೊತೆಗೆ ಗಟ್ಟಿಯಾಗಿ ನಿಂತು ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹ್ಮದರಫೀಕ ಟಪಾಲ, ಪ್ರಭುಗೌಡ ಪಾಟೀಲ, ಬಿ.ಎಸ್. ಪಾಟೀಲ ಯಾಳಗಿ, ವೈಜನಾಥ ಕರ್ಪೂರಮಠ, ಸುಭಾಸ ಛಾಯಾಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಆರತಿ ಶಹಾಪೂರ, ಬಸೀರ ಶೇಠ, ಆರ್.ಡಿ. ಹಕ್ಕೆ, ಗುರು ತಾರನಾಳ, ರಫೀಕ ಪಕಾಲೆ, ಜಾವಿದ ಮೋಮಿನ್, ಪಕ್ಷದ ಮುಖಂಡರಾದ ಎಂ.ಎಸ್. ನಾಯಕ, ಡಿ.ಎಚ್. ಕಲಾಲ, ಇಲಿಯಾಸಅಹ್ಮದ ಸಿದ್ದಿಕಿ, ಇಲಿಯಾಸ ಬೋರಾಮಣಿ, ಅಮಿತ ಚವ್ಹಾಣ, ಶಬ್ಬೀರ ಜಾಗೀರದಾರ, ವಿಜಯಕುಮಾರ ಘಾಟಗೆ, ಬಿ.ಎಸ್. ಗಸ್ತಿ, ದಸ್ತಗೀರ ಸಾಲೋಟಗಿ, ಲಕ್ಷ್ಮೀ ಶಿವಣಗಿ, ಮುಂತಾದವರು ಸಲಹೆಗಳನ್ನು ನೀಡಿ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಅಬ್ದುಲ್‍ಹಮೀದ ಮುಶ್ರೀಫ್, ಎಸ್.ಎಂ. ಪಾಟೀಲ ಗಣಿಹಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಆಜಾದ ಪಟೇಲ, ಸುಭಾಸ ಕಾಲೇಬಾಗ, ಶಾಜಾನ ಮುಲ್ಲಾ, ಬಾಳನಗೌಡ ಪಾಟೀಲ, ಮೀರಾಸಾಬ ಮುಲ್ಲಾ, ಅಂಗ ಘಟಕಗಳ ಅಧ್ಯಕ್ಷರುಗಳಾದ ಹರೀಶ ಕವಲಗಿ, ಲಾಲಸಾಬ ಕೊರಬು, ಎಂ.ಬಿ. ಮೆಂಡೆಗಾರ, ರಾಜೇಶ್ವರಿ ಚೋಳಕೆ, ರಫೀಕ ಕಾಣೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ಶರಣಪ್ಪ ಯಕ್ಕುಂಡಿ, ಸಾಯಿಕುಮಾರ ಬಿಸನಾಳ, ಹಾಜಿ ಪಿಂಜಾರ, ಸಲೀಮ ಪೀರಜಾದೆ, ಎಂ.ಎಂ. ಮುಲ್ಲಾ, ಅಶ್ಫಾಕ ಮನಗೂಳಿ, ಹಮೀದ ಅವಟಿ, ಪರಶುರಾಮ ಹೊಸಮನಿ, ಸುಂದರಪಾಲ ಚವ್ಹಾಣ, ಲಕ್ಷ್ಮಿ ಕ್ಷೀರಸಾಗರ, ಭಾರತಿ ಹೊಸಮನಿ, ಕಾಶಿಬಾಯಿ ಹಡಪದ, ಸಮಿಮಾ ಅಕ್ಕಲಕೋಟ, ಸರಿತಾ ನಾಯಕ, ಫಿರೋಜ ಶೇಖ, ಎಂ.ಎ. ಬಕ್ಷಿ, ಅಬೂಬಕರ ಕಂಬಾಗಿ, ಎಂ.ಎಚ್. ರೋಜಿವಾಲೆ, ಸತೀಶ ಅಡವಿ, ಮಲ್ಲಿಕಾರ್ಜುನ ಯಂಕಂಚಿ, ಕೃಷ್ಣಾ ಲಮಾಣಿ, ವಿಜಯಕುಮಾರ ಕಾಳೆ, ಮಲ್ಲು ದೊಡಮನಿ, ಅಶೋಕ ನಾಯ್ಕೋಡಿ, ಅನಿಲ ಸುರಗಿಹಳ್ಳಿ, ರಾಜು ಪವಾರ, ಶ್ರೀಕಾಂತ ಹೊನ್ನುಟಗಿ, ಎಂ.ಎ. ಮೊಕಾಶಿ, ಮಹೇಶ ಶಹಾಪೂರ ಮುಂತಾದವರು ಉಪಸ್ಥಿತರಿದ್ದರು.