ನೋಟಬುಕ ಪೆನ್ನು ವಿತರಣೆ
ಕಲಬುರಗಿ: ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಪಿಎಸ್‍ಐ ಲೋಕರೆಡ್ಡಿ ಹುಟ್ಟು ಹಬ್ಬದ ಪ್ರಯುಕ್ತ ಡಾ.ಎ.ಪಿ.ಜೆ ಅಬ್ದುಲ ಕಲಾಂ ಪೌಂಡೇಶನ ವತಿಯಿಂದ ಉಚಿತ ನೋಟಬುಕ ಹಾಗೂ ಪೆನ್ನು ವಿತರಣೆ ಕಾರ್ಯಕ್ರಮವನ್ನು ಕೋಡ್ಲಾ ಗ್ರಾಮದ ವಾರ್ಡ ನಂ. 1ರ ಮರಗಮ್ಮ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಪೌಂಡೇಶನ ಸಂಸ್ಥಾಪಕ ಅಧ್ಯಕ್ಷ ರಾಜು ಮಾಳಪ್ಪನೋರ,ಸರಕಾರಿ ಮಾದರಿಯ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಗುರುನಾಥ ಗುಂಡನೋರ, ಲಾಲೇಶ, ಶೇಖರ, ಭೀಮು, ಪ್ರಕಾಶ ಮಾಳಪ್ಪನೋರ, ಆಕಾಶ ಬೀರನಳ್ಳಿ ಸೇರಿದಂತೆ ಇತರರು ಇದ್ದರು.