ವಿಶ್ವ ಪರಿಸರ ದಿನಾಚರಣೆ
ಬೀದರ:ಜೂ.10: ನಗರದ ಡಾ|| ತೋಂಟದ ಸಿದ್ಧಲಿಂಗ ಪ್ರೌಡ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವಿಶೇಷ ಸನ್ಮಾನ ಸಮಾರಂಭ ಜರುಗಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಪೆÇ್ರ. ಉಮಾಕಾಂತ ರವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಮಾನವ ಜೀವಿಯ ಕರ್ತವ್ಯವಾಗಿದೆ. ಪರಿಸರದಲ್ಲಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯ, ಭೂಮಿ ಮಾಲಿನ್ಯವಾಗುವುದರಿಂದ ಜೀವ-ಜಂತು, ಪಕ್ಷಿ-ಪ್ರಾಣಿ ಮತ್ತು ಮಾನವ ಜೀವಿ ಬದುಕಲು ಕಷ್ಟಕರವಾಗಿದೆ. ಈ ಪ್ರಯುಕ್ತ ಪ್ರತಿಯೊಬ್ಬರು ಕನಿಷ್ಠ ಒಂದು ಸಸಿ ನೆಡುವುದರ ಮೂಲಕ ಪ್ರಕೃತಿಯಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸುವಂತೆ ಪರಿಶ್ರಮ ಮಾಡಬೇಕು. ಪ್ರಕೃತಿ ಮಾಲಿನ್ಯವಾಗದಂತೆ ಪ್ರತಿಯೊಬ್ಬರು ಗಿಡಗಳ ಸಂರಕ್ಷಣೆ ಮಾಡಿ ಜೀವ-ಜಂತು, ಪಕ್ಷಿ-ಪ್ರಾಣಿ ಮತ್ತು ಮಾನವ ಜೀವಿ ಸಂರಕ್ಷಣೆ ಮಾಡುವುದು ಅನಿವಾರ್ಯತೆ ಇದೆ. ಸಮಾಜದಲ್ಲಿ “ಅಪ್ಪಿಕೋ-ಚಿಪೆÇ್ಕೀ” ಚಳುವಳಿಯ ನೇತಾರ ಸುಂದರಲಾಲ್ ಬಹುಗುಣ ಮತ್ತು ಸಾಲದ ಮರದ ತಿಮ್ಮಕ್ಕ ರವರ ಸೇವೆ ವಿಚಾರಗಳನ್ನು ಸಮಾಜದ ಜನರು ಅನುಸರಿಸಿಕೊಂಡು ಹಸಿರೇ ಉಸಿರಾಗಿ ವಿದ್ಯಾರ್ಥಿಗಳು ಗಿಡ ನೆಡುವುದರ ಮೂಲಕ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳುವುದು ಅನಿವಾರ್ಯತೆ ಇದೆ ಮತ್ತು ಪ್ರಕೃತಿಯಲ್ಲಿಯ ತಾಪಮಾನ ಕಡಿಮೆ ಮಾಡುವಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಡಸುವುದರಿಂದ ಸಮಯಕ್ಕೆ ಸರಿಯಾಗಿ ಮಳೆ ಬೀಳುವುದು ಮತ್ತು ಬೆಳೆ ಸರಿಯಾಗಿ ಬರುವುದು ಎಂದು ಕರೆ ನೀಡಿದರು.
ಶಾಲೆಯ ಸ್ಥಾನಿಕ ಸಮಿತಿಯ ಅಧ್ಯಕ್ಷರಾದ ಸಂಗ್ರಾಮಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಆಮ್ಲಜನಕ ಕೊಡುವಂತಹ ಗಿಡಗಳು ನೆಡುವುದು ಮತ್ತು ಅವುಗಳ ಪೆÇೀಷಣೆ ಮಾಡುವ ಕಾರ್ಯ ವಿದ್ಯಾರ್ಥಿಗಳ ಹೊಣೆಗಾರಿಕೆ ಇದೆ ಆದುದ್ದರಿಂದ ಇಂತಹ ಕಾರ್ಯಕ್ರಮದ ಮುಖಾಂತರ ಜನಪ್ರಜ್ಞೆ ಮೂಡಿಸುವಂತೆ ಆಗಬೇಕಾಗಿದೆ. ಪ್ರಕೃತಿಯಲ್ಲಿ ಜೀವಿಗಳಿಗೆ ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ವಾತಾವರಣ ದೊರಕುವಂತೆ ಮಾಡುವುದು ಅವಶ್ಯಕತೆ ಇದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಡಾ|| ತೋಂಟದ ಸಿದ್ಧಲಿಂಗ್ ಪ್ರೌಡ ಶಾಲೆಯ ಹಳೆ ವಿದ್ಯಾರ್ಥಿಯಾದ ಸುಮೀತ ಗುಣವಂತ ಭಾಲ್ಕಿಯ ಕರಡ್ಯಾಳ್ ಚನ್ನಬಸವ ಗುರುಕುಲದಲ್ಲಿ ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದಿರುವ ಹಿನ್ನಲೆಯಲ್ಲಿ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಸುಧಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮಕ್ಕಳು ‘ಪರಿಸರ ರಕ್ಷಣೆ’ ಕುರಿತು ಕಿರುನಾಟಕ ಸಾದರಪಡಿಸಿದರು. ಕು|| ಭಾಗ್ಯಶ್ರೀ ಸ್ವಾಗತ ಕೋರಿದರೆ, ವೈಶಾಲಿ ನಿರೂಪಿಸಿದರು. ಭಾಗ್ಯಲಕ್ಷಿ??ೀ ವಂದಿಸಿದರು. ಶಾಲೆಯ ಶಿಕ್ಷಕ ವೃಂದದವರಾದ ಗಿರಿಜಾ ಹೊನ್ನಾ, ವನಜಾಕ್ಷಿ, ಯೋಗಿತಾ, ಮೀನಾಕ್ಷಿ, ಪವಿತ್ರಾ, ಚಾಮುಂಡೇಶ್ವರಿ, ರೋಹಿಣಿ, ಗಾಯತ್ರಿ, ಅಂಬಿಕಾ, ದ್ರಾಕ್ಷಣಿ, ರೇಣುಕಾ, ಅನ್ನಪೂರ್ಣ, ವಿಶ್ವನಾಥ, ಅಶೋಕ, ದಿಲೀಪ, ಸಿಬ್ಬಂದಿಗಳಾದ ಪವನ್, ಗುಂಡಮ್ಮಾ ಉಪಸ್ಥಿತರಿದ್ದರು.