ಸಮಾಜಮುಖಿ ಚಿಂತನೆಯಡಿ ನಿವೃತ್ತಿ ಜೀವನ ಸಾಗಲಿ
ಕರಜಗಿ:ಜೂ.10:ಮೌಲ್ಯಯುತ ಶಿಕ್ಷಣ ನೀಡುತ್ತಾ ಶಿಕ್ಷಣ ರಂಗದಲ್ಲಿ ಹಲವಾರು ಚೇತನಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಶಿಕ್ಷಕರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖೀ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮುಖ್ಯಗುರುಗಳಾದ ಮಹಿಬೂಬ ಗುಲ್ಯಾಳ ತಿಳಿಸಿದರು.
ಅಫಜಲಪುರ ತಾಲೂಕಿನ ತೆಲ್ಲೂಣಗಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಶಿಕ್ಷಕ ಮಲ್ಲಿಕಾರ್ಜುನ ಭತಗುಣಗಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು,ಬೋಧನಾ ಕೌಶಲ್ಯದಿಂದ ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸರ್ವರೊಂದಿಗೆ ಉತ್ತಮ ಬಾಂಧವ್ಯ???ಂದಿಗೆ ಸಾರ್ಥಕ ಸೇವೆ ಸಲ್ಲಿಸಿದ ಮಲ್ಲಿಕಾರ್ಜುನ ಭತಗುಣಗಿ ಅವರ ಸೇವೆ ಇಲಾಖೆಗೆ ತೃಪ್ತಿ ತಂದಿದೆ.ಅತ್ಯಂತ ಶಿಸ್ತಿನ ಶಿಕ್ಷಕರಾದ ಮಲ್ಲಿಕಾರ್ಜುನ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಅಲ್ಲದೆ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಅತ್ಯಂತ ಪ್ರೀತಿಗೆ ಪಾತ್ರರಾದ ಶಿಕ್ಷಕರಾಗಿದ್ದರು.ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರತಿವರ್ಷ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
ನಿವೃತ್ತಿ ಹೊಂದಿರುವ ಶಿಕ್ಷಕ ಸನ್ಮಾನ ಸ್ವೀಕರಿಸಿ ಮಲ್ಲಿಕಾರ್ಜುನ ಭತಗುಣಗಿ ಮಾತಾನಾಡಿ,ಮಕ್ಕಳೊಂದಿಗೆ ಕಳೆದ ದಿನಗಳು, ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದಿ ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಚಂದ್ರಕಾಂತ ಬನಸೋಡಿ,ವಂಸತರಾವ್ ಚಿತಪೂರ, ಸಂಜಯಕುಮಾರ,ಶ್ರೀಶೈಲ್ ಹೂಗಾರ, ಮಹಾದೇವಪ್ಪ ಚಿತಪೂರ, ಸಿದ್ದಯ್ಯ ಸ್ವಾಮಿ, ಮಹ್ಮದ್ ಹನೀಫ್,ಗಾಲೀಬಸಾಬ ಮಸಾಲೆವಾಲೆ,ಶ್ರೀಶೈಲ್ ಮಾಗಣಗೇರಿ,ಪಿಂಟು ಕರಜೋಳ, ಅರವಿಂದ್ ಕರಜೋಳ,ಶ್ರೀಶೈಲ್ ಕೋಳಿ,ಸಿದ್ದಮ್ಮ ಬೆಂಗಾಲಿ,ಸುರೇಶ್ ಪಾಟೀಲ್ ,ಶ್ರೀಮಂತ ಬಗಲಿ,ಶಿವಾನಂದ ರೇವೂರ,ಮಹ್ಮದ್ ಹನೀಫ್ ಸೇರಿಕಾರ,ಸದಾಶಿವ ಹೊಸಮನಿ,ಯಲ್ಲಪ್ಪ ಚಿಂಚೋಳಿ,ಶರಣು ಕಣ್ಣಿ,ಶಿವಕುಮಾರ್ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.