ಹಿಡಕಲ್ ಗ್ರಾಮದಲ್ಲಿ ಕಲುಷಿತ ನೀರು
ಚನ್ನಮ್ಮನ ಕಿತ್ತೂರ,ಜೂ 10: ದೇಶದ ಜನ ಕಲುಷಿತ ನೀರು ಸೇವಿಸಬಾರದೆಂದು ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿತ್ತು. ಆದರೆ ಸಮೀಪದ ಖಾನಾಪೂರ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಸಾರ್ವಜನಿಕರು ಕಲುಷಿತ ನೀರನ್ನು ಸೇವಿಸುವ ಪರಿಸ್ಥಿತಿ ಇದೆ.
ಕೇರವಾಡ ಗ್ರಾಪಂ ವ್ಯಾಪ್ತಿಗೆ ಒಳಪಡುವ ಈ ಗ್ರಾಮವೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಸುಮಾರು 4 ಸಾವಿರ ಜನಸಂಖ್ಯೆ ಹೊಂದಿದ್ದು 7 ಜನ ಪಂಚಾಯತಿ ಸದಸ್ಯರಿದ್ದಾರೆ. ಆದರೂ ಕಲುಷಿತ ನೀರನ್ನು ಸೇವಿಸುವುದು ನಮಗೆ ತಪ್ಪಿಲ್ಲವೆಂದು ಸುದ್ದಿ ಮಾಧ್ಯವiದವರಿಗೆ ಸಾರ್ವಜನಿಕರು ಹೇಳುತ್ತಾರೆ.
ಈಗಾಗಲೇ ತಾಲೂಕಾ ದಂಡಾಧಿಕಾರಿಗಳ ಸಭೆಯಲ್ಲಿ ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರಿನ ಕೊರತೆಯಾಗದಂತೆ ಆದೇಶ ಹೊರಡಿಸಿದ್ದರು. ಅದನ್ನು ಧಿಕ್ಕರಿಸಿದ ಅಧಿಕಾರಿಗಳು ಸಾರ್ವಜನಿಕರಿಗೆ ಕಳೆದ ಮೂರು ತಿಂಗಳಿಂದ ಶುದ್ಧ ನೀರಿನ ಬದಲು ಕಲುಷಿತ ನೀರನ್ನೇ ಕುಡಿಸುತ್ತಿದ್ದಾರೆ.