ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ತಂತ್ರಜ್ಞಾನವನ್ನು ಕಾಗದರಹಿತವನ್ನಾಗಿ ಮಾಡಲುಒಂದು ದಿನದ ಕಾರ್ಯಾಗಾರ
ಬೀದರ :ಜೂ.10: ನಗರದ ಪ್ರತಿಷ್ಠಿತ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಕಾಗದರಹಿತ ತಂತ್ರಜ್ಞಾನವನ್ನು ಬಳಸುವ ಕುರಿತು ಕಾರ್ಯಗಾರವನ್ನು ಸಸಿಗೆ ನೀರೇಯುವುದರ ಮುಖಾಂತರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ.ವಿಠ್ಠಲ ರಡ್ಡಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್.ಕೆ. ಸಾತನೂರ, ಪ್ರೊ: ಭರತ ಕನಗುಡೆ ಸಂಸ್ಥಾಪಕರು ಆತಂರಿಕ ಗುಣಮಟ್ಟ ಭರವಸೆ ಕೋಶ ಭಾರತ ಇವರ ಅಮೃತಹಸ್ತದಿಂದ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ನಿವೃತ್ತಿ ಪ್ರಾಂಶುಪಾಲರಾದ ಡಾ. ಎಸ್.ಕೆ. ಸಾತನೂರ ಅವರು ತಮ್ಮ ಉದ್ಘಾಟನಾ ನುಡಿಯನ್ನು ಹೇಳುತ್ತಾ ಮಹಾವಿದ್ಯಾಲಯದಲ್ಲಿ ಎಲ್ಲಾ ನುರಿತ ಪ್ರಾಧ್ಯಾಪಕರು ನ್ಯಾಕ್ ‘ಎ’ ಶ್ರೇಣಿ ಪಡೆಯಲು ಹಗಲಿರಳು ಶ್ರಮಿಸಿದ್ದಾರೆ ಇದು ನಮಗೆ ಹೆಮ್ಮೆಯ ವಿಷಯ ಇವತ್ತಿನ ಕಾರ್ಯಗಾರದಿಂದ ತಾವು ಇನ್ನಷ್ಟು ಅನುಭವವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಮಹಾವಿದ್ಯಾಲ ಉನ್ನತ ಶ್ರೇಣಿ ಪಡೆಯಲು ಸಹಕಾರಿಯಾಗುತ್ತದೆ. ಈ ಕಾರ್ಯಗಾರದ ಸದುಪಯೋಗ ಪಡೆದುಕೊಂಡು ತಾವು ಇನ್ನೀತರರಿಗೂ ತಿಳಿಸುವಂತೆ ಸಬಲರಾಗಬೇಕೆಂದು ನುಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರೊ: ಭರತ ಕನಗುಡೆ ಸಂಸ್ಥಾಪಕರು ಆತಂರಿಕ ಗುಣಮಟ್ಟ ಭರವಸೆ ಕೋಶ ಭಾರತ ಮಾತನಾಡುತ್ತಾ ಇಂದಿನ ತಂತ್ರಜ್ಞಾನದಲ್ಲಿ ಐ.ಐ.ಕ್ಯೂ.ಎ. ಎಸ್.ಎಸ್.ಆರ್., ಎಸ್.ಎಸ್., ಪಿ.ಟಿ.ವಿ., ಡಿ.ವಿ.ವಿ. ಎಸ್.ಓ.ಪಿ., ಇವುಗಳನ್ನು ಕಾಗದರಹಿತ ವಿಷಯಗಳಾಗಿ ಪರಿವರ್ತಸಿ ನಿಮ್ಮ ಎಸ್.ಎಸ್.ಆರ್.ನ್ನು ಸಿದ್ದಪಡಿಸಬೇಕು ಹಾಗೂ ವಿಭಾಗಗಳು, ಸಮಿತಿಗಳು ಹಾಗೂ ಗ್ರಂಥಾಲಯ, ಕಛೇರಿ ಇವುಗಳಲ್ಲಿ ತಮ್ಮ ದಾಖಲೆಗಳನ್ನು ಕಾಗದರಹಿತವಾಗಿ ಬಳಸಿ ಒಂದೊಂದು ಮೂಲ ಪ್ರತಿಯನ್ನು ತಮ್ಮ ಹತ್ತಿರ ಸುರಕ್ಷಿತವಾಗಿ ಇಟಿಕೊಳ್ಳಬೇಕು ಹಾಗೂ ಕ್ಯಾಮ್ ಸ್ಯ್ಕಾನರ್, ಗೂಗಲ್ ಡ್ರೈವ್, ಗೂಗಲ್ ಡಿ.ಓಸಿ. ಲ್ಯಾಪ್ ಟಾಪ್, ಐ.ಪ್ಯಾಡ್, ಸ್ಮಾರ್ಟ್ ಫೋನ್, ಸ್ಯ್ಕಾನರ್, ಪ್ರಿಂಟರ್ ಈ ಎಲ್ಲಾ ಆ್ಯಪ್‍ಗಳನ್ನು ಬಳಸಿ ನಾವು ಐ.ಕ್ಯೂ.ಎ.ಸಿ. ದಾಖಲೆಗಳನ್ನು ಕಾಗದರಹಿತ ಮಾಡಿದಾಗ ಮುಂದಿನ ದಿನಗಳಲ್ಲಿ ಒಳ್ಳೆಯ ಶ್ರೇಣಿ ಪಡೆಯಲು ಸಾಧ್ಯವಾಗುತ್ತದೆ. ಇಂತಹ ತಂತ್ರಜ್ಞಾನವನ್ನು ಐ ಲವ್ ಪಿಡಿಎಫ್ ಆನ್‍ಲೈನ್ ಕನವರ್ಟರ್ ಇದನ್ನು ಸಮರ್ಥವಾಗಿ ಬಳಸಬೇಕು ಎಂದು ಮಾರ್ಮಿಕವಾಗಿ ನುಡಿದರು.
ಈ ಕಾರ್ಯಕ್ರಮದ ಘನ ಅಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ತಂತ್ರಜ್ಞಾನದ ಬಳಕೆಯಿಂದ ಕಾಗದ ಬಳಸುವುದನ್ನು ಕಡಿಮೆ ಮಾಡಿ ಮರಗಿಡಗಳನ್ನು ಉಳಿಸಿ ಪರಿಸರವನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಪರಿಸರವಿದ್ದರೆ ನಾವು ‘ಹಸಿರೆ ಉಸಿರು’ ಈ ಹಸಿರು ಕ್ರಾಂತಿಯನ್ನು ಮಾಡಲು ಪ್ರತಿಯೊಬ್ಬರು ಮರಗಿಡಗಳನ್ನು ನೆಟ್ಟು ಪೋಷಿಸಿ ರಕ್ಷಣೆ ಮಾಡಿದಾಗ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಬಹುದೆಂದು ಮಾರ್ಮಿಕವಾಗಿ ನುಡಿದರು.
ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕನ್ನಕಟ್ಟೆ ಇವರೆಲ್ಲರೂ ಉಪಸ್ಥಿತರಿದ್ದರು ಕಾರ್ಯಕ್ರಮ ಮೊದಲಿಗೆ ಶ್ರೀಮತಿ ರೇಣುಕಾ ಸ್ವಾಮಿ ಪ್ರಾರ್ಥನೆ ಗೀತೆ ಹಾಡಿದರೆ, ಸ್ವಾಗತವನ್ನು ಮಹಾವಿದ್ಯಾಲಯದ ಉಪ ಪ್ರಾಂಶುಪಾಲರು ಹಾಗೂ ಆತಂರಿಕ ಗುಣಮಟ್ಟ ಭರವಸೆ ಕೋಶ ಅಧಿಕಾರಿಗಳಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾಡಿದರೆ, ಸಂಚಾಲನೆಯನ್ನು ಕು. ನಾಗರಾಣಿ ಪಾಲಂ ಉಪನ್ಯಾಸಕರು ವಾಣಿಜ್ಯ ವಿಭಾಗ, ನಡೆಸಿಕೊಟ್ಟರೆ ಶ್ರೀ ಪ್ರವೀಣ ಪುರೋಹಿತ, ಉಪನ್ಯಾಸಕರು ಭೌತಶಾಸ್ತ್ರ ವಿಭಾಗ ವಂದಿಸಿದರು.
ಕಾರ್ಯಕ್ರಮದಲ್ಲಿ ಬೀದರ ಜಿಲ್ಲೆಯ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿವಿಧ ವಿಭಾಗಳ ಮುಖ್ಯಸ್ಥರು ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.