ಕೋಲಿ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ
ಕಲಬುರಗಿ:ಜೂ.10: ಕೋಲಿ ಸಮಾಜದ ಸರ್ಕಾರಿ ನೌಕರರು ಸಮುದಾಯದ ಏಳ್ಗೆಗೂ ಅವಿರತ ಶ್ರಮವಹಿಸಬೇಕು ಎಂದು ಮಹರ್ಷಿ ವೇದ ವ್ಯಾಸ ಮಂಥನ ಪ್ರೇರಣಾ ಟ್ರಸ್ಟ್ ಅಧ್ಯಕ್ಷ ಹಾಗೂ ನಿವೃತ್ತ ಡಿಎಚ್‍ಓ ಡಾ. ಮಲ್ಲಿಕಾರ್ಜುನ ಮುಕ್ಕಾ ಹೇಳಿದರು.
ನಗರದ ಐವಾನ್ ಇ ಶಾಹಿ ಅತಿಥಿಗೃಹ ಸಭಾಂಗಣದಲ್ಲಿ ಜಿಲ್ಲಾ ಕೋಲಿ(ಕಬ್ಬಲಿಗ) ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹೊರತರಲಾದ ಸ್ನೇಹ ಸಂಗಮ ಪರಿಚಯ ಪರಿಷ್ಕøತ ಗ್ರಂಥದ ದಾನಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜಕೀಯ ರಹಿತ ಸಂಘಟನೆ ಇದಾಗಿದ್ದು, ಕೇವಲ ತಮ್ಮ ಕುಟುಂಬದ ಬಗ್ಗೆ ಕಾಳಜಿವಹಿಸದೆ, ಸಮಾಜದ ಬೆಳವಣಿಗೆ ತಾವು ಇದ್ದ ಕ್ಷೇತ್ರದಿಂದಲೇ ಅಳಿವು ಸೇವೆ ಮಾಡುವ ಮೂಲಕ ತಮ್ಮ ಕೊಡುಗೆ ನೀಡಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಎಂ. ಜಮಾದಾರ್ ಮಾತನಾಡಿ, ಸರ್ಕಾರಿ ನೌಕರರು ಸಂಘಟಿತರಾಗಿರುವುದಕ್ಕೆ ಈ ಪರಿಚಯ ಗ್ರಂಥವೇ ಕೈಗನ್ನಡಿ. ಈ ನಿಟ್ಟಿನಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕವಾಗಿ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುವುದು ಎಂದರು.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಗನ್ನಾಥ ಜಮಾದಾರ್,
ಅಬಕಾರಿ ಇಲಾಖೆಯ ನಿವೃತ್ತ ಅಧೀಕ್ಷಕ ಶರಣಪ್ಪ ಕುಮಸಿ, ನಿವೃತ್ತ ಇಂಜಿನಿಯರ್ ಶಿವಲಿಂಗಪ್ಪ ಕಿನ್ನೂರ್, ಸಂಘದ ಗೌರವ ಅಧ್ಯಕ್ಷ ನಾಮದೇವ ಕಡಕೋಳ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಬಿ. ಸತೀಶಕುಮಾರ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು. ಇದೇ ವೇಳೆಗೆ ಪರಿಷ್ಕøತ ಗ್ರಂಥ ಹೊರತರುವಲ್ಲಿ ಶ್ರಮವಹಿಸಿದ 250ಕ್ಕೂ ನೌಕರರು, ದಾನಿಗಳನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಸಪ್ಪನಗೋಳ, ಎಲ್.ಬಿ. ಹಿಟ್ಟಿನ, ಮಾಣಿಕ ಕನಕಟ್ಟಿ, ಧರ್ಮರಾಜ ಜವಳಿ, ಸಿದ್ದಪ್ಪ ಮಹಾಗಾಂವ್, ರಾಜಶೇಖರ ಪೋಲಕಪಳ್ಳಿ, ಸಂತೋಷ ಮೆಟಗಾರ, ಸೂರ್ಯಕಾಂತ ಗುಡ್ಡೊಡಗಿ, ಅವ್ವಣ್ಣ ತಳವಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ತಳವಾರ ಸ್ವಾಗತಿಸಿದರು