ನೀಟ್ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಗೆ ಪ್ರಥಮ
ಬ್ಯಾಡಗಿ,ಜೂ10: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ಈ ಬಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಬ್ಯಾಡಗಿಯ ವಿದ್ಯಾರ್ಥಿ ಸತೀಶಗೌಡ ಮಲ್ಲನಗೌಡ್ರ 720 ಕ್ಕೆ 678 (ಂಟಟ Iಟಿಜiಚಿ ಖಚಿಟಿಞiಟಿg) ಅಂಕಗಳನ್ನು ಪಡೆಯುವ ಮೂಲಕ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಶಿಕ್ಷಕ ಪ್ರಭುಗೌಡ ಮಲ್ಲನಗೌಡ್ರ ಮಗನಾದ ಸತೀಶಗೌಡ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯ ಮೂಲಕ ಶೇ 99.57ರಷ್ಟು ಅಂಕಗಳನ್ನು ಪಡೆದಿದ್ದು ಮುಂದೆ ವೈದ್ಯನಾಗುವ ಕನಸನ್ನು ಹೊಂದಿದ್ದಾನೆ. ಸದರಿ ವಿದ್ಯಾರ್ಥಿಗೆ ಭೋದಕ ಸಿಬ್ಬಂದಿ ವರ್ಗದವರು ಮತ್ತು ಹಿತೈಷಿಗಳು ಶುಭ ಕೋರಿ ಹಾರೈಸಿದ್ದಾರೆ.