ಮಕ್ಕಳೊಂದಿಗೆ ಮಕ್ಕಳಾಗೋಣ
ಬೀದರ:ಜೂ.10: ನಗರದ ಮೈಲೂರು ಕ್ರಾಸ್ ಮಹಾಲಕ್ಷಿ??ೀ ಸಭಾಂಗಣದಲ್ಲಿ ಬುದ್ದಾದೇವಿ ಅಶೋಕ ಸಂಗಮ ಬರೆದಿರುವ, ಅಕ್ಷಯ ಪ್ರಕಾಶನ ಮಾಡಿರುವ ಮಕ್ಕಳೊಂದಿಗೆ ಮಕ್ಕಳಾಗೋಣ ಗದ್ಯ ಮತ್ತು ಪದ್ಯದಿಂದ ಕೂಡಿದ ಕೃತಿಯನ್ನು ದೇಶಪಾಂಡೆ ಸಾಹಿತ್ಯ ಮತ್ತು ಸಂಸ್ಕøತಿಕ ಪ್ರತಿಷ್ಠಾನ ಬೀದರ ವತಿಯಿಂದ ಬಿಡುಗಡೆಗೊಂಡಿತ್ತು. ಬುದ್ಧ ಬಸವ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ದೀಪ ಬೆಳಗಿಸುವುದರ ಮೂಲಕ ಕೃತಿ ಬಿಡುಗಡೆ ಮಾಡಿದ ಜಿಲ್ಲೆಯ ಹಿರಿಯ ಸಾಹಿತಿ ಭಾರತಿ ವಸ್ತ್ರ ಮಾತನಾಡಿ ನೂರು ಪುಟದ 30 ಲೇಖನಿಗಳಿಂದ ಕೂಡಿದ ಕೃತಿ ಸಮಾಜಕ್ಕೆ ಉಪಯುಕ್ತವಾದ ಕೃತಿಯಾಗಿದೆ. ಕೃತಿ ಕುರಿತು ಡಾ. ಶ್ರೇಯಾ ಮಹೇಂದ್ರಕರ ಪೆÇ್ರ. ಶಿವಕುಮಾರ ಕಟ್ಟೆ, ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿದರು. ಬುದ್ಧ ನೀ ನಮ್ಮೇಲ್ಲರೋಳಗೆ, ತತ್ವಜ್ಞಾನಿ ಅಂಬೇಡ್ಕರ, ಅಶೋಕ ವಿಜಯ ದಶಮಿ, ಬಿ ಶ್ಯಾಮಸುಂದರ, ಮಹಾತ್ಮ ಫುಲೆ, ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ, ಬಸವಣ್ಣ, ಶಿಕ್ಷಣ ಸ್ವಾಭಿಮಾನ, ಶಿಕ್ಷಕ ಕನ್ನಡ ರಾಜ್ಯೋತ್ಸವ, ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ,ಲೇಖನಿ, ಸ್ವಾತಂತ್ರ?? ದಿನಾಚರಣೆ, ಕರ್ಮಫಲ ಧರ್ಮ ನಿಲಯ, ಬ್ರಾಹ್ಮಣ ಯಾರು? ಪತಿ ಪತ್ನಿಯ ಸಂಬಂಧ, ಬೆಳಕಿನ ದೀಪ ಕಠಣ ತಪಸ್ಸು, ರಸ್ತೆ ನಿಯಮ ಪಾಲನೆ, ಕೃತಿಯಲ್ಲಿ ಉತ್ತಮವಾಗಿ ಮೂಡಿ ಬಂದಿವೆ. ಮಾಹಿತಿ ತಂತ್ರಜ್ಞಾನದಲ್ಲಿ ಕಾಲ ಕಳೆಯುತ್ತಿರುವ ನಾವು ಜೀವನ ಮೌಲ್ಯ ಪರಿಸರಕ್ಕೆ ಒತ್ತು ಕೊಟ್ಟು ಜಾಗೃತಿ ಕಾರ್ಯಗಳು ಮಾಡಬೇಕ್ಕಾಗಿದೆ. ಸ್ವಾಭಿಮಾನದ ಹೆಣ್ಣು, ಮೌಲ್ಯ ಪದ್ಯ ರೂಪದಲ್ಲಿ ಮೂಡಿ ಬಂದಿವೆ. ಸ್ವಾಗತ ಪ್ರಾಸ್ತಾವಿಕ ನುಡಿ ಎಂಜಿ ದೇಶಪಾಂಡೆ ಮಾಡಿದರು, ನಾಡುಗೀತೆ ಡಾ. ಸುನೀತಾ ಬಿಕ್ಲೆ, ವೇದಿಕೆ ಮೇಲೆ ಕಸಾಪ ತಾಲ್ಲೂಕ ಅಧ್ಯಕ್ಷ ಎಂ ಎಸ್ ಮನೋಹರ, ಡಾ. ರಘುಶಂಖ ಭಾತಂಭ್ರಾ ಕಂಟೇಪ್ಪಾ ಗುಮ್ಮೆ, ವಿಜಯಲಕ್ಷಿ??ೀ ಗೌತಮಕರ್ ಪುಸ್ಪ ಕನಕ ಸ್ವರೂಪರಾಣಿ ನಾಗೂರೆ ಅಶೋಕ ಮೇತ್ರೆ ರಮೇಶ ಪೂಜಾರಿ ಮುರಳಿಧರ ಮೇತ್ರೆ ಆತ್ಮಾನಂದ ಬಂಬಳಗಿ ಓಂಕಾರ ಪಾಟೀಲ್ ಮೋಹನ ಪಾಟೀಲ್ ಡಾ. ಸುಬ್ಬಣ್ಣ ಕರಕನಳ್ಳಿ ರವಿದಾಸ ಕಾಂಬಳೆ, ಬಾಬುರಾವ ಮುಧಾಳೆ ಗಂಗಾಧರ ತಡಕಲ್ ರಮೇಶ ಇಟಗಿಕರ್ ಅಡೆಪ್ಪ ಹೊಸಮನಿ ಪ್ರಕಾಶ ಕುಲಕರ್ಣಿ ಸ್ವ ರಚಿತ ಕವಿತೆಗಳು ವಾಚನ ಮಾಡಿದರು. ವಂದನಾರ್ಪಣೆ ಅಶೋಕ ಸಂಗಮ ಮಾಡಿದರು ಭಾಗವಹಿಸಿದ ಗಣ್ಯರಿಗೆ ಬುದ್ದದೇವಿ ಸಂಗಮ ಗೌರವ ಸತ್ಕಾರ ಮಾಡಿದರು