ಸಮೀಕ್ಷೆ ಕಾರ್ಯಕ್ಕೆ ಚಾಲನೆ
ಬಾದಾಮಿ, ಜೂ10: ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ 2024-25 ನೇ ಸಾಲಿನ ಅರ್ಹ ಬಾಲಕಿಯರ ದಾಖಲಾತಿಗಾಗಿ ಸಮೀಕ್ಷೆ ಕಾರ್ಯ, ಜಾಗೃತಿ ಜಾಥಾ, ಗ್ರಾಮಸಭೆ ಇತ್ಯಾದಿ ಕಾರ್ಯಕ್ರಮಕ್ಕೆ ಕೆಜಿಬಿವ್ಹಿ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ವೈ ಕುಂದರಗಿ ಚಾಲನೆ ನೀಡಿದರು,
ನಂತರ ಮಾತನಾಡಿದ ಅವರು ಕೆಜಿಬಿವ್ಹಿ ವಸತಿ ಶಾಲೆಯ ವಿದ್ಯಾರ್ಥಿನಿಯರ ದಾಖಲಾತಿಯು ಇಲಾಖೆಯ ನಿಯಮಗಳ ಪ್ರಕಾರ ಎಸ್.ಸಿ, ಎಸ್.ಟಿ, ಒಬಿಸಿ ಮೈನಾರಿಟಿ ವರ್ಗಗಳಿಂದ ಶೇ75 ರಷ್ಟು ಹಾಗೂ ಬಿಪಿಎಲ್ ವರ್ಗದಿಂದ ಶೇ25 ರಷ್ಟು ದಾಖಲಾತಿ,ಅಲ್ಲದೆ ಅನಾಥ, ತಂದೆ/ತಾಯಿ ಇಲ್ಲದ ಮಕ್ಕಳ, ಶಾಲೆಯಿಂದ ಹೊರಗುಳಿದ ಶಾಲೆ ಬಿಟ್ಟ ಮಕ್ಕಳ ದಾಖಲಾತಿಗೆ ಆದ್ಯತೆ ನೀಡಬೇಕು. ಸಮೀಕ್ಷೆಯ ಲಾಭ ಇಂತಹ ಮಕ್ಕಳಿಗೆ ದೊರೆತು ಕೆಜಿಬಿವ್ಹಿ ಶಾಲೆಗೆ ದಾಖಲು ಮಾಡುವ ಮೂಲಕ ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಇನಾಂ ಹುಲ್ಲಿಕೇರಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ವ್ಹಿ.ಗೌಡಪ್ಪಗೌಡರ, ರಾಷ್ಟ್ರ ಪ್ರಶಸ್ತಿ ವಿಜೇತ ಶಾಲಾ ಮುಖ್ಯ ಶಿಕ್ಷಕಿ ಬಸಮ್ಮ ನರಸಾಪೂರ ಹಾಗೂ ಶಾಲಾ ಸಿಬ್ಬಂದಿ ವರ್ಗ ಮಕ್ಕಳೊಂದಿಗೆ ಪಾಲಕ ಪೆÇೀಷಕರು ಹಾಜರಿದ್ದರು.