ನೂತನ ಠಾಣೆ ನಿರ್ಮಾಣಕ್ಕೆ ಕರವೇ ಒತ್ತಾಯ
ಸೇಡಂ, ಜೂ,10: ಇಲ್ಲಿರುವ ಪೆÇೀಲಿಸ್ ಠಾಣೆಯು ತುಂಬಾ ಹಳೆಯದಾಗ್ಗಿದು ಮಳೆಗಾಲದಲ್ಲಿ ಚರಂಡಿ ಹಾಗೂ ರಸ್ತೆ ನೀರು ಪೆÇೀಲಿಸ್ ಠಾಣೆಯ ಒಳಗೆ ನುಗ್ಗಿ ಸರ್ಕಾರಿ ಪೀಠೋಪಕರಣಗಳಾದ ಕಂಪ್ಯೂಟರ್, ವಿಶೇಷ ದಾಖಲಾತಿ ಪತ್ರಗಳು ಸೇರಿದಂತೆ ಹಲವಾರು ಹಾನಿಯಾಗಿರುವ ಕಾರಣ ತಕ್ಷಣ ನೂತನ ಪೆÇಲೀಸ್ ಠಾಣೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಅಧ್ಯಕ್ಷ ರಾಮಚಂದ್ರ ಗುತ್ತೇದಾರ್ ಹಾಗೂ ಕರವೇ ಸೈನಿಕರು ಸಹಾಯಕ ಉಪ ವಿಭಾಗಾಧಿಕಾರಿ ಮುಖಾಂತರ (ತಹಸಿಲ್ದಾರ್ ಶಿವಾನಂದ ಮೇತ್ರೆ ಮೂಲಕ) ಪೆÇೀಲಿಸ್ ಅಧೀಕ್ಷಕರು ಕಲಬುರ್ಗಿ ರವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಈ ವೇಳೆಯಲ್ಲಿ ಮಹೇಶ್ ಪಾಟೀಲ್, ಚಂದ್ರಶೇಖರ್ ಪೂಜಾರಿ, ಪ್ರವೀಣ್, ದೇವು ನಾಟಿಕರ್, ಗುಂಡಪ್ಪ, ಮಲ್ಲಿಕಾರ್ಜುನ, ಸಿದ್ದಲಿಂಗಪ್ಪ, ಭೀಮಾಶಂಕರ, ವೆಂಕಟೇಶ್, ಸಂತೋಷ್, ಅನಿಲ, ರವಿಸಿಂಗ್, ಮಹೇಶ್ ರೆಡ್ಡಿ, ಮಲ್ಲಿಕಾರ್ಜುನ ತಳವಾರ್ ಇದ್ದರು.