ಜಿಲ್ಲಾಮಟ್ಟಕ್ಕೆ ಆಯ್ಕೆ
ಬೈಲಹೊಂಗಲ,ಸೆ25: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಬೈಲಹೊಂಗಲ ಪಟ್ಟಣದ ಕೆಆರ್‍ಸಿಇಎಸ್ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಖೋ ಖೋ ಪಂದ್ಯಾಟದಲ್ಲಿ ಉಡಿಕೇರಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಉತ್ತಮ ಪ್ರದರ್ಶನ ತೋರಿ ವಿಜಯಶಾಲಿಗಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಎಸ್‍ಡಿಎಂಸಿ ಅಧ್ಯಕ್ಷ ಮೈಲಾರ ತುರಾದಿ, ಗ್ರಾಮದ ಪ್ರಮುಖರಾದ ಬಸವರಾಜ ಬಿಲ್ಲಶಿವಣ್ಣವರ, ಮಲ್ಲಪ್ಪ ಗರ್ಜೂರ, ರಾಮಲಿಂಗಪ್ಪ ಕೋಟಗಿ, ಶಿವಪ್ಪ ಹುಂಬಿ ಹಾಗೂ ಮುಖ್ಯೋಪಾಧ್ಯಾಯ ರಾಜು ಯಲಿಗಾರ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಎಸ್.ಎಸ್.ಅಂದಾನಶೆಟ್ಟಿ ತರಬೇತಿ ನೀಡಿದ್ದರು.