ಒಳ ಮೀಸಲಾತಿ ಜಾರಿಗೆ ಬೃಹತ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
ನಂಜನಗೂಡು.ಸೆ.25:- ನಂಜನಗೂಡು ರಾಜ್ಯ ಆದಿಜಾಂಬವ ಮತ್ತು ಬಾಬು ಜಗಜೀವನ್ ರಾಮ್ ಸಂಘಗಳ ಒಕ್ಕೂಟದ ವತಿಯಿಂದ ಎಜೆ ಸದಾಶಿವ ಆಯೋಗ ನೀಡಿರುವ ವರದಿಯಂತೆ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೆರವಣಿಯ ಮೂಲಕ ತಾಲೂಕು ಕಚೇರಿಗೆ ತಲುಪಿದರು ಪರಿಶಿಷ್ಟ ಜಾತಿಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯವು ಆರ್ಥಿಕವಾಗಿ ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದು.
ನಗರಸಭೆ ಮಾಜಿ ಉಪಾಧ್ಯಕ್ಷ ದೇವರಾಜ್ ನಮ್ಮ ಹಕ್ಕಿಗಾಗಿ ಹಲವು ವರ್ಷಗಳಿಂದ ಪ್ರತಿಭಟ ನಡೆಸಿದ ಸಲುವಾಗಿ ಆಗಸ್ಟ್1 ರಂದು ಸುಪ್ರೀಂ ಕೋರ್ಟ್ ಏಳು ಮಂದಿ ನ್ಯಾಯ ಪೀಠವು ಸಂವಿಧಾನಬದ್ಧವಾಗಿ ಆಯಾಯ ರಾಜ್ಯದವರು ಒಳ ಮೀಸಲಾತಿ ನೀಡಬೇಕೆಂದು ಆದೇಶ ನೀಡಿದೆ.
ನಮ್ಮ ಘನ ಸರ್ಕಾರ ಮಾದಿಗ ಸಮುದಾಯವನ್ನು ತೀವ್ರ ನಿರ್ಲಕ್ಷೆ ವಹಿಸಿ ಮಾದಿಗ ವಿರೋಧಿ ಸರ್ಕಾರವಾಗಿದೆ.
ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಬೇಕೆಂದು ಸಂವಿಧಾನಬದ್ಧವಾಗಿ ಆದೇಶ ಮಾಡಬೇಕೆಂದು ಒತ್ತಾಯಿಸಿದರು. ನಂತರ ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸ್ನವರು ಮನವಿಪತ್ರ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ರೈಲ್ವೆ ಗೂಡ್ಸ್ ಕೂಲಿ ಕಾರ್ಮಿಕರ ಅಧ್ಯಕ್ಷ ಚಂದ್ರು ಸ್ವಾಮಿ ರಾಜೇಶ್ ಪ್ರಸನ್ನ ದೇವರಾಜ್ ಕುಮಾರ್ , ಮಂಗಳಮ್ಮ ವಿಜಯಲಕ್ಷ್ಮಿ ಕುಮಾರ್ ಮಧುರಾಜ್ ಮತ್ತಿತರರು ಹಾಜರಿದ್ದರು.