ಪಿ.ಎಂ.ಪೋಷಣಾ ಅಭಿಯಾನ
ಬಾಗೇಪಲ್ಲಿ.ಸೆ.೨೫-ಮಕ್ಕಳು ಬೆಳಿಗ್ಗೆ ವ್ಯಾಯಾಮ, ಯೋಗ ಮಾಡುವುದರ ಮೂಲಕ ಪೌಷ್ಠಿಕ ಆಹಾರಗಳ ಸೇವನೆಯೋಂದಿಗೆ ತಿಂಗಳ ತಪಾಸಣೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಪಶುಪುಲವಾರಪಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿ.ಸತ್ಯನಾರಾಯಣ್ ಹೇಳಿದರು.
ಚೇಳೂರು ತಾ.ಎಂ.ನಲ್ಲಗುಟ್ಲಪಲ್ಲಿ ಗ್ರಾ.ಪಂ.ಯ ಪಶುಪುಲವಾರಪಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಪಿ.ಎಂ.ಪೊಷಣಾ ಅಭಿಯಾನ್ ಕಾರ್ಯಕ್ರಮದಲ್ಲಿ ಮಾತನಾಡಿ ನಿತ್ಯ ಸರಳ ವ್ಯಾಯಾಮ, ದ್ಯಾನ, ಯೋಗಾಸನ ಮೂಲಕ ನಾವು ಸಂಪಾದಿಸಿಕೊಳ್ಳುಲೇಬೇಕಾದ ಅಮೂಲ್ಯ ನಿಧಿ ಇದಂತೆ.
ಸಿರಿದಾನ್ಯ ಬಳಸುವುದರಿಂದ ಆರೋಗ್ಯ ಲಭಿಸುತ್ತದೆ, ಬೆರೆಕೆ ಸೊಪ್ಪು, ಮಜ್ಜಿಗೆ ಮೊಸರು.ಮೊಳಕೆ ಕಟ್ಟಿದ ಕಾಳುಗಳನ್ನು ಬಳಸಬೇಕು. ಬಡತನವೇ ಇರಲಿ, ಸಿವಂತಿಕೆಯೇ ಇರಲಿ, ಮನೆಯಲ್ಲಿನ ಎಲ್ಲರ ಮನಸ್ಸಿನಲ್ಲೂ ಸಮಾಧಾನ ಚಿತ್ತವಿರಬೇಕು ಭಜನೆ, ಸಾಮೂಹಿಕ ದ್ಯಾನ ಮಾಡುವುದರಿಂದ ನೆಮ್ಮದಿಯ ಜೀವನ ಸಾಗಿಸಬಹುದು ಎಂದರು.
ಪಿ.ಎಂ.ಪೋಷಣಾ ಅಭಿಯಾನ್‌ದಲ್ಲಿ ವಿವಿಧ ಧಾನ್ಯಗಳ ಹಣ್ಣುಗಳ ಹೂವುಗಳು ಇಟ್ಟು ರಂಗೋಲಿಯ ಆಕಾರದಲ್ಲಿ ಮಾಡಿದ್ದು ಎಲ್ಲರಿಗೂ ಆಕರ್ಷಕದಾಯಕವಾಗಿ ವಿಶೇಷವಾಗಿ ಮಾಡಿದ್ದರು.
ಕಾರ್ಯಕ್ರಮದಲ್ಲಿ ಸ.ಪ್ರಾ.ಶಾಲೆಯ ಸಹಶಿಕ್ಷಕ ವಿ.ಲಕ್ಷ್ಮೀನಾರಾಯಣ್, ನರಸಿಂಹಪ್ಪ, ಸುನೀತ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರವಣಮ್ಮ ಸೇರಿದಂತೆ ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾ.ಪಂ.ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತರು ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಪೋಷಕರು ಭಾಗಿಯಾಗಿದ್ದರು.