ಆರೋಗ್ಯ ಕಾಪಾಡುವ ವ್ಯೆದ್ಯರಂತೆ ಪೌರ ಕಾರ್ಮಿಕರು
ವಿಜಯಪುರ.ಸೆ೨೫- ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸಾರ್ವಜನಿಕರ ಆರೋಗ್ಯ ಕಾಪಾಡುವ ವ್ಯೆದ್ಯರಾಗಿದ್ದಾರೆ ಎಂದು ಪುರಸಭಾ ಮುಖ್ಯಾಧಿಕಾರಿ ಸಂತೋಷ್ ತಿಳಿಸಿದರು.
ಇವರು ಪಟ್ಟಣದ ಪುರಸಭಾ ಆವರದಲ್ಲಿ ಪುರಸಭಾವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರನ್ನು ಸಮಾಜ ಕೀಳಾಗಿ ಕಾಣಬಾರದು. ಪೌರ ಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೊಡ್ಡ ಕಾರ್ಯವಲ್ಲ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ ಎಂದರು.
ಪುರಸಭಾ ಸದಸ್ಯ ನಂದಕುಮಾರು ಮಾತನಾಡಿ, ಪೌರಕಾರ್ಮಿಕ ಡಾಕ್ಟರ್ ಇದ್ದಂತೆ ಇವರು ಸ್ವಚ್ಚತೆ ಮಾಡದಿzರೆ ಇಡೀ ನಗರವೇ ಆರೋಗ್ಯ ಕೆಟ್ಟು ಹೋಗುತ್ತದೆ. ಸರಕಾರ ಪೌರಕಾರ್ಮಿಕರ ಮೂಲಭೂತ ಸೌಕರ್ಯದ ಕಡೆ ಸರಕಾರ ಗಮನಹರಿಸಬೇಕು, ಅವರಿಗೂ ವಸತಿಗಳನ್ನು ಒದಗಿಸಿಕೊಡಬೇಕು, ಈಗಾಗಲೇ ಪುರಸಭೆ ಎರಡು ಬಾರಿ ಸರಕಾರದಿಂದ ಸ್ವಚ್ಚತೆಗೆ ಗೌರವ ಪ್ರಶಸ್ತಿ ಪಡೆದುಕೊಂಡಿದೆ ಎಂದರು.
ಪೌರಕಾರ್ಮಿಕರಿಗೆ ಪ್ರತಿ ತಿಂಗಳು ಸಂಬಳ ಕೊಡಿ: ನಮಗಾಗಿ ರಾತ್ರಿ ಅಗಲು ಎನ್ನದೇ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಸರಕಾರ ಸಂಬಳ ನೀಡಲು ಎಲ್ಲಾ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಸಾರ್ವಜನಿಕರು ಎಲ್ಲಂದರಲ್ಲಿ ಕಸ ಎಸೆಯಬಾರದು ಪಟ್ಟಣ ಎಷ್ಟು ಸ್ವಚ್ಚತೆ ಇದ್ದರೆ ನಮ್ಮ ಆರೋಗ್ಯವು ಅಷ್ಟೇ ಚನ್ನಾಗಿರುತ್ತದೆ ಎಂದರು.
ಪುರಸಭಾ ಸದಸ್ಯ ಹನೀಪುಲ್ಲ ಮಾತನಾಡಿ, ಜನ್ಮಕೊಟ್ಟ ತಾಯಿ, ತಂದೆ ತಮ್ಮ ಮಕ್ಕಳಿಗಾಗಿ ಹೇಗೆ ದುಡಿಯುತ್ತಾರೋ ಹಾಗೆಯೇ ಅವರಿಗಿಂತಲೂ ಹೆಚ್ಚಿನ ಕೆಲಸ ನಮ್ಮ ಪೌರಕಾರ್ಮಿಕರು ಮಾಡುತ್ತಿದ್ದಾರೆ. ದೇಶ ಕಾಯುವ ಸೈನಿಕ ರಾತ್ರಿ ಹಗಲು ಎನ್ನದೇ ನಮ್ಮ ದೇಶ ಕಾಯುತ್ತಾರೆ ಅದೇ ರೀತಿ ಪಟ್ಟಣದ ಸ್ವಚ್ಚತೆ ಬಗ್ಗೆ ದುಡಿಯುತ್ತಿದ್ದಾರೆ. ಈಗಾಗಲೇ ಸರಕಾರದಿಂದ ಪೌರ ಕಾರ್ಮಿಕರಿಗೆ ತಕ್ಷಣವೇ ನಿವೇಶನ ಒದಗಿಸಲು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕಡೆ ಕಡತಗಳಿದ್ದು ಕೆಲವೇ ದಿನಗಳಲ್ಲಿ ಪೌರಕಾರ್ಮಿಕರಗ ನಿವೇಶನಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮ ವಹಿಸಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಪುರಸಭಾ ಪೌರ ಕಾರ್ಮಿಕರಿಗೆ ಸಮಾಜ ಸೇವಕಾರದ ಅಂಬರೀಶ್, ಕೆನರಾ ಬ್ಯಾಂಕ್, ಕೋಟಕ್ ಮಹೇಂದ್ರ ಬ್ಯಾಂಕ್ ವತಿಯಿಂದ ಮಿಕ್ಸಿ, ಸಮವಸ್ತ್ರ ಹಾಗೂ ಹೊದಿಕೆಗಳನ್ನು ಉಚಿತವಾಗಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರಾದ ಈ.ಸೀನಾ, ಉತ್ತಮ ಸೇವೆ ಸಲ್ಲಿಸಿ ನಿಧನರಾದ ತಾಯಮ್ಮನವರ ಪರವಾಗಿ ಅವರ ಮಗ ಶ್ರೀನಿವಾಸ್, ವಿಜಯಪುರ ಪುರಸಭೆಯ ಪೌರಕಾರ್ಮಿಕ ಮೇಸ್ತ್ರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದ ನಾಗರಾಜ್ ಹಾಗೂ ಪೌರಕಾರ್ಮಿಕರುಗಳಿಗೆ ರಗ್ಗುಗಳನ್ನು ವಿತರಿಸಲು ಪ್ರಾಯೋಜಕತ್ವ ವಹಿಸಿದ್ದ ಸಂಧ್ಯಾಅಂಬರೀಶ್ ದಂಪತಿ ಮತ್ತು ಸಮವಸ್ತ್ರಗಳ ಕಾಣಿಕೆ ನೀಡಿದ ಕೆನರಾ ಬ್ಯಾಂಕ್ ನ ಮ್ಯಾನೇಜರ್ ಎಲ್ ಶ್ರೀಧರ್ ರೆಡ್ಡಿರವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ವರಿ ಭಾಸ್ಕರ್, ವಿiಲ ಬಸವರಾಜು, ಪುರಸಭಾ ಸದಸ್ಯರಾದ, ಸಿ.ನಾರಾಯಣಸ್ವಾಮಿ, ರಾಜಣ್ಣ, ಬೈರೇಗೌಡ, ರಾಮು, ಮಂಜುಳ ಮುನಿರಾಜು, ಶ್ರೀರಾಮಪ್ಪ, ಸಲ್ಮಾ ಖಾನಂ, ಕವಿತಾ ಆಂಜೀನಪ್ಪ, ಶಿಲ್ಪ ಆಜಿತ್, ಭವ್ಯ ಮಧು, ಆಯೆಷಾ ಸೈಪುಲ್ಲ, ಪುರಸಭಾ ಮೇಸ್ತ್ರೀ ಅಪ್ಪಿ, ಕಂದಾಯ ಅಧಿಕಾರಿ ಚಂದ್ರು, ಕಂದಾಯ ನಿರೀಕ್ಷಕ ತ್ಯಾಗರಾಜ್, ಆರೋಗ್ಯ ಅಧಿಕಾರಿ ಲಾವಣ್ಯ, ಸಹನಾ, ಪುರಸಭೆ ಸಿಬ್ಬಂದಿಯಾದ ಅನಿಲ್, ಪವನ್ ಜೋಶಿ, ಜನಾರ್ಧನ, ಸುನೀಲ್, ಮಂಜುನಾಥ್, ಪೃಥ್ವಿ, ಶಿವ ನಾಗೇಗೌಡ, ಮೂರ್ತಿ, ವಿನೋದ್, ರವಿ, ಹೇಮಾವತಿ, ಲಿಂಗಣ್ಣ, ಕುಮಾರ್, ಮಂಜುನಾಥ್, ಹೇಮಂತ್ ಕುಮಾರ್, ಜನಾರ್ಧನ್, ಪುರಸಭಾ ಎಲ್ಲಾ ಪೌರಕಾರ್ಮಿಕರು ಇದ್ದರು.