ವಿನಾಯಕ ಸ್ವಾಮಿ ವಿಸರ್ಜನೆ
ವಿಜಯಪುರ.ಸೆ.೨೫-ಕಳೆದ ೧೫ ದಿನಗಳಿಂದ ಪಟ್ಟಣದ ವಿವಿಧಡೆ ವಿಶೇಷ ಅಲಂಕಾರಗಳೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಮಂದಿದ್ದ ವಿನಾಯಕ ಸ್ವಾಮಿ ಮೂರ್ತಿಯನ್ನು ಪಟ್ಟಣದಿಂದ ಆವತಿ ಬಳಿಯ ತಿಮ್ಮರಾಯಸ್ವಾಮಿ ಬೆಟ್ಟದ ರಸ್ತೆಯಲ್ಲಿನ ಕೆರೆಯಲ್ಲಿ ವಿಸರ್ಜನೆ ನಡೆಸಲಾಯಿತು.
ಪಟ್ಟಣದ ಗಾಂಧಿ ಚೌಕದ ವಿನಾಯಕ ಭಕ್ತ ಮಂಡಳಿಯವರಿಂದ ಏರ್ಪಡಿಸಲಾಗಿದ್ದ ೮೯ನೇ ವರ್ಷದ ವಿನಾಯಕ ಮೂರ್ತಿ, ಚೆನ್ನಕೇಶವ ಸ್ವಾಮಿ ದೇವಾಲಯ ಬಳಿಯ ಏಕದಂತ ಗೆಳೆಯರ ಬಳಗದ ೧೭ನೇ ವರ್ಷದ ವಿನಾಯಕ ಸ್ವಾಮಿ ಹಾಗೂ ಮಾರ್ಕೆಟ್ ರಸ್ತೆಯಲ್ಲಿನ ಚಿಕ್ಕ ಗುಂಡಪ್ಪನವರ ಕಟ್ಟಡದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಸ್ವಾಮಿರವರುಗಳನ್ನು ಪಟ್ಟಣದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಿ ಸೋಮವಾರದಂದು ಸಂಜೆ ಪೂಜಾ ಕಾರ್ಯಕ್ರಮಗಳೊಂದಿಗೆ ವಿಸರ್ಜಿಸಲಾಯಿತು.
ಈ ಸಂದರ್ಭದಲ್ಲಿ ಟನ್ ಜೆಡಿಎಸ್ ಮಾಜಿ ಅಧ್ಯಕ್ಷ ಎಸ್ ಭಾಸ್ಕರ್, ಗಾಂಧಿ ಚೌಕದ ವಿನಾಯಕ ಸ್ವಾಮಿ ಭಕ್ತ ಮಂಡಳಿಯ ಎಂ ಶಂಕರ್, ಯುವಕ ಸಂಘದ ಮಂಜುನಾಥ್, ಮಹಂತಿನ ಮಠದ ಅಧ್ಯಕ್ಷರಾದ ಪುನೀತ್, ಕಾರ್ಯದರ್ಶಿ ವಿ.ವಿಶ್ವನಾಥ್,ಎ. ಮಂಜುನಾಥ್ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷರಾದ ಸಿದ್ದರಾಜು, ರಾಜಣ್ಣ, ನಿವೃತ್ತ ಪೌರಾಯುಕ್ತರಾದ ವಿ ಶಿವಕುಮಾರ್, ಸಿ ಭಾಸ್ಕರ್, ಮನೋಹರ್, ಬಾಬು ಎಲ್ಲಾ ಭಕ್ತ ಮಂಡಳಿಗಳ ಸದಸ್ಯರು ಹಾಗೂ ವಿಜಯಪುರ ಪಟ್ಟಣದ ಜನತೆ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಕಷ್ಟು ಭಯ ಭಕ್ತಿಗಳಿಂದ ೧೫ ದಿನಗಳ ಕಾಲ ಪೂಜಿಸಿದ ವಿನಾಯಕ ಸ್ವಾಮಿರವರುಗಳನ್ನು ಗತ್ಯಂತರ ವಿಲ್ಲದೆ ಹೆಚ್ ಎನ್ ವ್ಯಾಲಿ ಇಂದ ಹರಿದು ಬಂದಿರುವ ನಗರದ ಶುದ್ಧೀಕರಿಸಲಾದ ಕೊಳಚೆ ನೀರಿನಲ್ಲಿ ವಿಸರ್ಜನೆ ಮಾಡುತ್ತಿರುವುದಕ್ಕೆ ಬಹಳಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದು ಪಟ್ಟಣದ ಸುತ್ತಮುತ್ತಲ ಯಾವುದೇ ಕೆರೆಕುಂಟೆಗಳಲ್ಲಿಯೂ ಕನಿಷ್ಠ ೮-೧೦ ಅಡಿ ಎತ್ತರದ ವಿನಾಯಕ ಮೂರ್ತಿಗಳನ್ನು ವಿಸರ್ಜಿಸಲು ಸಾಕಾಗುವಷ್ಟು ಮಳೆ ನೀರು ಬರದಿರುವ ಬಗ್ಗೆಯೂ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದರು.