ಸಂಸ್ಕೃತ ಭಾಷೆ ಕಲ್ಪವೃಕ್ಷ, ಕಾಮಧೇನು ಇದ್ದಂತೆ: ಮಲ್ಲಿಕಾರ್ಜುನ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.25-ಸಂಸ್ಕೃತ ಭಾμÉ ಆಧುನಿಕ ಜಗತ್ತಿಗೆ ಕಲ್ಪವೃಕ್ಷ ಹಾಗೂ ಕಾಮಧೇನುವೇ ಇದ್ದಂತೆ ಎಂದು ಜೆಎಸ್‍ಎಸ್ ಸಂಸ್ಕೃತ ಪಾಠಶಾಲೆಯ ಸಹ ಶಿಕ್ಷಕರು ಹಾಗೂ ವೇದಾಗಮ ಪ್ರವೀಣರು ಆದ ವಿದ್ವಾನ್ ಕೆ. ಬಿ ಮಲ್ಲಿಕಾರ್ಜುನ್ ತಿಳಿಸಿದರು.
ನಗರದ ಸೋಮವಾರಪೇಟೆಯಲ್ಲಿರುವ ಯುನಿವಸ್ರ್À ಶಾಲೆಯಲ್ಲಿ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹಾಗೂ ಸಿದ್ದಮಲ್ಲೇಶ್ವರ ಸಂಸ್ಕøತ ಪಾಠಶಾಲೆಯ ಸಯೋಗದಲ್ಲಿ ನಡೆದ “ಅಸ್ಮಾಕಂ ಸಂಸ್ಕೃತಂ” ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲ್ಯದಿಂದಲೇ ಮಕ್ಕಳು ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಕೃತ ಎಂಬ ವಾಕ್ಯದಲ್ಲಿ ವಿಶಾಲವಾದ ಅರ್ಥವಿದೆ. “ವಸುದೈವ ಕುಟುಂಬಕಂ” ಎಂಬ ಮನೋಭಾವನೆಯನ್ನು ವ್ಯಕ್ತಪಡಿಸುತ್ತದೆ. ನಾನು ನನ್ನದು ಎಂಬ ಸ್ವಾರ್ಥತೆಯನ್ನು ದೂರ ಮಾಡಿ, ದಯೆ ಕರುಣೆ ಶಾಂತಿ ಸಹನೆ ಕ್ಷಮಾ ಗುಣಗಳಿಂದ ಆತ್ಮಾಭಿಮಾನಿಯಾಗಿರಬೇಕು. ಪ್ರತಿಯೊಂದು ವಸ್ತುವಿಗೂ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಮೌಲ್ಯಗಳು ಇವೆ ಎಂದು ಅರಿತು ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಇದಕ್ಕು ಮನ್ನಾ ಅಸ್ಮಾಕಂ ಸಂಸ್ಕೃತಂ ಎಂಬ ನಾಮಫಲಕವನ್ನು ಹಿಡಿದು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾವನ್ನು ನಡೆಯಸಲಾಯಿತು.
ಕಾರ್ಯಕ್ರಮದಲ್ಲಿ ಯುನಿವರ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ, ಶಾಲಾ ಮುಖ್ಯೋಪಾಧ್ಯಾಯನಿ ವಿಜಯಲಕ್ಷ್ಮಿ ಹಾಗೂ ಸಿದ್ಧಮಲ್ಲೇಶ್ವರ ಸಂಸ್ಕೃತ ಪಾಠ ಶಾಲೆಯ ಮುಖ್ಯೋಪಾಧ್ಯಾಯ ವಿದ್ವಾನ್ ಮಹಾದೇವಸ್ವಾಮಿ, ಸಂಸ್ಕೃತ ಅಧ್ಯಾಪಕ ನಂದೀಶ್, ಪ್ರಭುಸ್ವಾಮಿ, ಯೂನಿವರ್ಸ್ ಶಾಲಾ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.