ಸಾರೆಗಮಪ ಕಲಾ ತಂಡದಿಂದ ದಸರಾ ದರ್ಬಾರ : ಕುಂಬಾರ
ಬೀದರ್: ಅ.5:ಈ ತಿಂಗಳ 7ರಿಂದ 11ನೇ ತಾರಿಖಿನ ವರೆಗೆ ನವರಾತ್ರಿ ಉತ್ಸವ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷ ಸಹ ದಸರಾ ದರ್ಬಾರ ಕಾರ್ಯಕ್ರಮ ಬಹು ಅದ್ದೂರಿಯಾಗಿ ಜರುಗಲಿದೆ ಎಂದು ಸಾರೆಗಮಪ ಸಾಂಸ್ಕøತಿಕ, ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಸರಾ ದರ್ಬಾರ ಕಾರ್ಯಕ್ರಮ ಜರುಗಲಿದೆ ಎಂದು ಟ್ರಸ್ಟ್ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಮುಖ್ಯಸ್ಥ ಮಹೇಶಕುಮಾರ ಕುಂಬಾರ ತಿಳಿಸಿದ್ದಾರೆ.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಪ್ರತಿ ವರ್ಷದಂತೆ ಈ ವರ್ಷವು ಕೂಡ ನಾಡಿನ ಪ್ರಸಿದ್ಧ ಕಲಾವಿದರಿಂದ ಜಿಲ್ಲೆಯಾದ್ಯಾಂತ ದಸರಾ ದರ್ಬಾರ ಎನ್ನುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮದಲ್ಲಿ ಭಕ್ತಿಗೀತೆ, ಜಾನಪದ, ತತ್ವಪದ ಮತ್ತು ದೇಶ ಭಕ್ತಿಗೀತೆಗಳನ್ನೊಳಗೊಂಡ ಸಂಗೀತ ಕಾರ್ಯಕ್ರಮವನ್ನು ಕಲಾವಿದರಾದ ದೊಂಡಿರಾಮ ಧುರ್ವೆ, ಬಲರಾಮ ಪಾಂಚಾಳೆ, ಜೆಸ್ಲಿ ಸೋನವಾನೆ, ಪ್ರೀಯಾ ಗುರುದೇವ, ಮಹೇಶ್ವರಿ ಎಸ್. ಪಾಂಚಾಳ ಮತ್ತು ಮಹಾರಾಷ್ಟ್ರದ ಖ್ಯಾತ ಸಂಗೀತ ನಿರ್ದೇಶಕ ಜಿಬ್ದಾರ ಮುರ್ಷದ ಮತ್ತು ಧನಂಜಯ ರವರ ನೇರವಾದ್ಯರೊಂದಿಗೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಕ್ಷಯ ಅವರ ನಿರ್ದೇಶನದಲ್ಲಿ ನೃತ್ಯೋತ್ಸವ ಕಾಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಗಳಲ್ಲಿ ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕುಂಬಾರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದ ವಿವರ ನೀಡುತ್ತ ಅವರು, ಆ.07 ಸೋಮವಾರ ಸಂಜೆ 6:00 ರಿಂದ ಚಿದ್ರಿ ರಸ್ತೆಯಲ್ಲಿರುವ ಜೈ ಮಾತಾದಿ ಸೇವಾ ಸಂಘದಿಂದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ, ಆ.8ರಂದು ಮಂಗಳವಾರ 6:00 ರಿಂದ ಶಿವಾಜಿನಗರ ಗೆಳೆಯರ ಬಳಗದಿಂದ ಅಲ್ಲಿಯ ಹನುಮಾನ ಮಂದಿರದಲ್ಲಿ, ಆ.9ರಂದು ಬಸವಕಲ್ಯಾಣದ ಹಿಂಗುಲಾಂಬಿಕಾ ಮಾತಾ ದೇವಸ್ಥಾನದಲ್ಲಿ, ಆ.10 ಗುರುವಾರ ಸಂಜೆ 6:00 ರಿಂದ, ಬೀದರ್ ಭೀಮನಗರದಲ್ಲಿರುವ ಜೈ ಜಗದಂಬಾ ಭವಾನಿ ಮಾತಾ ಮಂದಿರದಲ್ಲಿ, ಆ.11 ಶುಕ್ರವಾರ ಸಂಜೆ 6:00 ರಿಂದ ನಗರದ ದೇವಿ ಕಾಲೋನಿಯಲ್ಲಿರುವ ಭವಾನಿ ದೇವಾಲಯದಲ್ಲಿ ಮಾತಾ ಕಾ ದರ್ಬಾರ ಕಾರ್ಯಕ್ರಮ ಜರುಗಲಿದೆ ಎಂದು ಮಹೇಶಕುಮಾರ ಕುಂಬಾರ ತಿಳಿಸಿದರು.
ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಮಾತನಾಡಿ, ಇಂದು ಸಂಸ್ಕøತಿ ಅಳಿವಿನ ಅಂಚಿನಲ್ಲಿದ್ದು, ಇಂತಹ ದೇಶಿಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸನಾತನ ಸಂಸ್ಕøತಿ ಎತ್ತಿ ಹಿಡಿಯುವ ಅಗತ್ಯವಿದೆ ಎಂದರು.
ಗುದಗೆ ಆಸ್ಪತ್ರೆಯ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಸೋಲಪುರ ಮಾತನಾಡಿ, ದಸರಾ ದರ್ಬಾರ ಮೂಲಕ ಎಲ್ಲೆಡೆ ದಾಂಡಿಯಾ ನೃತ್ಯ, ಗರ್ಭಾ ನೃತ್ಯ, ಭಜನೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಯುವಜನತೆ ಹೆಚ್ಚಾಗಿ ತೊಡಗಬೇಕಾಗಿದೆ. ಇತ್ತಿಚೀಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಧುನಿಕ ಪದ್ದತಿ ಬಳಿಕೆ ಮಾಡದಿರುವುದು ಒಳ್ಳೆಯದು. ಇದರಿಂದ ಸಂಸ್ಕøತಿಯ ದಾರಿ ತಪ್ಪುತ್ತಿದೆ. ಆದರೆ ಮಹೇಶಕುಮಾರ ಕುಂಬಾರ ಹಾಗೂ ತಂಡದವರು ಪ್ರತಿ ವರ್ಷ ಇಂತಹ ದಸರಾ ದರ್ಬರ ಕಾರ್ಯಕ್ರಮ ಆಯೋಜಿಸಿ ಯುವಜನರನ್ನು ಭಕ್ತಿ ಮಾರ್ಗಕ್ಕೆ ಕೊಂಡೊಯ್ಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಕಲಾವಿದ ಆಕ್ಷಯ ಮಾತನಾಡಿದರು. ಯೋಗ ಶಿಕ್ಷಕ ಗೋರಖನಾಥ ಕುಂಬಾರ ಪತ್ರಿಕಾಗೋಷ್ಟಿಯಲ್ಲಿದ್ದರು.