ಜಿ.ಎಸ್.ಟಿ ಸೆಮಿನಾರ್ ಆಯೋಜಿಸಲುಬಳ್ಳಾರಿ‌ ಜಿಲ್ಲಾ ಗುತ್ತಿಗೆದಾರರ ಸಂಘ ಮನವಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.05:  ಸರಕು ಮತ್ತು ಸೇವಾ ತೆರಿಗೆಯ ಜಂಟಿ ಆಯುಕ್ತರಿಗೆ ಬಳ್ಳಾರಿ‌ ಜಿಲ್ಲಾ ಗುತ್ತಿಗೆದಾರರ ಸಂಘವು.  ಗುತ್ತಿಗೆದಾರರ ಸಮಸ್ಯೆಗಳ ಹಾಗೂ ಜಿ.ಎಸ್.ಟಿ ಕುರಿತು ಸೆಮಿನಾರ್ ಆಯೋಜಿಸುವಂತೆ ಮನವಿ ಮಾಡಿದೆ.
ಸಂಘದ ಪದಾಧಿಕಾರಿಗಳು ಈ‌ಕುರಿತಾಗಿ ಮನವಿ ಸಲ್ಲಿಸಿ. ಬಳ್ಳಾರಿ ಜಿಲ್ಲೆಗೆ ಹಲವಾರು ಗುತ್ತಿಗೆದಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಮಗಾರಿಗಳನ್ನು ಟೆಂಡರ್ ಆಧಾರದ ಮೇಲೆ  ಮಾಡುತ್ತಿದ್ದು. ಕಾಲ ಕಾಲಕ್ಕೆ ಜಿ.ಎಸ್.ಟಿ ತೆರಿಗೆ ನಿಯಾಮವಳಿಗಳು ಬದಲಾಗುವುದರಿಂದ ಗುತ್ತಿಗೆದಾರರಲ್ಲಿ ಗೊಂದಲವಿರುವುದರಿಂದ ಜಿ.ಎಸ್.ಟಿ ನಿಯಾಮವಳಿಗಳ ಬಗ್ಗೆ ಶೀಘ್ರದಲ್ಲಿ ಕಾರ್ಯಾಗಾರ  ಹಮ್ಮಿಕೊಂಡು ತಿಳಿಸಲು ಕೋರಿದೆ.
ಕೇಂದ್ರ ಸರ್ಕಾರದ ಆದೇಶದಂತೆ  ಜಿಎಸ್ ಟಿ ಶೇ:12 ರಿಂದ ಶೇ:18 ಕ್ಕೆ ಹೆಚ್ಚಿಗೆಯಾಗಿದ್ದರಿಂದ ಗುತ್ತಿಗೆದಾರರಿಗೆ ತೊಂದರೆಯಾಗಿದೆ. ಶೇ.18 ಕ್ಕೆ ಹೆಚ್ಚಾಗಿದ್ದರೂ ಇದುವರೆಗೂ ಯಾವ ಗುತ್ತಿಗೆದಾರರಿಗೂ ಉಳಿದ ಶೇ:6 ರಷ್ಟು ಹಣವನ್ನು ಇಲಾಖೆಗಳಿಂದ ಪಾವತಿಸಿಲ್ಲ, ಆದರೂ ಜಿ.ಎಸ್.ಟಿ ಇಲಾಖೆಯಿಂದ ಪಾವತಿಸಬೇಕೆಂದು ಸೂಚನಾ ಪತ್ರಗಳನ್ನು ನೀಡುತ್ತಿದೆ.  ನಾವು ರಾಜ್ಯ ಸರ್ಕಾರದ ಅನುಮೋದನೆಗೊಂಡ ಇಲಾಖೆಗಳಲ್ಲಿ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದು ಇದುವರೆಗೂ ನಾವು ಪತ್ರದ ಮೂಲಕ ಟೆಂಡ‌ರ್ ವಹಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿದರು ಉಳಿದ ಶೇ.6 ರಷ್ಟು ಹಣವನ್ನು ನೀಡದೆ ಇರುವುದರಿಂದ ನಾವು ಆರ್ಥಿಕ ಸಂಕಷ್ಟಕ್ಕೆ ಒಳಗಾಗಬೇಕಿದೆ.
ಹೀಗಿರುವಾಗ   ತಮ್ಮ ಇಲಾಖಾ ಸೂಚನಾ ಪತ್ರದಲ್ಲಿ ಬಡ್ಡಿ ಹಾಗೂ ದಂಡವನ್ನು ಕಟ್ಟಬೇಕೇಂದು ತಿಳಿಸಿರುತ್ತೀರಿ.ಈ ಜಿ.ಎಸ್.ಟಿ ತೆರಿಗೆ ವ್ಯತ್ಯಾಸಕ್ಕೆ ಸರ್ಕಾರದ ಇಲಾಖೆಗಳ ವಿಳಂಬ ನೀತಿ ಗುತ್ತಿಗೆದಾರರನ್ನು ಆರ್ಥಿಕ-ಮಾನಸಿಕ ಸಂಕಷ್ಟ ಉಂಟು ಮಾಡಿದೆ.ಜಿ.ಎಸ್.ಟಿ ತೆರಿಗೆ ವ್ಯತ್ಯಾಸದ ಮೊತ್ತವನ್ನು ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರ ನೀಡದಿದ್ದರೇ ಗುತ್ತಿಗೆದಾರರು ಬರಿಸಲು ಸಿದ್ದರಿದ್ದಾರೆಂದು ಹೇಳಿದೆ.
ಈ ವೇಳೆ ಸಂಘದ ಅಧ್ಯಕ್ಷ ಎಸ್.ವಿ.ರಮಣರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರಗೌಡ, ಉಪಾಧ್ಯಕ್ಷರಾದ ಜಿ.ಉಮಾಮಾಹೇಶ್ವರಗೌಡ, ಕೆ.ಟಿ.ಪರಿಶುರಾಮ್,  ಜಂಟಿ ಕಾರ್ಯದರ್ಶಿ ಹೆಚ್.ಸಿದ್ದೇಶ್,  ಸಂಘಟನಾ ಕಾರ್ಯದರ್ಶಿ ಹೆಚ್.ಅಮರೇಶ್, ಜಿ.ವಿಶ್ವೇಶ್ವರಯ್ಯ, ಸಲಹೆಗಾರರಾದ ಯು.ಎರ್ರಿಸ್ವಾಮಿ, ಗುತ್ತಿಗೆದಾರರಾದ ದೊಡ್ಡನಗೌಡ,  ಜಗದೀಶಗೌಡ, ತಿಮ್ಮಪ್ಪ, ಸಂಗಮೇಶ್,ಯು.ನಾಗರಾಜ್,ಗಾದಿಲಿಂಗ, ಮನೋಹರ್  ಮೊದಲಾದವರು ಇದ್ದರು.