ನರೇಂದ್ರ ಮೋದಿ ಪ್ರಮಾಣ ವಚನ :ಸಂಭ್ರಮಚರಣೆ
ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.10:  ಸನ್ಮಾನ್ಯ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ದೇಶಕ್ಕೆ ಹಬ್ಬದ ವಾತಾವರಣ ನಿರ್ಮಾಣದ ಸಂಭ್ರಮವಾಗಿದೆ  ನಮ್ಮ ದೇಶ ಸುಭದ್ರವಾಗಿರಲು ಉನ್ನತ ಸ್ಥಾನಕ್ಕೆ ಏರಲು ನರೇಂದ್ರ ಮೋದಿ ಜೊತೆಗೆ ಹಲವಾರು ಮಿತ್ರ ಪಕ್ಷಗಳು ಕೈ ಜೋಡಿಸಿರುವುದು ಸಂತೋಷದ ವಿಷಯವಾಗಿದೆ ಎಂದು ಬಿಜೆಪಿ ತಾಲೂಕು ಘಟಕ ಅಧ್ಯಕ್ಷ ಭರ್ಮನಗೌಡ ಪಾಟೀಲ್  ರವರು ತಿಳಿಸಿದರು.
ನರೇಂದ್ರ ಮೋದಿಜಿ ಪ್ರಧಾನಿಯಾಗಿ ಸತತವಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನಲೆಯಲ್ಲಿ
ಪಟ್ಟಣದ  ಬಿಜೆಪಿ ಕಾರ್ಯಕರ್ತರು  ಇಲ್ಲಿನ
ಆರಾಧ್ಯ ದೈವ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಗೆ ದೇವಸ್ಥಾನಕ್ಕೆ ಜಮಾವಣೆಗೊಂಡು ನರೇಂದ್ರ ಮೋದಿಯವರ  ನೇತೃತ್ವದಲ್ಲಿ ದೇಶವು ಪ್ರಗತಿಯತ್ತ ಸಾಗಲಿ ಎಂದು ಶ್ರೀ ಸ್ವಾಮಿಗೆ ವಿಶೇಷ  ಪೂಜೆ ಸಲ್ಲಿಸಿದರು.
ನಂತರ  ಸ್ವಾಮಿಯ ದೇವಸ್ಥಾನ ಮುಂಭಾಗದಿಂದ   ಬೈಕ್ ರ‍್ಯಾಲಿ ಚಾಲನೆಗೊಂಡು  ನರೇಂದ್ರ ಮೋದಿಜಿ ಯವರಿಗೆ  ಜೈಕಾರ ಹಾಕುತ್ತ  ಗಾಂಧಿ ಸರ್ಕಲ್ ಮಾರ್ಗವಾಗಿ ಉಜ್ಜಿನಿ ರಸ್ತೆ, ರೇಣುಕಾ ಟಾಕೀಸ್, ಎಪಿಎಂಸಿ  ರಸ್ತೆ  ಮಾರ್ಗವಾಗಿ ಶ್ರೀ ಗುರು ಮರಿ ಕೊಟ್ಟೂರೇಶ್ವರ ಹತ್ತಿರವರೆಗೆ ಸಾಗಿತು. ಇದೇ ಸಂದರ್ಭದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು
ಈ ಸಂದರ್ಭದಲ್ಲಿ  ಬಿಜೆಪಿ ಪ.ಪಂ. ಸದಸ್ಯ ಈಶ್ವರಗೌಡ್ರು, ಬೋರ್ವೆಲ್ ತಿಪ್ಪೇಸ್ವಾಮಿ, ಎಸ್ ಸಿ ಮೋರ್ಚಾ ಅಧ್ಯಕ್ಷ, ಎಲ್. ವಿಷ್ಣು, ಬಿ. ಮಣಿಕಂಠ, ಸೋಮಶೇಖರ್, ಬದ್ದಿ ತರುಣ್, ಪ್ರಜ್ವಲ್, ಅಂಗಡಿ ಪಂಪಾಪತಿ, ಅರವಿಂದ್, ಎನ್ ಕೆ ಸೂರಜ್, ಬಿ. ಮಲ್ಲಿಕಾರ್ಜುನ್, ಮುಂತಾದವರು ಭಾಗವಹಿಸಿದ್ದರು.
ಪಿಎಸ್ಐ ಗೀತಾಂಜಲಿ ಸಿಂಧೆ ರವರ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಿದರು.