ಮೋದಿ ಹ್ಯಾಟ್ರಿಕ್ ಪ್ರಧಾನಿ,ಕೂಡ್ಲಿಗಿ ಬಿಜೆಪಿ ಮಂಡಲದಿಂದ ವಿಜಯೋತ್ಸವ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.10 :- ದೇಶದ ಪ್ರಗತಿಯನ್ನು ಅರಿತು ಪ್ರಜಾಪ್ರಭುತ್ವದ ಪ್ರಜೆಗಳ ಆಯ್ಕೆಯಂತೆ ದೇಶಕ್ಕೆ ಸತತವಾಗಿ  ಮೂರನೇ ಬಾರಿ ಸಹ ಪ್ರಧಾನಿಯಾಗಿ ನರೇಂದ್ರ ಮೋದಿ ಹ್ಯಾಟ್ರಿಕ್ ಚಾನ್ಸ್ ಪಡೆದುಕೊಂಡು ಕಳೆದ ರಾತ್ರಿ ಅಧಿಕಾರ ಗದ್ದುಗೆ ಏರಿದ್ದಾರೆ ಎಂದು ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಕೆ ರಾಜು ತಿಳಿಸಿದರು.
ಅವರು ಪಟ್ಟಣದ ಮದಕರಿ ವೃತ್ತದಲ್ಲಿ ದೇಶದ ಪ್ರಧಾನಿಯಾಗಿ ಬಿಜೆಪಿ ಪಕ್ಷದ ನರೇಂದ್ರ ಮೋದಿ ಸತತ ಮೂರನೇ ಅಧಿಕಾರ ಸ್ವೀಕರಿಸುವ ಶುಭ ಸಂದರ್ಭದಲ್ಲಿ ಕೂಡ್ಲಿಗಿ ಮಂಡಲ ಬಿಜೆಪಿ  ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ  ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಮಾತನಾಡುತ್ತ  ದೇಶದ ಪ್ರಗತಿಗೆ ಮೋದಿಯೇ ಪ್ರಧಾನಿಯಾಗುವುದು ಸೂಕ್ತ ಎಂದು ದೇಶದ ಜನತೆ ಅತೀ ದೊಡ್ಡ ಬಿಜೆಪಿ ಹಾಗೂ ಎನ್ ಡಿಎ ಮಿತ್ರಪಕ್ಷಗಳಿಗೆ ಆಯ್ಕೆ ಮಾಡಿದ್ದು ಮತ್ತೊಮ್ಮೆ ದೇಶದ ಪ್ರಧಾನಿಯಾಗಿ  ಮೂರನೇ ಬಾರಿಗೆ ಆಯ್ಕೆ ಮಾಡಿರುವುದು ಈ ದೇಶದಲ್ಲಿ ಮೋದಿಯ ಅಗತ್ಯತೆ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದು ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ  ರಾಜು ತಿಳಿಸಿದರು.
ಮೋದಿ ಭಾರತಕ್ಕಷ್ಟೇ ಅಲ್ಲದೇ ಇಡೀ ಜಗತ್ತಿಗೆ ಬೇಕಾದ ಶಕ್ತಿಯಾಗಿದ್ದು ನಮ್ಮ ದೇಶವನ್ನು ಇಡೀ ಜಗತ್ತೇ ಬೆರಗಾಗಿ  ನೋಡುವಂತೆ ಮಾಡಿದ ಕೀರ್ತಿ ಮೋದಿಯವರದ್ದಾಗಿದೆ. ಇಲ್ಲಿಯವರೆಗೂ ನನೆಗುದಿಗೆ ಬಿದ್ದಿದ್ದ ಬೃಹತ್ ಯೋಜನೆಗಳನ್ನು ಸಾಕಾರ ಮಾಡುವ ಮೂಲಕ ಭಾರತ ಜಗತ್ತಿನಲ್ಲಿಯೇ ಮುಂಚೂಣಿ ರಾಷ್ಟ್ರವಾಗಲು ಕಾರಣವಾಗಿದ್ದಾರೆ. ಇಂತಹ ವ್ಯಕ್ತಿ ಮೂರನೇ
ಬಾರಿಗೆ ಪ್ರಧಾನಿಯಾಗಿರುವುದು ನಮ್ಮೆಲ್ಲರ ಪುಣ್ಯ ಎಂದರು.
ಬಿಜೆಪಿ ಯುವ ಮುಖಂಡ ಕೆ.ಎಚ್.ಎಂ.ಸಚಿನ್ ಕುಮಾರ್ ಮಾತನಾಡಿ, ಮೋದಿಜೀ  ಮೂರನೇ ಬಾರಿಗೆ ಪ್ರಧಾನಿಯಾಗಿರುವುದು, ನಮ್ಮ ರಾಜ್ಯದ ಐವರಿಗೆ ಮಂತ್ರಿಗಿರಿ ನೀಡುವ ಮೂಲಕ ಕರ್ನಾಟಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ನಮ್ಮಗಳ  ಸಂತಸವನ್ನು  ಇಮ್ಮಡಿಗೊಳಿಸಿದೆ. ಮುಂದಿನ ದಿನಗಳಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿಯಾಗಲಿದೆ ಎಂದರು.
ಮೋದಿ ದೂರದೃಷ್ಟಿ, ದೇಶರಕ್ಷಣೆ ಬಗ್ಗೆ ಅವರು ತಳೆದಿರುವ ನೀತಿ ಈಗ್ಗೆ 10 ವರ್ಷಗಳಿಂದ ದೇಶದ ಜನತೆ ನೋಡಿದ್ದಾರೆ. ಈಗಾಗಿಯೇ ಮೂರನೇ ಬಾರಿಗೆ ಅವಕಾಶ ನೀಡಿದ್ದರೆ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತಕರು ಪರಸ್ಪರ ಸಿಹಿತಿನಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಸ್.ದುರುಗೇಶ್, ಅಂಬಾಲಿ ನಾಗರಾಜ, ಗಿರೀಶ್, ವಾಗೀಶಮೂರ್ತಿ, ಗುರಿಕಾರ ರಾಘವೇಂದ್ರ, ಅಜೇಯ್, ಭರತ್, ಪ್ರಕಾಶ್ ನಾಯ್ಕ,  ಕಿಟ್ಟಿ, ರಾಘವೇಂದ್ರ ಮುಂತಾದ ಬಿಜೆಪಿ ಮುಖಂಡರು ಹಾಜರಿದ್ದರು.