ಮಾಧ್ಯಮ ಲೋಕದ ದಿಗ್ಗಜ ರಾಮೋಜಿರಾವ್ ಅವರಿಗೆ ನುಡಿನಮನ.
ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.10: ಮಾಧ್ಯಮ ಲೋಕದ ದಿಗ್ಗಜ  ರಾಮೋಜಿರಾಮ್ ಸಂಸ್ಥೆಯ ಸಂಸ್ಥಾಪಕ ರಾಮೋಜಿರಾವ್ ಅವರ ನಿಧನಕ್ಕೆ ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವತಿಯಿಂದ ಭಾನುವಾರ ನುಡಿನಮನ ಮಾಡಲಾಯಿತು.
ವಿಜಯನಗರ ಜಿಲ್ಲಾ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಅಗಲಿದ ಹಿರಿಯ ಚೇತನ ರಾಮೋಜಿ ರಾವ್ ಅವರ ಭಾವಚಿತ್ರಕ್ಕೆ  ಪುಷ್ಪನಮನ ಸಲ್ಲಿಸಿ, ಗೌರವ ಸಲ್ಲಿಸಲಾಯಿತು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಪಿ. ಸತ್ಯನಾರಾಯಣ ಹಾಗೂ ಪ್ರಧಾನ ಕಾರ್ಯದರ್ಶಿ ಕೆ. ಲಕ್ಷಣ್ ಅವರು ಮಾತನಾಡಿ,  ರಾಮೋಜಿರಾವ್ ಅವರು ಲಕ್ಷಾಂತರ ಪತ್ರಕರ್ತರನ್ನು ಸೃಷ್ಠಿ‌ ಮಾಡುವ ಮೂಲಕ  ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದವರು, ಹೈದರಾಬಾದ್ ನಲ್ಲಿ  ಇಡೀ ವಿಶ್ವದಲ್ಲಿಯೇ ದೊಡ್ಡದಾದ ಥೀಮ್ ಪಾಕ್೯, ಚಿತ್ರನಗರಿಯನ್ನು‌ ನಿರ್ಮಾಣ ಮಾಡಿದವರು, ಇಂದು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಉತ್ತುಂಗದ ಸ್ಥಾನದಲ್ಲಿರುವ  ಬಹುತೇಕ ಪತ್ರಕರ್ತರು, ರಾಮೋಜಿರಾವ್ ಅವರ ಸಂಸ್ಥೆಯಿಂದ  ಹೆಸರು‌ ಮಾಡಿರುವುದು‌‌ ಹೆಮ್ಮೆಯ ಸಂಗತಿ. ಅವರ ಅಗಲಿಕೆಯಿಂದ ಭಾರತದ ಪತ್ರಿಕಾರಂಗ ಬಡವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾನಿಪ  ಖಜಾಂಚಿ ಎಚ್. ವೆಂಕಟೇಶ್, ಪತ್ರಕರ್ತರಾದ ಅನಂತ್ ಜೋಶಿ,  ಬಾಲಕೃಷ್ಣ, ರೇಖಾ ಪ್ರಕಾಶ್, ಅನೂಪ್ ಕುಮಾರ್, ಭೀಮಾನಾಯ್ಕ್,   ಕೆಬಿ ಖವಾಸ್, ಸುರೇಶ್ ಚೌವ್ಹಾಣ್, ಜಯಪ್ಪ ರಾಥೋಡ್, ಸಂಜಯ್ ಕುಮಾರ್, ಪಾಂಡುರಂಗ ಜಂತ್ಲಿ, ಪೂರ್ಣಿಮಾ ಇತರರಿದ್ದರು.