ಬಿತ್ತನೆ ಬೀಜ ದುಬಾರಿ,ಕಾಂಗ್ರೆಸ್ ಸರ್ಕಾರ ರೈತ ವಿರೋಧಿ : ನೇಮಿರಾಜ್
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜೂ.10 ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರ ಬಿತ್ತನೆ ಬೀಜಗಳನ್ನು ದುಬಾರಿ ಮಾಡಿರುವುದಕ್ಕೆ ರೈತ ವಿರೋಧಿ ಸರ್ಕಾರ ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್ ಕಿಡಿ ಕಾರಿದರು.
 ಪಟ್ಟಣದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದಲ್ಲಿ  ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದರು ರೈತರು ಮೊದಲೇ ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಬಿತ್ತನೆ ಬೀಜ ಒಂದು ಬ್ಯಾಗಿಗೆ 150 ಹೆಚ್ಚಿಸಿರುವುದು ಯಾವ ನ್ಯಾಯ ರೈತರ ಬಗ್ಗೆ ಕಿಂಚಿತ್ತು ಕನಿಕರವಿದ್ದರೆ ಕೂಡಲೇ ಬೆಲೆ ಇಳಿಸಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರ ನಿಗಮದ ದುಡ್ಡು ಕೊಳ್ಳೆ ಹೊಡೆದು ಸಿಕ್ಕು ಹಾಕಿಕೊಂಡಿದ್ದಾರೆ. ಹೀಗೆ ಹಲವಾರು ನಿಗಮಗಳಿಂದ ಹಣವನ್ನು ಲೂಟಿ ಮಾಡಲಾಗಿದೆ. ತನಿಖೆ ಮಾಡಿದರೆ ಪ್ರಕರಣದಲ್ಲಿ ತೊಡಗಿದವರು ಹೆಸರು ಹೊರಬರಲಿದೆ ಎಂದರು.
 ಮಾಲ್ವಿ ಜಲಾಶಯ ಕ್ರಸ್ಟ್ ಗೇಟ್ ದುರಸ್ತಿಗೆ 4 ಕೋಟಿ ರೂ. ಟೆಂಡರ್ ಕರೆಯಲಾಗಿದೆ ಚುನಾವಣೆಯ ಮುನ್ನ ಎರಡು ಬಾರಿ ಟೆಂಡರ್ ಕರೆಯಲಾಗಿತ್ತು. ಯಾರು ಭಾಗವಹಿಸಿರಲಿಲ್ಲ. ಬಳಿಕ ಚುನಾವಣೆ ನೀತಿ ಸಂಹಿತೆ ಜಾರಿಯಾಗಿತ್ತು. ಜೂ.06ರಂದು ಮತ್ತೆ ಮರು ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
 ರೈತರಿಗೆ ಯಾವುದೇ ತೊಂದರೆಯಾಗದಂತೆ ಕೊರತೆಯಾಗದಂತೆ ಬೀಜಗಳನ್ನು ವಿತರಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗೆ ಸಲಹೆ ನೀಡಿದರು.
 ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಬಿ ಗಂಗಣ್ಣ, ದೀಪಕ್ ಕಟಾರೆ, ಜೆಡಿಎಸ್ ತಾಲೂಕಾಧ್ಯಕ್ಷ ವೈ ಮಲ್ಲಿಕಾರ್ಜುನ ಮುಖಂಡರಾದ ಕಿನ್ನಾಳ ಸುಭಾಷ್ , ಅಂಬಾಡಿ ಮಹೇಶ್, ರಾಜಲಿಂಗಪ್ಪ, ಹನಿಸಿ ಸಿದ್ದೇಶ್ , ರಾಜು ಪಾಟೀಲ್, ಕೃಷಿ ಇಲಾಖೆ ಎ ಡಿ ಸುನಿಲ್ ಕುಮಾರ್ ನಾಯ್ಕ್, ಅಧಿಕಾರಿ ಭೋಜನಾಯ್ಕ್ ಆಪ್ತ ಸಹಾಯಕ ದೊಡ್ಡಬಸಪ್ಪ ರೆಡ್ಡಿ ಇತರರಿದ್ದರು.