ಮೋದಿ ಮತ್ತೆ ಪ್ರಧಾನಿಜೋಳದರಾಶಿ ತಿಮ್ಮಪ್ಪನಿಂದ ಮಾಜಿ ಸೈನಿಕರಿಗೆ ಸನ್ಮಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.10: ನರೇಂದ್ರ ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಲವಾರು ರೀತಿಯಲ್ಲಿ ಸಾಮಾಜಿಕ ಸೇವಾ ಕಾರ್ಯದ ಮೂಲಕ ಸಂಭ್ರಮಿಸಿದ್ದಾರೆ. ಅಂತಹವರಲ್ಲಿ ತಾಲೂಕಿನ ಜೋಳದರಾಶಿ ಉದ್ಯಮಿ ತಿಮ್ಮಪ್ಪನವರು ಒಬ್ಬರು.
ಮೋದಿ ಅವರು ಈ ದೇಶದ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ದಿನವಾದ ನಿನ್ನೆ  ಜೋಳದರಾಶಿಯ ಶ್ರೀಲಕ್ಷ್ಮಿವೆಂಕಟೇಶ್ವರ ಫಿಲ್ಲಿಂಗ್ ಸ್ಟೇಷನ್ ನಲ್ಲಿ ಉದ್ಯಮಿ ತಿಮ್ಮಪ್ಪ ಅವರು  10 ಜನ ಮಾಜಿ ಸೈನಿಕರಿಗೆ ಸನ್ಮಾನಿಸಿ, ಗೌರವಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಬಿಜೆಪಿ ಮುಖಂಡ ಕೆ.ಎಸ್.ದಿವಾಕರ್, ನರೇಂದ್ರ ಮೋದಿ ಅವರು ವಿಶ್ವದ ನಾಯಕರಾಗಿ ಹೊರಹೊಮ್ಮಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿ ಹಾಗೂ ರಕ್ಷಣೆಯ ವಿಚಾರದಲ್ಲಿ ಅತ್ಯಂತ ಕಾಳಜಿಯ ಕಾರ್ಯನಿರ್ವಹಿಸಿ, ಇಡೀ ದೇಶದ ಜನರ ಮನ ಗೆದ್ದು, ಮೂರನೇಬಾರಿಗೆ ಪ್ರಧಾನಮಂತ್ರಿಯಾಗಿದ್ದಾರೆ. ಅವರ ಸಂಪುಟದಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದ್ದು, ರಾಜ್ಯದ ಪ್ರಗತಿಯ ಹಾದಿಯಲ್ಲಿ ಸಾಗುವ ಪೂರ್ಣ ವಿಶ್ವಾಸವಿದೆಂದರು.
ಈ ವೇಳೆ ಮಾತನಾಡಿದ  ಉದ್ಯಮಿ ತಿಮ್ಮಪ್ಪ ಅವರು, ದೇಶದ ರಕ್ಷಣೆಗೆ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮ ಕರ್ತವ್ಯ. ಅದು ಮೋದಿ ಅವರು ಪ್ರಧಾನಿಯಾಗಿ ಮೂರನೇ ಬಾರಿಗೆ ಪದಗ್ರಹಣ ಮಾಡುತ್ತಿರುವ ಸಂದರ್ಭದಲ್ಲಿ ಈ ಕಾರ್ಯ ಸ್ಮರಣೀಯವಾದುದೆಂದು. ಮೋದಿಯವರು ದೇಶಕ್ಕೆ ಮತ್ತಷ್ಟು ಉತ್ತಮ ಆಡಳಿತದ ಮೂಲಕ ಆರ್ಥಿಕ ಸುಭದ್ರತೆಯನ್ನು ತಂದುಕೊಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಪ್ರಮಾಣ ವಚನ ‌ಕಾರ್ಯಕ್ರಮ ಮತ್ತು ಪಾಕಿಸ್ತಾನ-ಇಂಡಿಯಾ ಮಧ್ಯೆ ಪಂದ್ಯ ವೀಕ್ಷಿಸಿಸಲು ದೊಡ್ಡ ಎಲ್ ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು.
ಭಾರತ್ ಪೆಟ್ರೋಲಿಂನ ಮಾರಾಟ ಅಧಿಕಾರಿ ದೀಪಕ್ ಸಿಂಗ್ ಮುಂಡಾ, ಅಧಿಕಾರಿ ವೀರಭದ್ರಯ್ಯಸ್ವಾಮಿ, ಹಿರಿಯಪತ್ರಕರ್ತರಾದ ಶಶಿಧರ ಮೇಟಿ, ಕೆ.ಎಂ.ಮಂಜುನಾಥ್ ಹಾಗೂ ನಂದೀಶ್
ಕಾಂಗ್ರೆಸ್ ಮುಖಂಡರಾದ ಮುದಿ ಮಲ್ಲಯ್ಯ ಮೋಕಾ, ವಾಲ್ಮೀಕಿ ಸಮಾಜದ ಗಣ್ಯರಾದ ಎನ್.ಸತ್ಯಪ್ಪ, ದುರುಗಪ್ಪ,ಜನಾರ್ದನ ನಾಯಕ, ಬೆಣಕಲ್ ಸುರೇಶ್, ಕಾಯಿಪಲ್ಯೆ ಬಸವರಾಜ್, ಜೋಳದರಾಶಿ ತಿಕ್ಕಣ್ಣ, ರಮೇಶ್, ಎರಿಸ್ವಾಮಿ, ಶೇಕ್ಷಾವಲಿ, ಭೀಮೇಶ್‌ಸ್ವಾಮಿ, ಮಲ್ಲನಗೌಡ, ಉಪನ್ಯಾಸಕ ಜೆ.ಸೋಮಶೇಖರ್, ಎಲ್‌ಐಸಿ ಪ್ರತಿನಿಧಿ ವಿ.ಶಿವಾಚಾರಿ ಡಿ.ಕಗ್ಗಲ್, ಮಂಜುಸ್ವಾಮಿ ಬೈಲೂರು, ಕೃಷಿ ಇಲಾಖೆ ಅಧಿಕಾರಿ ಬಿ.ಗಾದಿಲಿಂಗಪ್ಪ, ಶಿವಗೌಡ, ತಿಮ್ಮನಗೌಡ, ಭಾರತೀಯ ಮಿಲ್ಕ್ ಡೈರಿಯ ಪುರುಷೋತ್ತಮಗೌಡ, ರವಿಸ್ವಾಮಿ, ಜಗದೀಶ್ (ಜಗ್ಗು), ಸಿ.ಎ.ಷಣ್ಮುಖ, ಟಾಟಾ ಷಣ್ಮುಖಪ್ಪ, ಅನ್ನಪೂರ್ಣ ಹೋಟೆಲ್ ಮಾಲೀಕ ಶ್ರೀಧರ್, ಎಲ್‌ಐಸಿ ಪ್ರತಿನಿಧಿ
ಹುಲುಗಪ್ಪ, ಬಿಡಿಹಳ್ಳಿ ವಂಡ್ರಿ, ಯರಗುಡಿ ರಾಮಾಂಜಿನಿ, ಶಿವು ಪರಮದೇವನಹಳ್ಳಿ, ಹಗರಿ ಗಾದಿಲಿಂಗಪ್ಪ ಮೊದಲಾದಚರು ಭಾಗವಹಿಸಿದ್ದರು.