ದಾವಣಗೆರೆ; ವಚನಾಮೃತ ಬಳಗದಿಂದ ಪರಿಸರ ದಿನಾಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧೦: ನಗರದ ವಚನಾಮೃತ ಬಳಗ ಮತ್ತು ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ಗದಗ ಮತ್ತು ಬೇತೂರು ಬಡಾವಣೆ ಹಾಗೂ ದೊಗ್ಗಳ್ಳಿ ಬಡಾವಣೆ ಸದಸ್ಯರ ಸಹಯೋಗದಲ್ಲಿ  ವಚನಾಮೃತ ಬಳಗದ ವಾರ್ಷಿಕೋತ್ಸವ ಹಾಗೂ  ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಇದೇ ವೇಳೆ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಎಂ.ಜಿ. ಈಶ್ವರಪ್ಪ  ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಮಹತ್ವಾಕಾಂಕ್ಷೆಯಿಂದ ಪರಿಸರ ದಿನಾಚರಣೆಯನ್ನು ಬೇತೂರು ಬಡಾವಣೆಯ ಪಾರ್ಕ್ ನಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಸದಸ್ಯರು ಪಾಲ್ಗೊಂಡು ಸುಮಾರು 100ಕ್ಕೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಈ ಕಾರ್ಯಕ್ರಮವನ್ನು ನೆರವೇರಿಸಿದರು.ಕಾರ್ಯಕ್ರಮದಲ್ಲಿ ಸೌಮ್ಯ ಸತೀಶ್, ಮಮತಾ ನಾಗರಾಜ್, ಮತ್ತಿ ಮುರುಗೇಶ್, ಶಿವಕುಮಾರ್, ಅನಿಲ್ ಕುಮಾರ್, ಸತೀಶ್ ಕುಮಾರ್, ರಾಕೇಶ್, ನಿಜಲಿಂಗಪ್ಪ, ಶಾಂತ ಶಿವಶಂಕರ್ , ಜ್ಯೋತಿ ಬೆಳಗಾವಿ ಉಷಾ, ಸುಮಾ ಚಂದ್ರಶೇಖರ್, ರೇಖಾ ಬೇತೂರ್, ದೀಪ ಕಿರಣ್ , ಲತಾ ಕಪಾಳಿ ಇನ್ನೂ ಬಡಾವಣೆಯ ಮಕ್ಕಳು, ಸದಸ್ಯರು ಹಾಗೂ ಬಳಗದವರು ಪಾಲ್ಗೊಂಡಿದ್ದರು. ನಂತರ ಉಪಹಾರ ಸೇವಿಸಲಾಯಿತು.