ಉತ್ತಮ, ಸುಖಿ ಜೀವನಕ್ಕೆ ಸಂಗೀತ ಅವಶ್ಯ:ಪಿಡಿಓ ಜಗನ್ನಾಥ ಪೂಜಾರಿ
ಸಂಜೆವಾಣಿ ವಾರ್ತೆ
ಹುಮನಾಬಾದ್:ಜೂ.10: ಒತ್ತಡ ನಿವಾರಣೆಗೆ ಸಂಗೀತ ಉತ್ತಮ ಮದ್ದು, ಸುಖಿ ಜೀವನಕ್ಕೆ ಸಂಗೀತ ಅವಶ್ಯಕವಾಗಿದೆ ಎಂದು ರಾಜೋಳಾ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜಗನ್ನಾಥ ಪೂಜಾರಿ ಹೇಳಿದರು.
ಹುಮನಾಬಾದ್ ವಿಧಾನ ಸಭೆ ಕ್ಷೇತ್ರದ ಬಸವಕಲ್ಯಾಣ ತಾಲ್ಲೂಕಿನ ರಾಜೋಳಾ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಹಾಗೂ ಶ್ರೀ ಕಿನ್ನರಿನಾದ ರುದ್ರ ಸಂಗೀತ ಕಲಾ ಸಂಸ್ಥೆ(ರಿ) ಹಳ್ಳಿಖೇಡ(ಕೆ)ನ ಸಂಯುಕ್ತ ಆಶ್ರಯದಲ್ಲಿ ನಡೆದ ಸಂಗೀತ ಸುನಾದ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಒತ್ತಡ ಬದುಕು ಸಾಗಿಸುತ್ತಿದ್ದು, ಇಂತಹ ಸಂಗೀತ ಸುನಾದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಕೆಲ ಸಮಯ ಭಾಗವಹಿಸಿ ಸುಮಧುರವಾದ ಸಂಗೀತ ಕೇಳುವುದರಿಂದ ಮನಸ್ಸಿನ ಕಾಯಿಲೆಗಳು ದೂರವಾಗುತ್ತವೆ ಎಂದರು.
ಶ್ರೀ ವೇದ ಮೂರ್ತಿ ಕಾರತಿಕಯ್ಯ ಶಾಸ್ತ್ರಿ ಹಿರೇಮಠ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಗೀತೆಗಳಲ್ಲಿ ಮಾನವೀಯ ಮೌಲ್ಯಗಳಿವೆ, ನೈತಿಕ ಪಾಠಗಳಿವೆ. ಇಂದಿನ ಯುವ ಪೀಳಿಗೆಗೆ ಮತ್ತೆ ನಮ್ಮ ಭವ್ಯ ಪರಂಪರೆಯ ಜಾನಪದ ಸಂಸ್ಕøತಿಯನ್ನು ಪರಿಚಯಿಸುವ ಕೇಲಸವಾಗಬೇಕಾಗಿದೆ ಎಂದು ಹೇಳಿದರು. ನಿವೃತ್ತ ಗ್ರಾಮ ಸೇವಕ ಮಲ್ಲಪ್ಪ ಸೀತಾಳಗೇರಾ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಶಾ ಮಹೇಶ, ಉಪಾಧ್ಯಕ್ಷೆ ಈಶ್ವರಾ ಜರಾರಡ್ಡಿ, ಸದಸ್ಯ ರುದ್ರಮುನಿ ಹಿರೇಮಠ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನರಸಾರಡ್ಡಿ ಯಾಚೆ, ಪ್ರಮುಖರಾದ ಮಹೇಶರಾವ್ ಪಾಟೀಲ, ಇದ್ದರು.
ಸಂಗೀತ ಕಲಾವಿದರಾಗ ಹಣಮಂತರಾವ್ ಕುಲಕರ್ಣಿ ಹಿಂದುಸ್ತಾನಿ ಶಾಸ್ತ್ರಿಯ ಸಂಗೀತ, ಮಹಾಂತಯ್ಯ ಮಠಪತಿ ಲಘ ಶಾಸ್ತಿಯ ಸಂಗೀತ, ಗುರುಶಾಂತಯ್ಯ ಸ್ಥಾವರಿಮಠ ಸುಗಮ ಸಂಗೀತ, ನೀಲಯ್ಯ ಹೆಬ್ಬಳಿ ಆಳಂದ ವಚನ ಸಂಗೀತ, ಸೂರ್ಯಕಾಂತ ಶಾಸ್ತಿಯ ಕಥಾ ಕೀರ್ತನಾ, ಪವಿತ್ರಾ ವಿಶ್ವನಾಥ ದಾಸವಾಣಿ, ಕಾಶಿನಾಥ ಯಗಂಟಿ, ಕನ್ನಡ ಗೀತೆ, ಬೋದಯ್ಯ ಮಲ್ಲಾಬಾದ ವಿಶೇಷ ವಾಧ್ಯ ಸಂಗೀತ, ರೇಣುಕಾ ಪವಿತ್ರಕುಮಾರ ತತ್ವಪದ, ಸವಿತಾ ವಿ ಎಸ್ ಭಾವ ಗೀತೆ, ಓಂಕಾರ ಸ್ವಾಮಿ ಭಕ್ತಿಗೀತೆ, ವೀರಯ್ಯ ವೀರಯ್ಯ ಮಾಡ್ಯಾಳ ಲಘು ಸಂಗೀತ, ಲೋಕನಾಥ ಚಾಂಗಲೇರಾ ರೈತ ಗೀತೆ, ಷಡಕ್ಷರಿ ಹಿರೇಮಠ ದೇಶ ಭಕ್ತ ಗೀತೆ ಹಾಡಿದರು. ರಾಮಚಂದ್ರ ಕಲ್ಲಹಿಪ್ಪರಗಿ, ವೀರಭದ್ರಯ್ಯ ಸ್ಥಾವರ ಮಠ, ಮ್ರತ್ಯುಂಜಯ ಚಿಕ್ಕಮಠ ವಾದ್ಯ ಸಹಕಾರ ಕೊಟ್ಟರು.