ಪತ್ತಿನ ಸಹಕಾರ ಸಂಘ ಉದ್ಘಾಟನೆ
ಸಂಜೆವಾಣಿ ವಾರ್ತೆ
ಇಲಕಲ್ಲ:ಜೂ.10: ನಗರದ ಮಹಾಂತೇಶ ಟಾಕೀಸ್ ರಸ್ತೆಯ ಪವನ ವಾಣಿಜ್ಯ ಮಳಿಗೆಯಲ್ಲಿ ಪತ್ತಿನ ಸಂಘವನ್ನು ಗಚ್ಚಿನಮಠದ ಶ್ರೀ ಪೂಜ್ಯರು ಅಮರೇಶ್ವರ ದೇವರು ಉದ್ಘಾಟಿಸಿದ್ದರು.
ಸಂಘದ ಅಧ್ಯಕ್ಷ ಗುರುಬಸಯ್ಯ ಬಿ. ಕಂಬಾಳಿಮಠ ಅಧ್ಯಕ್ಷತೆ ವಹಿಸಿದ್ದರು. ಇಲಕಲ್ಲ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಆದಯ್ಯ ಅಮರಯ್ಯ ಬೆನಕನಾಳಮಠ, ಎಮ್ ಎಸ್ ಮಠ ಚನ್ನಬಸಯ್ಯ ಎಸ್. ಹಿರೋಳಿಮಠ, ಮಹಾಂತಯ್ಯ ಪಿ. ಗಚಿನಮಠ, ಬಸಯ್ಯ ಎಸ್. ಹಿರೇಮಠ, ರಾಜಶೇಖರಯ್ಯ ಜಿ. ಕೂಡಲಗಿಮಠ, ಮಹಾಂತಯ್ಯ ಎಸ್. ತಾವರಗೇರಿ,ಗುರುಪಾದಯ್ಯ ಹಿರೇಮಠ,ಗಿರಿಜಮ್ಮ ಎಸ್. ಮಠ, ದ್ರಾಕ್ಷಯಣಿ ಎಸ್. ಕೆಂಭಾವಿಹಿರೇಮಠ, ಲಲಿತಾ ಹಿರೇಮಠ, ನಂದಾ ಎಂ. ಬೇಲೆರಿ, ಉಮಾ.ಎಸ್.ಮಠದ ಎಲ್ಲಾ ನಿರ್ದೇಶಕರು ಹಾಗೂ ನಗರದ ಗಣ್ಯರು ಹಾಜರಿದ್ದರು.