ಜಾತ್ರೆಗಳಿಂದ ಭಾವೈಕ್ಯತೆ ಮೂಡುತ್ತದೆ: ಕಾಸುಗೌಡ ಬಿರಾದಾರ
ಇಂಡಿ :ಜೂ.10: ಜಾತ್ರೆ ಹಬ್ಬ ಹರಿದಿನಗಳು ಭಾವೈಕ್ಯತೆಯ ಸಂಕೇತ ಸಾರ್ವಜನಿಕವಾಗಿ ಎಲ್ಲಾ ಸಮುದಾಯದ ಜನರು ಒಂದು ಕಡೆ ಸೇರಿ ಇಂತಹ ಜಾತ್ರೆಗಳು ಆಚರಿಸುವದರಿಂದ ನಾವೇಲ್ಲಾ ಒಂದೇ ಭಾರತೀಯ ಮಕ್ಕಳು ಎಂಬ ಭಾವ ಮೂಡುತ್ತದೆ ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಹೇಳಿದರು.
ಪಟ್ಟಣದ ಚೌಡೇಶ್ವರಿ ದೇವಿಯ ಜಾತ್ರಾಮಹೋತ್ಸವದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭಾರತ ವಿಶ್ವದಲ್ಲಿಯೇ ಸಾಂಸ್ಕøತಿ ಶ್ರೀಮಂತ ರಾಷ್ಟ್ರ ಭಾರತ ಸಂಸ್ಕøತಿ ಆಚಾರ ವಿಚಾರ ಜಗತ್ತಿನ ಯಾವ ದೇಶದಲ್ಲಿ ಸಿಗುವುದಿಲ್ಲ, ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಪರಂಪರೆ ಸಂಸ್ಕøತಿ ಎತ್ತಿ ಹಿಡಿದಿದೆ. ಜಾತ್ರೆಗಳು ಭಾವೈಕ್ಯತೆಯ ಪ್ರತೀಕ ನಮ್ಮ ಪೂರ್ವಜರ ಆಚಾರ ವಿಚಾರ ಪ್ರತಿಯೋಬ್ಬರಲ್ಲಿ ಜೀವಂತವಾಗಿರಬೇಕು ಎಂದರು.
ಶ್ರೀಶೈಲಗೌಡ ಪಾಟೀಲ ,ಯಮುನಾಜಿ ಸಾಳುಂಕೆ ಜಂಟಿಯಾಗಿ ಮಾತನಾಡಿ ಇಂದು ಯುವಸಮುದಾಯ ಭಾರತೀಯ ಸಂಸ್ಕøತಿ ,ಪರಂಪರೆ ಮರೇಯಾಗುತ್ತಿದೆ ಹಿಂದಿನ ಆಟ ನಾಟಕ , ದೊಡ್ಡಾಟ, ಡೋಳ್ಳು ಕಣಿತ, ಚಿಟ್ಟಲಗಿ,ತೋಗಲು ಬೊಂಬೆಯಾಟ ಇಂತಹ ಹಿಂದಿನ ಕಲೆಗಳು ಮಾಸಿಯಾಗುತ್ತಿತ್ತು ಇವುಗಳನ್ನು ಬೆಳೆಸಬೇಕು, ಮನುಷ್ಯನ ಒತ್ತಡ ಜೀವನದಲ್ಲಿ ಇಂತಹ ಹಾಸ್ಯ ರಸಮಂಜರಿ ಕಾರ್ಯಕ್ರಮಗಳು ನಡೆಸಬೇಕು, ಯಾವುದೇ ಕಲೆಗಾರನ ಬಣ್ಣದ ಬದುಕು ಕಷ್ಟದಾಯಕವಾಗಿದೆ ಅವರು ಎಷ್ಟೇ ಕಷ್ಟ ನಷ್ಟಗಳು ಜಿನಜೀವನದಲ್ಲಿ ಇದ್ದರೂ ಕೂಡಾ ಕಹಿಯನ್ನು ಮರೆತು ಜನಸಮುದಾಯಕ್ಕೆ ನಗಿಸುತ್ತಾರೆ ಇವರನ್ನು ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು.
ಕಾಸುಗೌಡ ಬಿರಾದಾರ, ಶ್ರೀಕಾಂತ ದೇವರ, ಶ್ರೀಶೈಲಗೌಡ ಪಾಟೀಲ, ದೇವೇಂದ್ರ ಕುಂಬಾರ, ಸತೀಶ ಕುಂಬಾರ, ಶ್ರೀಕಾಂತ ದೇವರ, ಯುಮುನಾಜೀ ಸಾಳುಂಕೆ, ಮಲ್ಲು ದೇವರ, ಅಮಸಿದ್ದ ಕುಂಬಾರ ವೇದಿಕೆಯಲ್ಲಿದ್ದರು.