ಸಮಾಜಮುಖಿ ಕೆಲಸ ಮಾಡಿ: ಡಾ. ವಿಲಿಯಂ ರಾಜಶೇಖರ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.10:35 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೃಷಿ ಅಧಿಕಾರಿ ಎಮ್.ಎಸ್. ವಡ್ಡರ ಹಾಗೂ ಬಿ.ಬಿ. ಮಾದರ ಅವರು ಸಮಾಜಮುಖಿ ರಚನಾತ್ಮಕ ಕೆಲಸ ಮಾಡುತ್ತ ಸುಖಕರವಾಗಿ ಬಾಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ ಶುಭ ಹಾರೈಸಿದರು.
ವಿಜಯಪುರ ಜಂಟಿ ನಿದೇಶಕರ ಕಚೇರಿಯಲ್ಲಿ ನಿವೃತ್ತಿ ಹೊಂದಿದ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಅವರ ಬಿಳ್ಕೋಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪದೊನ್ನತಿ ಹೊಂದಿದ ಅಧೀಕ್ಷಕ ಬಿ.ಎ. ಪಾಟೀಲ ಅವರನ್ನು ಕೂಡಾ ಬೀಳ್ಕೊಡಲಾಯಿತು.
ಕೃಷಿ ಅಧಿಕಾರಿಗಳ ಕುರಿತು ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಸೋಮಶೇಖರ ಜತ್ತಿ ಕೂಡಾ ಇದೇ ವೇಳೆ ಮಾತನಾಡಿದರು.
ತಾಲೂಕಾ ಸಹಾಯಕ ಕೃಷಿ ನಿರ್ದೇಶಕ ಡಾ. ಎಸ್.ಎ. ಇನಾಮದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಸ್.ಸಿ. ಪಾಟೀಲ, ರಾಜೇಂದ್ರ ಪಾಟೀಲ, ಗುರುರಾಜ ಕುಲಕರ್ಣಿ, ಆನಂದ ನಿಂಬರಗಿ, ಗೋವಿಂದ ಭೋಸಲೆ ಮುಂತಾದವರಿದ್ದರು.
ಲಿಂಗರಾಜ ತಾಳಿಕೋಟಿ ಸ್ವಾಗತಿಸಿ, ನಿರೂಪಿಸಿ ಕೊನೆಯಲ್ಲಿ ವಂದಿಸಿದರು.