ಶಿಕ್ಷಕಿ ಜೆ.ಡಿ ಕಾಂಬಳೆ ಜೀವನಸಾರ್ಥಕ :ಡಾ.ಕಾಂತು ಇಂಡಿ.
ಇಂಡಿ:ಜೂ.10:ಎಲ್ಲಾ ದಾಸೋಹಗಳಲ್ಲಿ ಜ್ಞಾನದಾಸೋಹ ಪವಿತ್ರ ಶಿಕ್ಷಣದಲ್ಲಿ ಶಿಕ್ಷಕರನ್ನು ದೇವರ ಸ್ಥಾನದಲ್ಲಿ ಗೌರವಿಸುತ್ತಾರೆ
ಇಂತಹ ಪವಿತ್ರ ಕಾರ್ಯದಲ್ಲಿ ಶ್ರೀಮತಿ ಜೆ.ಡಿ ಕಾಂಬಳೆ ಶಿಕ್ಷಕಿ ಸತತ ತಮ್ಮ ಜೀವನ ಮಗುವಿನೊಂದಿಗೆ ಕಳೆದು ಒಳ್ಳೇಯ ನಿಷ್ಕಲ್ಮಶ ಸಮಾಜದಲ್ಲಿ ಆದರ್ಶಕ ಶಿಕ್ಷಕಿ ಎಂದು ಕರೆಸಿಕೊಂಡಿರುವುದು ಜೀವನ ಸಾರ್ಥಕ ಎಂದು ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಡಾ.ಕಾಂತು ಇಂಡಿ ಹೇಳಿದರು.
ಪಟ್ಟಣದ ವಿಜಯಪೂರ ರಸ್ತೆಯ ಶಂಕರ ಪಾರ್ವತಿ ಸಭಾ ಭವನದಲ್ಲಿ ಏರ್ಪಡಿಸಿದ ಶ್ರೀಮತಿ ಜೆ.ಡಿ ಕಾಂಬಳೆ ಶಿಕ್ಷಕಿಯ ನಿವೃತ್ತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ.ಗುರು ಎಂಬ ಎರಡಕ್ಷರದ ವ್ಯಕ್ತಿ ಇಡೀ ಮಗುವಿನ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವ ಮೂಲಕ ಪರಿಪೂರ್ಣ ಮಾನೀಯ ಮೌಲ್ಯಗಳನ್ನು ಕಲಿಸಿ ದೇಶದ ಒಳ್ಳೇಯ ನಾಗಕರೀಕರನ್ನಾಗಿ ಮಾಡುವ ದಿವ್ಯಶಕ್ತಿ ಶಿಕ್ಷಕರಿಗಿದೆ. ಸರಕಾರಿ ನೌಕರರಿಗೆ ನಿವೃತ್ತಿ ಖಚಿತ ಆದರೆ ಇರುವ ದಿನಗಳಲ್ಲಿ ಜನರು ನಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಬದುಕಬೇಕು ,ಇಂದು ಕಾಂಬಳೆ ಶಿಕ್ಷಕಿ ಘನತೆ ಗೌರವ ಹೆಚ್ಚಿಸಿಕೊಂಡಿರುವದರಿಂದಲೆ ಇಷ್ಟೋಂದು ಜನರು ಪಾಲ್ಗೊಂಡಿದ್ದಾರೆ. ಯಾವ ಗುರು ಇತರ ಮಕ್ಕಳನ್ನು ತಮ್ಮ ಮಕ್ಕಳಂತೆ ಪ್ರೀತಿ,ವಿಶ್ವಾಸದಿಂದ ಕಾಣುತ್ತಾರೆ ಅಂತವರಿಗೆ ಭಗವಂತ ಒಳ್ಳೇಯದನ್ನು ಮಾಡುತ್ತಾನೆ,
ಶಿಕ್ಷಕರು ತಮ್ಮ ಸೇವಾ ಅವಧಿಯಲ್ಲಿ ಗಳಿಸಿರುವ ಜ್ಞಾನ ,ಅನುಭವ ನಿವೃತ್ತಿಯ ನಂತರ ಸಮಾಜಕ್ಕೆ ನೀಡಿ. ನಿಮ್ಮ ಸೇವಾ ಅವಧಿ ಮುಗಿದಿರುವುದು ಸರಕಾರದ ನೌಕರಿಗೆ ವಿನಹ ಶಾರೀರಿಕವಾಗಿ ಅಲ್ಲ. ನಿಮ್ಮ ಖುಣ ಸಮಾಜಕ್ಕೆ ದೀನ ದುರ್ಬಲರಿಗೆ ,ಅಧ್ಯಾತ್ಮಿಕ ,ಧಾರ್ಮಿಕ ಕಾರ್ಯಗಳಿಗೆ ಮಿಸಲಾಗಿರಲಿ ಎಂದು ಸಂದೇಶ ನೀಡಿದರು. ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ನಿವೃತ್ತ ವ್ಯವಸ್ಥಾಕ ಚಾಬುಕಸವಾರ ಮಾತನಾಡಿದರು.
ನಿಜಣ್ಣಾ ಕಾಳೆ. ರಾಜು ಕುಲಕರ್ಣಿ , ಜಿ.ಜಿ ಬರಡೋಲ ಪಿ.ಎಂ ವಠಾರ ಉಪಸ್ಥಿತರಿದ್ದರು. ಜಿ.ಜಿ ಬರಡೋಲ ಕಾರ್ಯಕ್ರಮ ನಿರೂಪಿ, ಎ.ಎಸ್ ಬಡಿಗೇರ ಸ್ವಾಗತಿಸಿ , ಎಸ್.ಎಸ್ ರೂಗಿ ವಂದಿಸಿದರು.
ನಿವೃತ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯ ,ಗುರುಗಳಾದವರು ಕೇವಲ ಶಾಲೆಯಲ್ಲಿ ಮಾತ್ರ ಒಳ್ಳೇಯವರಾದರೆ ಸಾಲದು ಸಮಾಜದ ಒಳ ಹೊರಗೂ ಒಳ್ಳೇಯವರು ಎನಿಸಿಕೊಳ್ಳಬೇಕು ಅಂದಾಗ ಜೀವನ ಸಾರ್ಥಕ. ಯುವ ಪಿಳಿಗೆ ಸಂಸ್ಕಾರ ,ಸಂಸ್ಕøತಿ ಮರೆತ್ತಿದ್ದಾರೆ ಶಿಕ್ಷಕರು ತಿದ್ದಿ ,ತೀಡಿ ಕಲಿಸಬೇಕು. ಮಗುವಿಗೆ ಪ್ರಾಥಮಿಕ ಹಂತ ಎನ್ನೇಲ್ಲಾ ಮಾಡಲು ಸಾಧ್ಯ ಸಸಿಯಾಗಿ ಬಗಿದ್ದು ಮರವಾಗಿ ಬಗಿತ್ತೇ ಎನ್ನುವಂತೆ ಪ್ರಾಥಮಿಕ ಶಾಲೆಯಲ್ಲಿ ಮಗುವಿಗೆ ಶಿಕ್ಷಕರು ಜವಾಬ್ದಾರಿಯಿಂದ ಕಲಿಸಿಸಬೇಕು. ನನ್ನ ಸೇವಾ ಅವಧಿಯಲ್ಲಿ ಸಹಕರಿಸಿದ ಸಿಬ್ಬಂದಿ, ಪಾಲಕ ಬಂಧುಗಳಿಗೂ ಮೇಲಾಧಿಕಾರಿಗಳು ನನ್ನ ಅಭಿನಂದನೆ.
ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿ ಶ್ರೀಮತಿ ಜೆ.ಡಿ ಕಾಂಬಳೆ.