ಭೀಕರ ಅಪಘಾತ: 15 ಮಂದಿ ಗಂಭೀರವಾಗಿ ಗಾಯ
ಮಾಲೂರು.ಜೂ.೧೦- ಟೆಂಪೋ ಟ್ರಾವೆಲರ್ (ಟಿ ಟಿ )ವಾಹನ ಹಾಗೂ ಇನೋವಾ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಟಿಟಿ ವಾಹನದಲ್ಲಿದ್ದ ಮಕ್ಕಳು ಸೇರಿದಂತೆ ೧೫ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಮಾಲೂರು ಹೊಸೂರು ರಸ್ತೆಯ ಸೀತ ನಾಯಕನಹಳ್ಳಿ ಗ್ರಾಮದ ಬಳಿ ನಡೆದಿದೆ. ಗಾಯಗೊಂಡವರನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆ ಹಾಗೂ ಕೋಲಾರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಬೆಂಗಳೂರಿನ ನಾಗವಾರದಿಂದ ಟೆಂಪೋ (ಟ್ರವಲರ್ )ಟಿಟಿ ವಾಹನದಲ್ಲಿ ೧೫ ಮಂದಿ ತಾಲೂಕಿನ ಹೊಸೂರು ರಸ್ತೆಯಲ್ಲಿರುವ ಮಿಣಸಂದ್ರ ಗ್ರಾಮದ ಮುನಿಯಪ್ಪನವರ ಮನೆಯಲ್ಲಿ ಸೀಮಂತಕ್ಕೆ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಮಾಲೂರು ಹೊಸೂರು ರಸ್ತೆಯಲ್ಲಿ ವಾಪಸ್ ಆಗುವ ವೇಳೆ ಮಾಲೂರು ಕಡೆಯಿಂದ ಬಂದ ಇನೋವಾ ಕಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮರಕ್ಕೆ ಅಪ್ಪಳಿಸಿದ್ದು ಟಿಟಿ ವಾಹನದಲ್ಲಿದ್ದ ಯಶೋದಮ್ಮ ೫೭ ನಾರಾಯಣಮ್ಮ ಗೌರಮ್ಮ ೫೯ ವೆಂಕಟೇಶಮ್ಮ ೪೮ ಆಶಾ ೩೫ ಸುಜಾತಾ ೪೦ ಮಧುರ್ಯ ೧೦ ಟಿ ಟಿ ವಾಹನ ಚಾಲಕ ಮೊಹಮದ್ ೪೬ ತೀವ್ರವಾಗಿ ಗಾಯಗೊಂಡಿದ್ದು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಗಳ ಮೂಲಕ ಹೊಸಕೋಟೆಯ ಎಂ ವಿ ಜೆ ಹಾಗೂ ಸಿಲಿಕಾನ್ ಸಿಟಿ ಆಸ್ಪತ್ರೆಗೆ ರವಾನಿಸಲಾಗಿದೆ
ಕಾರಿನಲ್ಲಿದ್ದ ಮಿಣಸಂದ್ರ ಗ್ರಾಮದ ಅನಿತಾ ೨೫ ವರ್ಷ ಮಂಜುನಾಥ್ ೨೬ ವರ್ಷ ಮುನಿಯಪ್ಪ ೫೦ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆ ಗೆ ಹೊಸಕೋಟೆ ಆಸ್ಪತ್ರೆಗೆ ಕಳುಹಿಸಲಾಗಿದ್ದು ಜೊತೆಯಲ್ಲಿ ದ್ದ ಮಗುವಿಗೆ ಯಾವುದೇ ಗಾಯಗಳಾಗಿಲ್ಲ ಅದೃಷ್ಟವಶಾತ್ ಯಾವುದೇ ರೀತಿಯ ಕಾಯುಗಳು ಆಗಿಲ್ಲ.
ಅಪಘಾತ ನಡೆದ ಸ್ಥಳಕ್ಕೆ ಪಟ್ಟಣದ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.