ಮಕ್ಕಳ ಆಸಕ್ತಿಯನ್ನ ಪ್ರೋತ್ಸಾಹಿಸಿ: ವರ್ತೂರು ಸಂತೋಷ್
ಮಾಲೂರು.ಜೂ.೧೦- ಇತ್ತೀಚಿಗೆ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮೊಬೈಲ್ ಹಾಗೂ ಇಂಟರ್ನೆಟ್‌ನಿಂದ ಹೆಚ್ಚು ಸಮಯವನ್ನು ವ್ಯರ್ಥ ಮಾಡಿ ಉತ್ತಮ ಹವ್ಯಾಸಗಳು ಹಾಗೂ ಜ್ಞಾನವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಪೋಷಕರು ಬಾಲ್ಯದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳು,ನೃತ್ಯ,ಗಾಯನ ಸೇರಿದಂತೆ ಯಾವುದಾದರೂ ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಪ್ರೋತ್ಸಾಹಿಸಿ ಅಭ್ಯಾಸ ಮಾಡಿಸಬೇಕು ಎಂದು ಬಿಗ್ ಬಾಸ್ ಖ್ಯಾತಿಯ ವರ್ತುರು ಸಂತೋಷ್ ಹೇಳಿದರು,
ಮಾಲೂರು ಪಟ್ಟಣದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗಮಂದಿರದಲ್ಲಿ ನಡೆದ ಶ್ರೇಯ ಡಾನ್ಸ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ನಾಟ್ಯಮಯ ಈ ಲೋಕವೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಲೆ ಯಾರೊಬ್ಬರ ಸ್ವತ್ತು ಅಲ್ಲ ಪೋಷಕರು ತಮ್ಮ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹಾಗೂ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಮಕ್ಕಳು ಬಾಲ್ಯದಲ್ಲಿಯೇ ಕಲೆಯನ್ನು ಸತತವಾಗಿ ಅಭ್ಯಾಸ ಮಾಡಿದಾಗ ಸಾಧನೆ ಮಾಡಬಹುದಾಗಿದೆ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಹಳ್ಳಿ ಸೊಗಡಿನ ನನ್ನನ್ನು ಕನ್ನಡಿಗರು ವೋಟ್ ಮಾಡಿ ಆಶೀರ್ವಾದ ಮಾಡಿದ್ದರಿಂದ ಬಿಗ್ ಬಾಸ್ ಮನೆಯಲ್ಲಿ ಕೊನೆಯ ತನಕ ಉಳಿಯಲು ಸಾಧ್ಯವಾಯಿತು. ಗೆಲುವು ಯಾರದೇ ಆದರೂ ಸಹ ಕನ್ನಡಿಗರ ಅಭಿಮಾನವೇ ನನ್ನ ಗೆಲುವಾಗಿದೆ ಎಂದರು.
ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಲ್ಲಿನ ಶ್ರೇಯ ಡ್ಯಾನ್ಸ್ ಅಕಾಡೆಮಿಯು ಕಳೆದ ೯ ವರ್ಷಗಳ ಹಿಂದೆ ಪ್ರಾರಂಭಗೊಂಡು ಅಕಾಡೆಮಿ ವತಿಯಿಂದ ಪಟ್ಟಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮ ಜಯಂತಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳಲ್ಲಿ ಮಕ್ಕಳ ನೃತ್ಯ ಕಾರ್ಯಕ್ರಮ ನೀಡಿದ್ದಾರೆ ಅಲ್ಲದೆ ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಸಹ ನೃತ್ಯ ಪ್ರದರ್ಶನವನ್ನು ನೀಡಿದ್ದು ಪಾಶ್ಚಿಮಾತ್ಯ ಭರತನಾಟ್ಯ ಕರ್ನಾಟಕ ಶಾಸ್ತ್ರೀಯ ಸಂಗೀತ ಕೀಬೋರ್ಡ್ ವಯರ್ ಇನ್ ಏರೋಬಿಕ್ಸ್ ತರಬೇತಿಯನ್ನು ಸಹ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ
ಪ್ರಸ್ತುತ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ಈ ಲೋಕವೆಲ್ಲ ನಾಟ್ಯಮಯ ಕಾರ್ಯಕ್ರಮ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ ಈ ಸಂಸ್ಥೆಯು ಹೀಗೆಯೇ ಮುಂದುವರೆಯಲಿ ಪೋಷಕರ ಪ್ರೋತ್ಸಾಹ ಸಮಿತಿ ಸಂಸ್ಥೆಗೆ ಹೆಚ್ಚಿನ ರೀತಿಯಲ್ಲಿ ಸಿಗಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ೨೦೨೪ನೇ ಸಾಲಿನಲ್ಲಿ ೧೦ನೇ ತರಗತಿಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಹ ಅಭಿನಂದಿಸಿ ಪ್ರೋತ್ಸಾಹಿಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೇಯ ಡ್ಯಾನ್ಸ್ ಅಕಾಡೆಮಿ ಸ್ಟಾರ್ ಆಫ್ ಮಲೂರು ಸೀಸನ್ ೧ರ ನೃತ್ಯ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಸಾರಿ ಪೋಷಕ ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬಿಗ್ ಬಾಸ್ ತನಿಷಾ ಕುಪ್ಪಂಡ ಮಾತನಾಡಿ, ಪೋಷಕರು ಬಾಲ್ಯದಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ತಮ್ಮ ಮಕ್ಕಳಲ್ಲಿ ಹುದುಗಿರುವ ಕ್ರೀಡೆ ಸಂಗೀತ ನೃತ್ಯ ಯಾವುದಾದರೂ ಒಂದು ಕಲೆಯನ್ನು ಪ್ರೋತ್ಸಾಹಿಸಬೇಕು ಧಾರವಾಹಿಗಳ ಮೂಲಕ ನನ್ನ ವೃತ್ತಿ ಜೀವನ ಪ್ರಾರಂಭ ಮಾಡಿ ಬಿಗ್ ಬಾಸ್ ವೇದಿಕೆ ನನಗೆ ದೊಡ್ಡ ಪ್ರಮಾಣದ ಹೆಸರು ಮಾಡಿಕೊಟ್ಟಿದೆ ಯಾವುದೇ ಕಾರ್ಯಕ್ರಮಕ್ಕೆ ಹೋದರು ನನ್ನನ್ನು ಬಿಗ್ ಬಾಸ್ ಬೆಂಕಿ ಅನುಷಾ ಎಂದು ಗುರುತಿಸುತ್ತಾರೆ ನಿಮ್ಮ ಅಭಿಮಾನಕ್ಕೆ ಚಿರಋಣಿಯಾಗಿದ್ದು ಹೀಗೆ ನನ್ನ ಮೇಲೆ ಇರಲಿ ಚಿತ್ರರಂಗದಲ್ಲಿಯೂ ಅವಕಾಶಗಳು ಸಿಗುತ್ತಿತ್ತು ಮುಂಬರುವ ದಿನಗಳಲ್ಲಿ ಚಿತ್ರರಂಗದಲ್ಲಿಯೂ ಸಹ ನಿಮ್ಮ ಸಹಕಾರ ಪ್ರೋತ್ಸಾಹ ಹೀಗೆ ಇರಲಿ ಎಂದು ಹೇಳಿದರು
ಕಿರುತೆರೆ ನಟಿ ವಿಜಯಲಕ್ಷ್ಮಿ ಶ್ರೇಯ ಡ್ಯಾನ್ಸ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಪ್ರಿಯಾಂಕಾ ಕವಿಯಿತ್ರಿ ಮಂಜು ಕನ್ನಿಕಾ ಜ್ಯೋತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ನಾರಾಯಣಸ್ವಾಮಿ ಉಪಾಧ್ಯಕ್ಷ ಟೀಕೆ ನಾಗರಾಜ್ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರವಿ ಇನ್ನಿತರರು ಹಾಜರಿದ್ದರು.