ಮೋದಿ ಪ್ರಮಾಣವಚನ: ಗಡಿಜಿಲ್ಲೆ ಮಹಿಳೆಗೆ ಆಹ್ವಾನ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.10- ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಚಾಮರಾಜನಗರತಾಲೂಕಿನಉಮ್ಮತ್ತೂರು ಗ್ರಾಮದ ವರ್ಷಅವರಿಗೆ ಆಹ್ವಾನ ನೀಡಲಾಗಿದೆ.
ಚಾಮರಾಜನಗರತಾಲೂಕಿನ ಉಮ್ಮತ್ತೂರುಗ್ರಾಮದ ಪ್ರಗತಿಪರರೈತರಾದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಮಾತುಗಳಿಂದ ಪ್ರೇರಣೆಗೊಂಡು ಬಾಳೆದಿಂಡಿನಿಂದ ವಸ್ತುಗಳನ್ನು ತಯಾರಿಸಿ ಉದ್ಯಮಿಯಾಗಿದ್ದಾರೆ.
ಆತ್ಮನಿರ್ಭರಯೋಜನೆಯ ಮೂಲಕ ಪ್ರೇರಪಣೆಗೊಂಡು ಬಾಳೆದಿಂಡಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮೌಲ್ಯವರ್ಧನೆ ಮಾಡಿ ಬದುಕುಕಟ್ಟುಕೊಂಡಿರುವ ವμರ್Áಅವರಿಗೆ ಪ್ರಧಾನಿ ಮೋದಿ ಪ್ರಮಾಣವಚನಕಾರ್ಯಕ್ರಮಕ್ಕೆಆಹ್ವಾನ ಬಂದಿದ್ದು,ದೆಹಲಿಯ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಮಾಣವಚನಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಕಾರ್ಯಾಲಯದಿಂದ ಆಹ್ವಾನಿಸಿರುವುದು ತುಂಬಾ ಖುಷಿ ತಂದಿದೆಎಂದು ವμರ್Á ಸಂತಸ ವ್ಯಕ್ತಪಡಿಸಿದ್ದಾರೆ.