ಪತ್ರಕರ್ತರ ಕ್ರೀಡಾಕೂಟ ಉದ್ಘಾಟಿಸಿದ ಗೋಪಾಲಕೃಷ್ಣ
ಸಂಜೆವಾಣಿ ವಾರ್ತೆ
ನಂಜನಗೂಡು: ಜೂ.10:- ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸದಸ್ಯರಿಗೆ ಮತ್ತು ಕುಟುಂಬದವರಿಗೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು ಕ್ರೀಡಾಕೂಟವನ್ನು ನಂಜನಗೂಡು ಲಯನ್ಸ್ ಸಂಸ್ಥೆ ಅಧ್ಯಕ್ಷ ಗೋಪಾಲಕೃಷ್ಣ ಗುಂಡು ಎಸೆಯುವ ಮೂಲಕ ಉದ್ಘಾಟಿಸಿದರು ಜೊತೆಗೆ ಸಿಟಿಜನ್ ಶಾಲೆಯ ಕಾರ್ಯದರ್ಶಿ ಹಲಿ ಕೈಜೋಡಿಸಿದರು.
ಲಯನ್ಸ್ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ ಪ್ರತಿದಿನ ಪತ್ರಕರ್ತರು ಒತ್ತಡದಲ್ಲಿರುತ್ತಾರೆ ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯವಾಗಿ ಇರಬೇಕಾದರೆ ಯಾವುದಾದರೂ ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು ರೋಗಗಳಿಗೆ ಮಾತ್ರೆ ಟಾನಿಕ್ ಮುಖ್ಯವಲ್ಲ ಪ್ರತಿದಿನ ವಾಕಿಂಗ್ ಯಾವುದಾದರೂ ಕ್ರೀಡೆಯನ್ನು ಅಳವಡಿಸಿಕೊಳ್ಳಿ ಪ್ರತಿಯೊಬ್ಬರೂ ಕೂಡ ಆರೋಗ್ಯದಿಂದ ಇರಬಹುದು ಎಂದರು ಎಲ್ಲಾ ಕ್ರೀಡಾಪಟುಗಳಿಗೂ ಶುಭಾಶಯ ಕೋರಿದರು.
ಸಿಟಿಜನ್ ಶಾಲೆಯ ಕಾರ್ಯದರ್ಶಿ ಅಲಿ ಅವರು ಮಾತನಾಡಿ ಎಲ್ಲಾ ಕ್ರೀಡಾಪಟುಗಳಿಗೂ ಶುಭಾಶಯ ಕೋರಿದರು. ಸಂಘದ ಎಲ್ಲಾ ಸದಸ್ಯರು ಕುಟುಂಬಸ್ಥರು ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದರು. ಸಿಟಿಜನ್ ಶಾಲೆಯ ಸಂಸ್ಥೆ ವತಿಯಿಂದ ಎಲ್ಲಾ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಿದರು.
ದೈಹಿಕ ಶಿಕ್ಷಕರ ವೃದ್ಧ ಕ್ರೀಡೆಗಳನ್ನು ಈ ಕ್ರೀಡಾಕೂಟದಲ್ಲಿ ಸಂಘದ ಸದಸ್ಯರು ಕುಟುಂಬದ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು