ಮೋದಿ ಸರ್ಕಾರಕ್ಕೆ ಮೈಸೂರಲ್ಲಿ ಸಿಹಿ ಹಂಚಿ ಸಂಭ್ರಮ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.10:- ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಯದುವೀರ್ ಒಡೆಯರ್ ಸೇನೆ ಹಾಗೂ ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ಆನಂತರ ಸಾರ್ವಜನಿಕರಿಗೆ ಚಹಾ ವಿತರಿಸಿ ಸಂಭ್ರಮಿಸಲಾಯಿತು
ಈ ವೇಳೆ ಮಾಜಿ ಮಹಾಪೌರ ಸಂದೇಶ ಸ್ವಾಮಿ ಮಾತನಾಡಿ, ದೇಶದ ಎಲ್ಲ ಜಾತಿ, ಧರ್ಮ, ರಾಜಕೀಯ ಶಕ್ತಿಗಳು ಒಗ್ಗೂಡಿ ಷಡ್ಯಂತ್ರ ನಡೆಸಿದರೂ ಮೋದಿ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರಬುದ್ಧ ಮತದಾರರ ಬೆಂಬಲ ಬಿಜೆಪಿಗೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನರೇಂದ್ರ ಮೋದಿ ಯವರು ಮೂರನೇ ಬಾರಿಗೆ ನಮ್ಮ ದೇಶದ ಪ್ರಧಾನಿ ಮಂತ್ರಿಯಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.
ದೇಶವನ್ನು ಮುನ್ನುಡಿಸುವುದು ಮತ್ತು ನಮ್ಮ ದೇಶವನ್ನು ವಿಶ್ವಾದ್ಯಂತ ಪರಿಚಯಿಸಿ ವಿವಿಧ ದೇಶಗಳಿಂದ ಬಂಡವಾಳಗಳನ್ನು ತಂದು ಮೇಕ್ ಇನ್ ಇಂಡಿಯಾ ಅಂತಹ ಯೋಜನೆಗಳನ್ನು ಮಾಡಿದರು, ಇಂದು ಇಡೀ ಭಾರತದಾದ್ಯಂತ ಎನ್ ಡಿ ಎ ಅಭೂತಪೂರ್ವ ಬಹು ಮತ ಪಡೆದು ಜಯಭೇರಿ ಸಾಧಿಸಿರುವುದು ಪ್ರಜಾಪ್ರಭುತ್ವದಲ್ಲಿ ಇತಿಹಾಸ ಬರೆದಿದ್ದಾರೆ ಎಂದು ಹೇಳಿದರು
ನಂತರ ಮಾತನಾಡಿದ ಮಾಜಿ ಮಹಾಪೌರ ಶಿವಕುಮಾರ್, ದೇಶದಲ್ಲಿ ಮತದಾರ ಎನ್‍ಡಿಎ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ನೀಡಿದ್ದು, ಮುಂದಿನ 10 ವರ್ಷಗಳ ಕಾಲ ಪ್ರಧಾನಿ ನರೇಂದ್ರಮೋದಿಯವರ ದೇಶದಲ್ಲಿ ಸುಭದ್ರ ಸರ್ಕಾರವನ್ನು ನೀಡಲಿದ್ದಾರೆ, ಎನ್ ಡಿಎ ನೇತೃತ್ವದ ಸರ್ಕಾರ ದೇಶದಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಿದೆ, ಭಾರತ ಈ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ನಗರ ಪಾಲಿಕೆ ಸದಸ್ಯ ಮ.ವಿ.ರಾಮ್ ಪ್ರಸಾದ್, ಸೌಮ್ಯ ಉಮೇಶ್, ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಯದುವೀರ್ ಒಡೆಯರ ಸೇನೆ ಅಧ್ಯಕ್ಷ ಬೈರತಿ ಲಿಂಗರಾಜು, ಜೆಡಿಎಸ್ ಕಾರ್ಯಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಸುಚೇಂದ್ರ, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ, ಉಮೇಶ್, ಬಿಲ್ಲಯ್ಯ ಅಶೋಕ ಪುರಂ, ಸದಾಶಿವ, ಚಕ್ರಪಾಣಿ ಇನ್ನಿತರರು ಹಾಜರಿದ್ದರು