ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ: ಕಾಮಗೆರೆ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ಸಂಜೆವಾಣಿ ವಾರ್ತೆ
ಕೊಳ್ಳೇಗಾಲ.ಜೂ.10:- ತಾಲೂಕಿನ ಕಾಮಗೆರೆ ಗ್ರಾಮದಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಮೂರನೇ ಬಾರಿಗೆ ಪ್ರಧಾನಿಯಾದ ಹಿನ್ನೆಲೆ ಬಿಜೆಪಿ ಕಾರ್ಯಕರ್ತ ಅಭಿಮಾನಿಗಳು ಸಿಹಿಲಾಡು ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮೂರನೇ ಬಾರಿಗೆ ನರೇಂದ್ರ ಮೋದಿಯವರು ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಕಾಮಗೆರೆ ಗ್ರಾಮದ ಏರ್ ಟೆಲ್ ನಾಗೇಂದ್ರ ಅವರು ಬಿಜೆಪಿ ಮುಖಂಡರುಗಳೊಡನೆ ಸಿಹಿಲಾಡು ಹಂಚಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದತ್ತೇಶ್ ಕುಮಾರ್ ಮಾತನಾಡಿ ಸನ್ಮಾನ ನರೇಂದ್ರ ಮೋದಿ ಅವರು 10 ವರ್ಷದ ದೇಶದ ಆಡಳಿತ ಅಭಿವೃದ್ಧಿಯನ್ನು ಮೆಚ್ಚಿ ಮತ್ತೊಮ್ಮೆ ಈ ಬಾರಿ ಎನ್. ಡಿ.ಎ ಸರ್ಕಾರದ ಮೂಲಕ ಮೂರನೇ ಬಾರಿ ಪ್ರಧಾನಿಯಾಗಿರುವುದು ಸಂತಸ ತಂದಿದೆ. ಇ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಅಂತ ನಮ್ಮ ದೇಶ ಸಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಕಾಮಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೇಕರಿ ರವಿ ಅವರು ಮಾತನಾಡಿ ದೇಶ ಕಂಡ ಧೀಮಂತ ನಾಯಕರು ಸನ್ಮಾನ್ಯ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ.
ಕಳೆದ ಹತ್ತು ವರ್ಷಗಳ ಆಡಳಿತ ಅವಧಿಯಲ್ಲಿ ನರೇಂದ್ರ ಮೋದಿಜಿ ಅವರು ಈ ದೇಶಕ್ಕೆ ಕೊಟ್ಟಂತಹ ಕೊಡುಗೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿ ಮತ್ತೊಮ್ಮೆ ಬಿಜೆಪಿಯನ್ನು ಜನರು ಬೆಂಬಲಿಸಿದ್ದಾರೆ. ಈ ಮೂಲಕ ನಮ್ಮೂರಿನ ಏರ್ಟೆಲ್ ನಾಗೇಂದ್ರ ಅವರು ನರೇಂದ್ರ ಮೋದಿಯವರ ಅವರ ಅಭಿಮಾನಕ್ಕೆ 2000 ಲಾಡುಗಳನ್ನು ಹಂಚಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಅವರ ಅಭಿವೃದ್ಧಿ ಆಡಳಿತವನ್ನು ಮೆಚ್ಚಿ ನಿತೀಶ್ ಕುಮಾರ್ ಅವರು ಮತ್ತು ಚಂದ್ರಬಾಬು ನಾಯ್ಡು ಅವರು ಬಿಜೆಪಿ ಪಕ್ಷವನ್ನು ಬೆಂಬಲಿಸಿ, ಈ ದೇಶದಲ್ಲಿ ಮೂರನೇ ಬಾರಿಗೆ ಆಡಳಿತವನ್ನು ನಡೆಸಲು ಸಾಕಾರ ನೀಡಿದ್ದಾರೆ. ಜೊತೆಗೆ ಸನ್ಮಾನ್ಯ ಎಚ್. ಡಿ ದೇವೇಗೌಡ ಅವರು ಕುಮಾರಸ್ವಾಮಿಯವರು ದೇಶದ ಅಭಿವೃದ್ಧಿಗೆ ಬೆಂಬಲಿಸಿದ್ದಾರೆ. ಮತ್ತು ರಾಜ್ಯದಿಂದ ಎಸ್ ಡಿ ಕುಮಾರಸ್ವಾಮಿ ಸೇರಿದಂತೆ ನಾಲ್ವರು ಕೇಂದ್ರ ಸಂಪುಟದಲ್ಲಿ ಸಚಿವರಾಗಲಿದ್ದಾರೆ ಎಂದು ತಿಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂ. ಅಧ್ಯಕ್ಷ ಚಿಕ್ಕಸ್ವಾಮಿ, ಸದಸ್ಯ ಗೋಪಾಲ್, ಏರ್ಟೆಲ್ ನಾಗೇಂದ್ರ, ರವಿಚಂದ್ರ, ಮಾಲಿಂಗನಕಟ್ಟೆ ಸಿದ್ದಪ್ಪ, ಹನೂರು ವೆಂಕಟೇಗೌಡ, ರವಿಚಂದ್ರ, ಗೌಡ್ರು ಅಂಬರೀಶ್, ಬಾಳೆಗೊನೆ ರಾಜಣ್ಣ, ಕೆಎಸ್‍ಆರ್ ರಾಜು, ಬಿಜೆಪಿ ಮಾಧ್ಯಮ ಸಂಚಾಲಕ ಕೆಬಿ ಮಧು, ಮುಖಂಡರಾದ ಸುರೇಶ್, ಹರೀಶ್, ಮಂಜು, ಪ್ರಭು, ರಘು, ಸುಂದ್ರಣ್ಣ, ವೆಂಕಟೇಶ್ ಸೇರಿದತೆ ಬಿಜೆಪಿ ಜೆಡಿಎಸ್ ಕಾರ್ಯಕರ್ತ ಮುಖಂಡರುಗಳು ಇದ್ದರು.