ರಾಮಸಮುದ್ರದಲ್ಲಿ ತಪ್ಪಿದ ಭಾರಿ ವಿದ್ಯುತ್ ಅನಾಹುತ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.10-ವಿದ್ಯುತ್ ಕಂಬ ಉರುಳಿ ವಿದ್ಯುತ್ ಅನಾಹುತದಿಂದ ಸಂಭವಿಸಬಹುದಾದ ತಪ್ಪಿದ ಘಟನೆ ನಗರದ ರಾಮಸಮುದ್ರದ ಹೊಸದುರ್ಗಿ ಬೀದಿ ಬಡಾವಣೆಯೊಂದರಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ 1ಗಂಟೆಯಲ್ಲಿ ಇದ್ದಕ್ಕಿದ್ದ ಹಾಗೆ ನೋಡ ನೋಡುತ್ತಿದ್ದಂತೆ ವಿದ್ಯುತ್ ಕಂಬವೊಂದು ಕೆಳಗಡೆ ಉರುಳಿ ಬೀಳುತ್ತಿರುವುದನ್ನು ಗಮನಿಸಿದ ಓಂ ಶಾಂತಿ ನ್ಯೂಸ್ ಸರ್ವಿಸ್ನ ಬಿಕೆ ಆರಾಧ್ಯ ಅವರು ಕೂಡಲೇ ಚೆಸ್ಕಾಂ ಇಂಜಿನಿಯರ್ ಮಂಜುನಾಥ ಅವರಿಗೆ ಕರೆ ಮಾಡಿ ಸಂಭವಿಸುತ್ತಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಕೂಡಲೇ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸಿಬ್ಬಂದಿಗಳನ್ನು ಕರೆಸಿ ಎಲ್ಲಾ ವಿದ್ಯುತ್ ತಂತಿಯನ್ನು ಕತ್ತರಿಸಿ ಸಮಯ ಪ್ರಜ್ಞೆಯನ್ನು ಮೆರೆದು ಮುಂದೆ ಆಗುತ್ತಿದ್ದ ಭಾರಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಇದಕ್ಕಾಗಿ ಮಂಜುನಾಥ್‍ರವರಿಗೆ ಬಡಾವಣೆಯ ನಿವಾಸಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಚೆಸ್ಕಾಂ ಇಂಜಿನಿಯರ್ ಮಂಜುನಾಥ್ ಅವರು ಮಳೆಗಾಲದಲ್ಲಿ ಇದು ಸರ್ವೆಸಾಮಾನ್ಯವಾಗಿರುತ್ತದೆ. ಎಲ್ಲೇ ವಿದ್ದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದರೆ, ಕಂಬಗಳು ಬೀಳುವ ಸ್ತಿತಿಯಲ್ಲಿದ್ದರೆ, ತಂತಿಗಳ ಮೇಲೆ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದರೆ ತಕ್ಷಣ ವಿದ್ಯುತ್ ಮಂಡಳಿಗೆ ಮಾಹಿತಿ ತಿಳಿಸುವಂತೆ ಮನವಿ ಮಾಡಿದರು.