ಆತ್ಮಹತ್ಯೆ ಪ್ರಕರಣ ಪೆÇಲೀಸ್ ಅಧಿಕಾರಿಗಳು ಅಮಾನತು
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜೂ.10:- ತಾಲ್ಲೂಕಿನ ಚಂದಗಾಲು ಗ್ರಾಮದ ಒಂದೇ ಕುಟುಂದಸ ನಾಲ್ವರು ಆತ್ಮಹತ್ಯೆ ಯತ್ನ, ಒರ್ವ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಆಪ್ರಾಪ್ತೆ ಸಂತ್ರಸ್ತೆ ನೀಡಿದ ದೂರು ದಾಖಲಿಸಿ ಕೊಳ್ಳದ ಕೆ ಆರ್ ನಗರ ಪೆÇಲೀಸ್ ಠಾಣೆ ಪೆÇಲೀಸ್ ಇನ್ಸ್ ಪೆಕ್ಟರ್ ಪಿ.ಪಿ. ಸಂತೋಷ್, ಸಹಾಯಕ ಸಬ್ ಇನ್ ಸ್ಪೆಕ್ಟರ್ ಗಿರೀಶ್ , ಮುಖ್ಯಪೇದೆ ರಾಘವೇಂದ್ರ ಅವರುಗಳನ್ನು ಜಿಲ್ಲಾ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ನಂದಿನಿ ಅಮಾನತು ಮಾಡಿದ್ದಾರೆ.
ಆಪ್ರಾಪ್ತೆ ಸಂತ್ರಸ್ತೆ ನೀಡಿದ ದೂರನ್ನು ಎಸ್.ಸಿ., ಎಸ್.ಟಿ ದೌರ್ಜನ್ಯ ಕಾಯ್ದೆ, ಪೆÇೀಕ್ಸೋ ಆಕ್ಟ್, ಹಾಗೂ IPಅ 370 ಸೆಕ್ಷನ್ ದಾಖಲು ಮಾಡಿ ಕೊಳ್ಳದೇ ಪೆÇಲೀಸರ ನಿರ್ಲಕ್ಷ್ಯ ಕಾರಣ ಎಂದು ತನಿಖೆ ಮೂಲಕ ವರದಿ ಪಡೆದ ಜಿಲ್ಲಾ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ನಂದಿನಿ ಅವರು ಈ ಅಮಾನತು ಆದೇಸ ಹೊರಡಿಸಿದ್ದಾರೆ.
ನಾಲ್ವರಲ್ಲಿ ಆಪ್ರಾಪ್ತೆ ಸಂತ್ರಸ್ತೆಯ ತಾತ ಮಹದೇವನಾಯಕ (65) ಸ್ಥಳದಲ್ಲಿ ಸಾವನ್ನಪ್ಪಿದ್ದು ಇವರ ಸಾವಿಗೆ ಕೆ.ಆರ್.ನಗರ ಪೆÇಲೀಸರೇ ಕಾರಣ ಎಂದು ವಾಲ್ಮೀಕಿ ಸಮುದಾಯದ ಹಲವಾರು ರಾಜಕಾರಿಣಿಗಳು ಜಿಲ್ಲಾ ಪೆÇಲೀಸರ ವಿರುದ್ದ ಕಿಡಿ ಕಾರಿದ್ದರು ಹಾಗೂ ಪೆÇಲೀಸ್ ಠಾಣೆ ಎದುರು ಮೃತಪಟ್ಟ ಮಹದೇವನಾಯಕನ ಶವವಿಟ್ಟು ಪ್ರತಿಭಟನೆ ಮಾಡಲು ರಾಜ್ಯ ವಾಲ್ಮೀಕಿ ಸಮುದಾಯದ ಮುಖಂಡರು ನಿರ್ಧಾರ ಮಾಡಿದ್ದರು ಹಾಗೂ ಈ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಾ.ರಾ.ಮಹೇಶ್ ದೆಹಲಿಯಿಂದ ಪತ್ರಿಕೆಯೊಂದಿಗೆ ಮಾತನಾಡಿ ಜಿಲ್ಲಾ ಪೆÇಲೀಸರ ನಿರ್ಲಕ್ಷ್ಯದ ಬಗ್ಗೆ ಹಾಗೂ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಇಂತಹ ಅಮಾನವೀಯ ಘಟನೆ ನಡೆದರು ಕ್ರಮ ಕೈಗೊಳ್ಳದಿರುವ ಬಗ್ಗೆ ಉಗ್ರ ಪ್ರತಿಭಟನೆ ಮಾಡಿವುದಾಗಿ ಎಚ್ಚರಿಕೆ ನೀಡಿದ್ದರು.
ಕೆ ಆರ್ ನಗರ ತಾಲೂಕಿನ ಚಂದಗಾಲು ಗ್ರಾಮದ ಆಪ್ರಾಪ್ತೆ ಸಂತ್ರಸ್ತೆಯ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು, ಹಾಗೂ ಕೆ.ಆರ್.ನಗರ ಪೆÇಲೀಸರ ವಿರುದ್ದ ಎಸ್.ಸಿ., ಎಸ್.ಟಿ ದೌರ್ಜನ್ಯ ಕಾಯ್ದೆ,ಯಡಿ ದೂರು ದಾಖಲಿಸಿ ಬೇಕೆಂದು ಒತಾಯ ಮಾಡದ್ದಾರೆ.