ಸಸಿ ನೆಡುವುದಷ್ಟೇ ಅಲ್ಲ ನಿರ್ವಹಣೆ ಮಾಡಲು ಒತ್ತಾಯ
ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೯; ಮಳೆಗಾಲದಲ್ಲಿ ಸಸಿ ನೀಡುವುದು ಸ್ವಾಗತ ಆದರೆ ಯಾರು ಸಸಿಯನ್ನು ನೀಡುತ್ತಾರೋ ಮೂರು ವರ್ಷದವರೆಗೆ ಅವರೇ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಬೇಕು ಇಲ್ಲವಾದರೆ ಆ ನೆಟ್ಟ ಸಸಿ ಹಾಳಾಗಿ ಹೋಗಿ ಆರ್ಥಿಕ ನಷ್ಟ ಶ್ರಮದ ನಷ್ಟ ಹಾಗೂ ಪರಿಸರ ನಷ್ಟವಾಗುತ್ತದೆ ಎಂದು ದಾವಣಗೆರೆ ಜಿಲ್ಲೆ ನೆಲ ಜಲ ಹಾಗೂ ಪರಿಸರ ಆಂದೋಲನದ ಒಕ್ಕೂಟದ ಮುಖಂಡ ಬಲ್ಲೂರು ರವಿಕುಮಾರ್ ಒತ್ತಾಯಿಸಿದ್ದಾರೆ. ಯಾರು ಸಸಿ ನೀಡುವ ಕಾರ್ಯಕ್ರಮವನ್ನು ರೂಪಿಸುತ್ತಾರೋ ಅವರುಗಳು ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಆದ್ದರಿಂದ ಈ ವಿಷಯದಲ್ಲಿ ಅಧಿಕಾರಿವರ್ಗ ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿದೆ ಹಾಗೂ ಮಳೆಗಾಲದಲ್ಲಿ ಮಳೆಯ ನೀರನ್ನು ಸಂಗ್ರಹಿಸುವುದು ನಮ್ಮ ಜವಾಬ್ದಾರಿಯಾಗುತ್ತದೆ ಎಂದಿದ್ದಾರೆ ನಾನು ಕೂಡ ನನ್ನ ಕೆಬಿ ಬಡಾವಣೆ ಮನೆಯಲ್ಲಿ ಮಳೆ ಕೊಯ್ಲು ರೂಪಿಸಿದ್ದೇನೆ ಹಾಗೂ ಆಲಿ ವಾಸವಾಗಿರುವ ನಾಗನೂರು ಹೊಸ ಬಡಾವಣೆ ಇಲ್ಲಿ ವಾಸವಾಗಿದ್ದು ಇಲ್ಲಿಯೂ ಸಹ  ಸಂಪೂರ್ಣ ಮಳೆನೀರು ಕೊಯ್ಲು ರೂಪಿಸಿದ್ದೇನೆ ಹಾಗೂ ಗಿಡಗಳನ್ನು ಸಹ ನೆಟ್ಟಿದ್ದು ಇವುಗಳು ಸಹ ಒಂದು ವರ್ಷದ ಗಿಡಗಳಾಗಿರುತ್ತವೆ ಆದ್ದರಿಂದ ಎಲ್ಲರೂ ಸಹ ಮಳೆ ಕೊಯ್ಲು ಮತ್ತು ಸಸಿ ನೆಟ್ಟು ಮೂರು ವರ್ಷಗಳ ಕಾಲ ನೋಡಿಕೊಳ್ಳಬೇಕೆಂಬುದು ನಮ್ಮ ಸಮಿತಿಯ ಆಶಯವಾಗಿರುತ್ತದೆ ಅದರಂತೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಪ್ರದೇಶ ಹಾಗೂ ದಾವಣಗೆರೆ ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾಯತ್ ಇವರು ಸಹ ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಹಾಗೂ ಮೊದಲನೇ ಆದ್ಯತೆಯಾಗಿ ಸರ್ಕಾರಿ ಕಟ್ಟಡಗಳು ಮಳೆ ಕೊಯ್ಲನ್ನು ಮೂರು ತಿಂಗಳುರೂಪಿಸಿದರೆ ಒಂಬತ್ತು ತಿಂಗಳು ನೀರಿನ ಅಭಾವವಿಲ್ಲದೆ ಒಟ್ಟಾರೆ ದಾವಣಗೆರೆ ಜಿಲ್ಲೆಯಲ್ಲಿ 10 ಟಿಎಂಸಿ ನೀರನ್ನು ಉಳಿಸಬಹುದಾಗಿರುತ್ತದೆ ಇದನ್ನು ಜಿಲ್ಲಾಡಳಿತ ಹಾಗೂ ಸಾರ್ವಜನಿಕರು ಸಹಕರಿಸಿ ಈ ಕಾರ್ಯಕ್ರಮವನ್ನು ರೂಪಿಸುವುದು ಅತಿ ಮುಖ್ಯವಾಗಿದೆ ಎಂದಿದ್ದಾರೆ